ವೈ.ಎಸ್. ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ರಾಜ್ಯದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡವರ ಸಂಖ್ಯೆ ಮತ್ತು ಹೊಸದಾಗಿ ನಿರ್ಮಿಸಲಾದ ಚರ್ಚ್‌ಗಳ ಸಂಖ್ಯೆ ಎಷ್ಟೆಂದು ಓದುಗ ಮಿತ್ರರೊಬ್ಬರು ಕೇಳಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ಆಂಧ್ರದಲ್ಲಿ ಕ್ರಿಶ್ಚಿಯನ್ನರ ಸಂಖ್ಯೆ ಕಡಿಮೆಯಾಗತೊಡಗಿದೆ! ಸರ್ಕಾರದನುಸಾರ, ಆಂಧ್ರದಲ್ಲಿ ೧೯೯೧ರಲ್ಲಿ ೧೨ ಲಕ್ಷದಷ್ಟಿದ್ದ ಕ್ರಿಶ್ಚಿಯನ್ ಜನಸಂಖ್ಯೆ ೨೦೦೯ರ ಮಾರ್ಚ್ ವೇಳೆಗೆ ೧೧೮೧೯೧೭ಕ್ಕೆ ಇಳಿದಿದೆ! ಆದರೆ, ’ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್’ ಪ್ರಕಾರ ಮಾರ್ಚ್ ೨೦೦೯ರ ವೇಳೆಗೆ ಆಂಧ್ರದಲ್ಲಿದ್ದ ಕ್ರಿಶ್ಚಿಯನ್ನರ ಸಂಖ್ಯೆ ೭೩೫೨೧೬೦! (ಇದು ಆ ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ ೯.೬ರಷ್ಟಾಗುತ್ತದೆ!) ಸತ್ಯವು ಈ ಎರಡು ಸಂಖ್ಯೆಗಳ ನಡುವೆ ಇರಬಹುದು.
ಒಂದು ಅಂಶವಂತೂ ಸ್ಪಷ್ಟ. ರೆಡ್ಡಿ ಆಡಳಿತದಲ್ಲಿ ಭರ್ಜರಿಯಾಗಿ ಮತಾಂತರ ನಡೆದಿದೆ. ಹಳ್ಳಿಗಳಲ್ಲಿ ಇದರ ಪ್ರಮಾಣ ಹೆಚ್ಚು. ಎಷ್ಟೋ ಮತಾಂತರಗಳು ಸರ್ಕಾರಿ ಕಡತಗಳಲ್ಲಿ ಪರಿಗಣನೆಯಿಂದ ನುಣುಚಿಕೊಂಡಿವೆ.
(ಆಂಧ್ರದ) ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲೂ ೧೦೦೦೦ಕ್ಕಿಂತ ಅಧಿಕ ಹಾಗೂ ಪ್ರತಿ ಲೋಕಸಭಾ ಮತಕ್ಷೇತ್ರದಲ್ಲೂ ಒಂದು ಲಕ್ಷಕ್ಕಿಂತ ಅಧಿಕ ಕ್ರಿಶ್ಚಿಯನ್ ಮತದಾರರಿದ್ದಾರೆಂದು ’ಯುನೈಟೆಡ್ ಕ್ರಿಶ್ಚಿಯನ್ ಅಸೋಸಿಯೇಷನ್’ ಅಧ್ಯಕ್ಷ ಕೆ. ಡೇವಿಡ್ ರಾಜು ಅವರು ಈಗ್ಗೆ ಆರು ತಿಂಗಳ ಕೆಳಗೇ ಹೇಳಿದ್ದರು.
ರೆಡ್ಡಿ ಆಡಳಿತಾವಧಿಯಲ್ಲಿ ಮತಾಂತರದ ವೇಗದಲ್ಲೇ ಆಂಧ್ರದಲ್ಲಿ ಚರ್ಚ್‌ಗಳೂ ತಲೆಯೆತ್ತಿದವು. ರೆಡ್ಡಿ ಆಡಳಿತಾವಧಿಯಲ್ಲಿ ತಿರುಮಲದಲ್ಲಿ ಸಹಸ್ರಕಂಬಗಳ ಮಂಟಪವನ್ನು ಕೆಡವಲಾಯಿತಲ್ಲದೆ ಸಪ್ತಗಿರಿಗಳ ಪೈಕಿ ಐದು ಬೆಟ್ಟಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಯತ್ನಿಸಲಾಯಿತು.
