ಬುಧವಾರ, ಸೆಪ್ಟೆಂಬರ್ 30, 2009

ಸರಕಾರದ ಯಶಸ್ಸಿಗೆ ಶಾಸ್ತ್ರಿ ಸೂತ್ರ

ಸೂತ್ರ ಹರಿದ ಗಾಳಿಪಟದಂತಾಗಿರುವ ಕರ್ನಾಟಕ ಸರ್ಕಾರದ ಯಶಸ್ಸಿಗೆ ನರೇಂದ್ರಮೋದಿಯವರು ಕೆಲವು ಸೂತ್ರಗಳನ್ನು ಉಪದೇಶಿಸಿದ್ದಾರೆ. ಪಾಪ, ಗುಜರಾತ್‌ನ ಮೋದಿಗೇನು ಗೊತ್ತು ಕರ್ನಾಟಕ ಸರ್ಕಾರದ ಯಶಸ್ಸಿನ ಸೂತ್ರ. ಕರ್ನಾಟಕದ ರಾಜಧಾನಿಯಲ್ಲೇ ವಾಸವಾಗಿರುವ ಅಪ್ರತಿಮ ರಾಜಕೀಯ ವಿಶ್ಲೇಷಕನಾದ ನಾನು ಹೇಳುತ್ತೇನೆ ಕೇಳಿ, ನಮ್ಮ ಬಿಜೆಪಿ ಸರ್ಕಾರವು ಯಶಸ್ಸು ಹೊಂದಲು ಅನುಸರಿಸಬೇಕಾದ ಸಪ್ತಸೂತ್ರ:

* ಬೆಳೆದ ಬೆಳೆಗೆ ರೈತನಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಗ್ರಾಹಕನಿಗೋ, ದವಸಧಾನ್ಯ, ತರಕಾರಿ, ಹಣ್ಣುಹಂಪಲು ಕೈಗೆಟುಕುತ್ತಿಲ್ಲ. ಮಧ್ಯೆ ಮಧ್ಯವರ್ತಿಗಳು ದುಡ್ಡು ಬಾಚುತ್ತಿದ್ದಾರೆ. ಆದ್ದರಿಂದ ಮಧ್ಯವರ್ತಿಗಳಿಂದ ನಿಯಮಿತವಾಗಿ ಪಾರ್ಟಿ ಫಂಡ್ ವಸೂಲುಮಾಡತಕ್ಕದ್ದು.

* ರೈತನ ಏಳಿಗೆಗಾಗಿ ಸಮಾರಂಭಗಳಲ್ಲಿ ಒಂದು ರೈತಗೀತೆ ಹಾಡಿಸಿ ಮೈಸೂರು ದಸರಾದಲ್ಲಿ ’ಉಳುವಾ ಯೋಗಿಯ ನೋಡಲ್ಲಿ’ ನೃತ್ಯ ಮಾಡಿಸಿಬಿಟ್ಟರೆ ಸಾಲದು. ರೈತನ ಪರವಾಗಿ ಕನ್ನಡದಲ್ಲಿ ಎಷ್ಟು ಹಾಡುಗಳಿವೆಯೋ ಅಷ್ಟನ್ನೂ ಹಾಡಿಸಿ ಕುಣಿಸತಕ್ಕದ್ದು. ಇನ್ನೂ ಬೇಕೆಂದರೆ ಸಂಘಪರಿವಾರದ ಸಾಹಿತಿಗಳು ರೈತರಾಷ್ಟ್ರಭಕ್ತಿಯ ಗೀತೆಗಳನ್ನು ರಚಿಸಿಕೊಡುತ್ತಾರೆ.

* ಮುಖ್ಯಮಂತ್ರಿಗಳು ದಿನಕ್ಕೊಂದು ಹೊಸ ಯೋಜನೆ ಪ್ರಕಟಿಸತಕ್ಕದ್ದು ಮತ್ತು ಕನಿಷ್ಠಪಕ್ಷ ದಿನಕ್ಕೆರಡು ಮಠಮಂದಿರ ಸಂಘಸಂಸ್ಥೆಗಳಿಗೆ ಸಹಾಯಧನ ಘೋಷಿಸತಕ್ಕದ್ದು.

