-೧-
ಅವನೊ, ಇವನೊ, ನೀನೊ, ನಾನೊ,
ಲಕ್ಷದ ಮೇಲಷ್ಟು ಕೊಟ್ರಾಯ್ತು, ನ್ಯಾನೊ!
ಅಡ್ವಾನ್ಸ್ ಕಟ್ಟೋದ್ ಬರೀ ಮೂರ್ಸಾವ್ರ
ಬೋರೇಗೌಡ್ನೂ ಇನ್ನ್ ಕಾರ್ ಸಾವ್ಕಾರ!
-೨-
(’ಗೇರ್ ಗೇರ್ ಮಂಗಣ್ಣ’ ಧಾಟಿಯಲ್ಲಿ)
ಕಾರ್ ಕಾರ್ ತಿಮ್ಮಣ್ಣ
ಚೀಪ್ ರೇಟಿಗ್ ನಿಂಗಣ್ಣ
ಗೇರ್ ಈಸೀ ನೋಡಣ್ಣ
ಕಾರ್-ಬಾರ್ ಮಾಡಣ್ಣ
-೩-
ಮುಂದೇನಾಗುತ್ತೆ
ನಮ್ಮ್ ರಸ್ತೆ ಕಥೆ?
ಗುಂಪುಗೂಡ್ತವೆ ಟಾಟಾ ಕಂಪ್ನಿ ನ್ಯಾನೊ ಕಾರು
ಸೊಂಪಾಗಿ ರಸ್ತೇಲವದ್ದೇ ಕಾರುಬಾರು
ತಂಪಾಗಿ ಕೂತಿರ್ತಾರೆ ಜಾಮ್‌ನಲ್ಲಿ ಎಲ್ರೂ!
ಕೆಂಪುಕಣ್ಣು ಮಾಡ್ಕೋತಾರೆ ಟ್ರಾಫಿಕ್ ಪೋಲೀಸ್ರು!
ಟಾಟಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟಾಟಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಗಳವಾರ, ಮಾರ್ಚ್ 24, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
