(ತಾಯಿಯವರ ತೀವ್ರ ಅಸೌಖ್ಯದಿಂದಾಗಿ ’ದಿನಕ್ಕೊಂದು ಕವನ’ ಮಾಲೆಯನ್ನು ಮಧ್ಯೆಯೇ ತುಂಡರಿಸಬೇಕಾಯಿತು. ಅದಕ್ಕಾಗಿ ಕ್ಷಮೆ ಇರಲಿ. ಮತ್ತೀಗ ಮಾಲೆಯನ್ನು ಕೂಡಿಸಿ ಹೂ ಪೋಣಿಸುತ್ತಿದ್ದೇನೆ.)
ನನ್ನ ಜೀವನದಲ್ಲಿ
-----------------
ನನ್ನ ಜೀವನದಲ್ಲಿ
ಕಾಡುಮೇಡುಗಳಿಲ್ಲ
ಹಸಿರಿಲ್ಲ
ಕ್ರೂರಮೃಗಗಳ
ಉಸಿರೂ ಇಲ್ಲ
ಟಾರು ರಸ್ತೆಗಳಿಲ್ಲ
ವ್ಯವಸ್ಥೆಯಿಲ್ಲ
ಕಾರು-ಬಾರುಗಳ
ಅವಸ್ಥೆಯೂ ಇಲ್ಲ
ನನ್ನ ಜೀವನದಲ್ಲಿ
ಮರಗಿಡಗಳಿಲ್ಲ
ನೆರಳಿಲ್ಲ
ಇರುಳ ದೆವ್ವಗಳ
ಕೊರಳೂ ಇಲ್ಲ
ಮಹಲು ಸೌಧಗಳಿಲ್ಲ
ಸೂರಿಲ್ಲ
ಸೋರುವಿಕೆಗಳ
ದೂರೂ ಇಲ್ಲ
ನನ್ನ ಜೀವನದಲ್ಲಿ
ಗುಹೆ ಗಹ್ವರಗಳಿಲ್ಲ
ತಂಪಿಲ್ಲ
ಗುರುಗುಡುವ ಪಂಜಗಳ
ಕೆಂಪೂ ಇಲ್ಲ
ಕೋಟೆ ಕೊತ್ತಲಗಳಿಲ್ಲ
ಭದ್ರತೆಯಿಲ್ಲ
ಈಟಿ ಕತ್ತಿಗಳ
ಛಿದ್ರತೆಯೂ ಇಲ್ಲ
ನನ್ನ ಜೀವನದಲ್ಲಿ
ಎಲ್ಲ ಬಯಲು;
ಇಲ್ಲಗಳ
ಹರಹಿನಲಿ
ಇರುವಿಕೆಯು
ಬಯಲು
ಮಂಗಳವಾರ, ಜುಲೈ 28, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಚೆನ್ನಾಗಿದೆ.
ಪ್ರತ್ಯುತ್ತರಅಳಿಸಿಅತೀತ - ಬಯಲು.
ಪ್ರತ್ಯುತ್ತರಅಳಿಸಿಓದಿ ತುಂಬ ಸಂತ್ರುಪ್ತಿಯಾಯಿತು ಸರ್.
ಆನ೦ದ ಸರ್,
ಪ್ರತ್ಯುತ್ತರಅಳಿಸಿಈಗ ನಿಮ್ಮ ತಾಯಿಯವರ ಆರೋಗ್ಯ ಹೇಗಿದೆ ಸರ್ ?
ಎ೦ತಹ ಗಹನ ವಿಷಯವನ್ನು ಎಷ್ಟು ಸರಳ ವಾಗಿ ಮನ ಮುಟ್ಟುವ೦ತೆ ಹೇಳಿದಿರಿ ?
ತು೦ಬಾ ಒಳ್ಳೆಯ ಕವಿತೆ.
ಧನ್ಯವಾದಗಳು
ಪರಾಂಜಪೆ ಮತ್ತು ಶ್ರೀಕಾಂತ್ ಅವರಿಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿರೂಪಾ ಅವರೇ, ನನ್ನ ತಾಯಿಯವರ ಆರೋಗ್ಯ ಸುಧಾರಿಸುತ್ತಿದೆ. ದೊಡ್ಡ ಶಸ್ತ್ರಚಿಕಿತ್ಸೆಯ ಬಳಿಕ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೀಗ ಎಂಭತ್ತರ ಹರಯ. ನಿಮ್ಮ ಕಳಕಳಿಗಾಗಿ ಧನ್ಯವಾದ.
ತು೦ಬಾ ಅರ್ಥ ಗರ್ಭಿತ ಕವಿತೆ .. ಪ್ರತಿ ಸಾಲು ಮೆಲುಕು ಹಾಕುವ೦ತೆ ಇದೆ ..
ಪ್ರತ್ಯುತ್ತರಅಳಿಸಿಮೆಚ್ಚುಗೆಗಾಗಿ ಧನ್ಯವಾದ ರೂಪಾ ಅವರೇ.
ಪ್ರತ್ಯುತ್ತರಅಳಿಸಿಆನ೦ದ ಸರ್,
ಪ್ರತ್ಯುತ್ತರಅಳಿಸಿನಿಮ್ಮ ತಾಯಿಯವರ ಆರೋಗ್ಯ ಸುಧಾರಿಸುತ್ತಿದೆ ಎ೦ದು ತಿಳಿದು ಸ೦ತೊಷವಾಯಿತು . ಬೇಗ ಚೇತರಿಸಿಕೊಳ್ಳುವ೦ತೆ ಆಗಲಿ ಎ೦ದು ಹಾರೈಸುತ್ತೇನೆ ..