* ರಸ್ತೆ ಸಾರಿಗೆ ಇಲಾಖೆ ವತಿಯಿಂದ ದಿನಕ್ಕೊಂದು ನಮೂನೆಯ ಬಸ್ಸನ್ನು ರಸ್ತೆಗಿಳಿಸುತ್ತ ಪ್ರಯಾಣಿಕರನ್ನು ಆಕರ್ಷಿಸುವ ಷೋಕಿ ಮೆರೆಯತಕ್ಕದ್ದು.

* ಉದ್ದೇಶಿತ ಸಂಸ್ಕೃತ ವೇದ ವಿಶ್ವವಿದ್ಯಾಲಯಕ್ಕೆ ಮಹಾನ್ ಸಂಸ್ಕೃತ ವಿದ್ವಾನ್ ರಾಮಚಂದ್ರಗೌಡರನ್ನು ಖಾಯಂ ಕುಲಪತಿಯನ್ನಾಗಿ ನೇಮಿಸತಕ್ಕದ್ದು.

* ಸರ್ಕಾರದ ಲೋಪದೋಷಗಳ ಬಗ್ಗೆ ಮತ್ತು ಪ್ರತಿಪಕ್ಷಗಳ ಆರೋಪಗಳ ಬಗ್ಗೆ ಪತ್ರಕರ್ತರು ಏನೇ ಪ್ರಶ್ನೆ ಕೇಳಲಿ, ನಮ್ಮ ಮುಖ್ಯಮಂತ್ರಿಯವರು, "ಈ ರಾಜ್ಯದ ಐದೂವರೆ ಕೋಟಿ ಜನರಿಗೆ ನಿಜ ಏನು ಅನ್ನೋದು ಗೊತ್ತು", ಎಂಬ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದಾರೆ. ಬಲು ಜಾಣ್ಮೆಯ ಉತ್ತರ! ಅದನ್ನೇ ಮುಂದುವರಿಸಿಕೊಂಡುಹೋಗತಕ್ಕದ್ದು.

* ಯುವಕರ ಕೈಗೆ ರಾಜ್ಯದ ಆಡಳಿತ ಕೊಡಬೇಕಾದ್ದು ಇಂದಿನ ಅಗತ್ಯ. ನಮ್ಮ ಮುಖ್ಯಮಂತ್ರಿಗಳು ಈಗಾಗಲೇ ತಮ್ಮ ಯುವಪುತ್ರರಿಬ್ಬರ ಕೈಗೆ ಭಾಗಶಃ ಆಡಳಿತವನ್ನು ಕೊಟ್ಟಿರುವುದು ಶ್ಲಾಘನೀಯ. ಸಂಪೂರ್ಣ ಆಡಳಿತವನ್ನು ಅವರಿಗೊಪ್ಪಿಸಿಬಿಡುವ ಮೂಲಕ ಆ ಯುವಪುತ್ರರತ್ನರಿಬ್ಬರು ಸ್ವ-ರಾಜ್ಯದ ಏಳಿಗೆಗಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಧನಸಂಗ್ರಹಣೆಯಲ್ಲಿ ತೊಡಗಲು ನೆರವಾಗತಕ್ಕದ್ದು.

ಈ ಸಪ್ತಸೂತ್ರಗಳನ್ನು ಅನುಷ್ಠಾನಕ್ಕೆ ತಂದರೆ ಸಾಕು, ನಮ್ಮ ಹಾಲಿ ಮುಖ್ಯಮಂತ್ರಿಗಳೂ ಅವರ ಪುತ್ರದ್ವಯರೂ ರಾಜಕಾರಣದಲ್ಲಿ ಭರ್ಜರಿ ಆಯುರಾರೋಗ್ಯ ಐಶ್ವರ್ಯ ಹೊಂದಿ ಶೋಭಿಸುವರು.

