ಗುರುವಾರ, ಜುಲೈ 30, 2009

ದಿನಕ್ಕೊಂದು ಕವನ: (೧೦) ಜಗಧರ್ಮ

ಸೂರ್ಯನ ಉದಯಾಸ್ತಗಳ
ದಿಕ್ಕು-ದೆಸೆ, ಹೊತ್ತು-ಗೊತ್ತು
ಎಲ್ಲರಿಗೂ ಗೊತ್ತು; ಅದೇ
ಚಂದ್ರನ ಬಗ್ಗೆ ಹೇಳಿ ನೋಡುವಾ!

ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತೇವೆ ನಾವು
ಅವ ನಮ್ಮ ಬಾಸು. ಅದೇ
ಚಂದ್ರ ನಮಗೆ ಪ್ರದಕ್ಷಿಣೆ ಹಾಕುತ್ತಾನೆ
ಅವ ನಮ್ಮ ಗುಲಾಮ. ಅದೇ
ಪಾಯಿಂಟು! ಗುಲಾಮನ ಚಲನವಲನ
ಯಾರಿಗೆ ಬೇಕು!

ಸೂರ್ಯನ ಬಿಸಿಲು-ಧಗೆ
ಬೇಡ ನಮಗೆ
ಚಂದ್ರನ ತಂಪು-ಬೆಳಕು
ಬೇಕು.
ಆಟಕ್ಕುಂಟು ಚಂದ್ರ
ಲೆಕ್ಕಕ್ಕಿಲ್ಲ.
ಗುಲಾಮರ ಹಣೆಬರಹ ಇಷ್ಟೆ!

ಸೂರ್ಯ
ಹುಟ್ಟುತ್ತಾನೆ ಪ್ರತಿನಿತ್ಯ
ಇಡಿಇಡಿಯಾಗಿ,
ಸರಿಸುಮಾರು
ಅದೇ ಹೊತ್ತಿಗೆ,
ಅದೇ ದಿಕ್ಕಿನಲ್ಲಿ.
ಮುಳುಗುವುದೂ ಹಾಗೇ.
ಅದೇ, ಚಂದ್ರ?

ಎಂದೇ
ಅವ ಬಾಸು
ಇವ ಗುಲಾಮ!
ಜಗದಾಚೆಗೂ
ಅನ್ವಯ
ನಮ್ಮ
ಜಗಧರ್ಮ!

2 ಕಾಮೆಂಟ್‌ಗಳು:

  1. ಆನ೦ದ ಸರ್,
    ಎ೦ತ ಅರ್ಥ ಗರ್ಭಿತ ಕವಿತೆ .. ಎರಡು ಕವಿತೆ ಗಳು ತು೦ಬಾ ಒಳ್ಳೆಯದಿದೆ .. ಎರಡು ತು೦ಬಾ ಕಾಡುವ ಕವಿತೆಗಳು . ಆಧ್ಯಾತ್ಮ ವನ್ನು ಎಷ್ಟು ಸರಳ ವಾಗಿ ಹೇಳಿದ್ದಿರಿ ... ಧನ್ಯವಾದಗಳು

    ಪ್ರತ್ಯುತ್ತರಅಳಿಸಿ