ಭದ್ರಾಚಲಂ, ಶ್ರೀಶೈಲ, ಸಿಂಹಾಚಲಂ ಮೊದಲಾದ ಕೇತ್ರಗಳಲ್ಲಿ ಅಪಾರ ಪ್ರಮಾಣದ ಭೂಮಿಯು ರೆಡ್ಡಿ ಸರ್ಕಾರದ ದಯೆಯಿಂದಾಗಿ ಕ್ರಿಶ್ಚಿಯನ್ ಮಿಷನರಿಗಳ/ಸಂಸ್ಥೆಗಳ ವಶವಾಗಿದೆ.
ಓದುಗ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ನೀಡಿದ್ದೇನೆ ಅಷ್ಟೆ. ಓದುಗ ಸ್ನೇಹಿತರು ’ಗುಳಿಗೆ’ಗಾಗಿ ಸೂಚಿಸಿರುವ ಇತರ ಅನೇಕ ವಿಷಯಗಳು ನನಗೆ ಬರೆಯಲು ಪ್ರೇರಣೆ ನೀಡುತ್ತಿವೆಯಾದರೂ ಸಮಯಾಭಾವದಿಂದಾಗಿ ಬರೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ನಾನು ವಿವಿಧ ಪತ್ರಿಕೆಗಳಿಗೆ ಕಳಿಸಿದ್ದು ಅಲ್ಲಿ ಇನ್ನು ಒಂದು-ಒಂದೂವರೆ ತಿಂಗಳಿನಲ್ಲಿ ಪ್ರಕಟವಾಗುವ ಲೇಖನಗಳನ್ನು ಆಯಾ ಸಂದರ್ಭದಲ್ಲಿ ’ಗುಳಿಗೆ’ಯಲ್ಲೂ ದಾಖಲಿಸುವುದನ್ನು ಹೊರತುಪಡಿಸಿ ಸದ್ಯಕ್ಕಂತೂ ಹೊಸ ಬರಹಗಳನ್ನು ಬರೆಯಲು ಬಿಡುವಿಲ್ಲವಾಗಿದೆ. ಓದುಗ ಸ್ನೇಹಿತರೆಲ್ಲರ ಕ್ಷಮೆಯಿರಲಿ.
ಭಾನುವಾರ, ಸೆಪ್ಟೆಂಬರ್ 13, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬಲವಂತದ ಮತಾಂತರಕ್ಕೆ ನನ್ನ ತೀವ್ರವಾದ ವಿರೋಧ ಇದ್ದೇ ಇದೆ. ಆದರೆ ಸ್ವ ಇಚ್ಛೆಯಿಂದ ಮತಾಂತರ ಹೊಂದುವುದನ್ನು ವಿರೋದಿಸುವುದಕ್ಕೂ ನನ್ನ ವಿರೋಧವಿದೆ. ಮತಾಂತರ ಹೊಂದುವವರು ಆರ್ಥಿಕ ಮತ್ತು ಸಾಮಾಜಿಕ ಕಾರಣದಿಂದ ಮತಾಂತರ ಹೊಂದುತ್ತಿದ್ದಾರೆ ಎಂದರೆ ನಾವು ಒಪ್ಪಿಕೊಳ್ಳಬೇಕಾಗುತ್ತದೆ, ನಮ್ಮಲ್ಲೇ ತಪ್ಪಿದೆ' ಎಂದು. ರಾಜಶೇಕರ ರೆಡ್ಡಿಯವರ ವೈಭವ, ಹಠಾತ್ ನಿರ್ಗಮನ ಇವುಗಳ ಹಿನ್ನೆಲೆಯಲ್ಲಿ ನಿಮ್ಮ ಲೇಖನ ನಮ್ಮನ್ನು ಚಿಂತಿಸುವಂತೆ ಮಾಡಿದೆ.
ಪ್ರತ್ಯುತ್ತರಅಳಿಸಿನೀವು ಹೇಳುವುದು ಸರಿ, ಡಾ.ಸತ್ಯನಾರಾಯಣ ಅವರೇ. ಸ್ವಇಚ್ಛೆಯ ಮತಾಂತರವನ್ನು ವಿರೋಧಿಸುವ ಹಕ್ಕು ಯಾರಿಗೂ ಇಲ್ಲ. ’...ನಮ್ಮಲ್ಲಿ ತಪ್ಪಿದೆ’ ಎಂಬುದೂ ವಾಸ್ತವ. ಆ ತಪ್ಪನ್ನು ನಾವು ತಿದ್ದಿಕೊಳ್ಳಬೇಕು.
ಪ್ರತ್ಯುತ್ತರಅಳಿಸಿ