15 ಕಾಮೆಂಟ್‌ಗಳು:

  1. ಕಟುವಾದ ವ್ಯಂಗ್ಯದಲ್ಲಿ ನಿಜ ಹೇಳುವ ಧೈರ್ಯ ಮಾಡಿದ ನಿಮಗೆ ಅಭಿನಂದನೆಗಳು..

    ಪ್ರತ್ಯುತ್ತರಅಳಿಸಿ
  2. ಮಾನ್ಯ ಪುರುಷೋತ್ತಮ ಬಿಳಿಮಲೆ ಅವರೇ,
    ತಮ್ಮಂಥ ವಿದ್ವಾಂಸರ ಪ್ರತಿಕ್ರಿಯೆ, ಮೆಚ್ಚುಗೆ ಗಳಿಸಿದ ನಾನು ಧನ್ಯ!
    ತಮಗೆ ನನ್ನ ಹೃತ್ಪೂರ್ವಕ ಧನ್ಯವಾದ.

    ಪ್ರತ್ಯುತ್ತರಅಳಿಸಿ
  3. ಆನ೦ದ ರಾಮ ಶಾಸ್ತ್ರಿಗಳೇ, ನನ್ನದು ಕೆಲವು ಸಲಹೆಗಳು ಇವೆ

    ೧. ಪ್ರತಿ ತಿ೦ಗಳು ೧೦೦೦ ಬಸ್ ಗಳನ್ನು ಖರೀದಿಸಿ, ಅದರ ಕಮಿಷನ್ ನಲ್ಲಿ ಸಾರೀಗೆ ಸಚೀವರು ಅಭಿವೃದ್ದಿಯನ್ನು ಹೊ೦ದಬೇಕು.

    ೨. ವಿರೋಧ ಪಕ್ಷದವರನ್ನು ಬ೦ಧಿಸಿ ಕೂಡಿ ಹಾಕಲು ಹೊಸ ನಾಯಿ, ಹ೦ದಿ ಶೆಡ್ ಗಳನ್ನು ನಿರ್ಮಿಸಬೇಕು.

    ಈ ನವಸೂತ್ರಗಳನ್ನು ಪಾಲಿಸಿದರೆ ಅವರು ಅಭಿವೃದ್ದಿಯನ್ನು ಹೊ೦ದುವರು.

    ಪ್ರತ್ಯುತ್ತರಅಳಿಸಿ
  4. ದಶಮ ಸೂತ್ರವನ್ನು ನಾನು ಕೊಡುವೆ ಶಾಸ್ತ್ರಿಗಳೇ,
    ಹೊಸ ಹೊಸ ಖಾತೆಗಳನ್ನು ಹುಟ್ಟು ಹಾಕಿ ಎಲ್ಲ ಶಾಸಕರಿಗೂ ಸಚಿವ ಸ್ಥಾನ ಕೊಡತಕ್ಕದ್ದು. ಇದರಿಂದ ಭಿನ್ನಮತ ತಡೆಯಬಹುದು.

    ಪ್ರತ್ಯುತ್ತರಅಳಿಸಿ
  5. ಆನ೦ದ ಸರ್
    ಸರಿಯಾಗಿ ಹೇಳಿದ್ದಿರಿ . ಈ ಲೇಖನವನ್ನು ಹಾಗು ಪ್ರತಿಕ್ರಿಯಲ್ಲಿ ಹೇಳಿದ ದಶ ಸೂತ್ರವನ್ನು ಓದಿ ಯಾದರು ನಮ್ಮ ಯಡ್ಡಿ ಗೆ ಬುದ್ದಿ ಬರುವುದೇ ಅಥವಾ ನನ್ನ ಕುದುರೆಗೆ ೩ ಕಾಲು ಎ೦ದು ೪ ವರ್ಷ ಕಾಲ ಕಳೆಯುತ್ತಾರೋ ಯಾರಿಗೆ ಗೊತ್ತು ?
    ಬರಹ ಸಕಾಲಿಕವಾಗಿ ಇದೆ .
    ವ೦ದನೆಗಳು.

    ಪ್ರತ್ಯುತ್ತರಅಳಿಸಿ
  6. ದಶ ಸೂತ್ರಗಳನ್ನು ಪಾಲಿಸಬೇಕಾದ ’ಬೂಸಿಯ’ ನಿನ್ನೆ ಏಕಾದಶಿ ಆಚರಿಸಿ ಇವತ್ತು ದ್ವಾದಶಿ ಪಾರಾಯಣ ಮಾಡುತ್ತಿದ್ದಾರಂತೆ. ಪಾರಾಯಣ ಮುಗಿಯಲಿ. ಅನಂತರ ಅವರ ದಶಾವತಾರ ಇದ್ದದ್ದೇ!
    ಸ್ಫೂರ್ತಿದಾಯಕ ಮಿತ್ರತ್ರಯರಿಗೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ವಿಕಾಸ್ ಹೆಗಡೆಯವರೇ,
    ಸ್ವಾಗತ. ಕ್ಷ-ಕಿರಣದ ನೋಟಕ್ಕಾಗಿ ಮೆಚ್ಚುಗೆ ಸಹಿತ ಧನ್ಯವಾದ.

    ಪ್ರತ್ಯುತ್ತರಅಳಿಸಿ
  8. ಆಹಾ...! ಎಂತಹ ಉತ್ತಮ ಸೂತ್ರಗಳು...! ಪಾಲಿಸಿದಲ್ಲಿ ಯಡಿಯೂರಪ್ಪನವರ ಸರ್ವತೋಮುಖ ಅಭಿವೃದ್ಧಿ ಖಂಡಿತಾ ಸಾಧ್ಯ... ವ್ಯಂಗ್ಯದ ಮೂಲಕ ಸರಕಾರವನ್ನ ತರಾಟೆಗೆ ತೆಗೆದುಕೊಂಡಿದ್ದೀರಿ... ಸಪ್ತ ಶಾಸ್ತ್ರೀ ಸೂತ್ರಗಳ ಜೊತೆ ಪ್ರತಿಕ್ರಿಯೆಗಳಲ್ಲಿನ ಸೂತ್ರಗಳೂ ಸೇರಿಕೊಂಡರೆ ರಾಜ್ಯದಲ್ಲಿ ಸುವರ್ಣಯುಗ ಆರಂಭವಾಗುವುದರಲ್ಲಿ ಸಂಶಯವೇ ಇಲ್ಲ...
    ಅಭಿನಂದನೆಗಳು..

    ಪ್ರತ್ಯುತ್ತರಅಳಿಸಿ
  9. ಸಾರ್,
    ಇದು ನಿಮಗೆ ನೀವೇ ಮಾಡ್ತಿರುವ ಹಾಸ್ಯವೋ ಅಥ್ವಾ ನಿಮಗೆ ಇತರರು ಮಾಡ್ತಿರೋ ಹಾಸ್ಯವೋ ?

    ಮೊದಲ ಪಾಯಿಂಟ್ ಸರಿ ಇತ್ತು ಆಮೇಲೆ ಬರಹ ದಿಕ್ಕು ತಪ್ಪಿದೆ ಅನ್ನಿಸ್ತು.
    ಅಥ್ವಾ ಮೊದಲ ಪಾಯಿಂಟ್ ಮಾತ್ರ ದಿಕ್ಕು ತಪ್ಪಿ ಉಳಿದದ್ದೆಲ್ಲಾ ಸರಿಯಾಗಿದೆಯೋ?

    ಎರಡನ್ನೂ ಮಿಕ್ಸ್ ಮಾಡಿ ನಮ್ಮ ತಲೆಗೆ ಹುಳ ಬಿಡ್ತಿದ್ದೀರ. ಜೈ ಹೋ

    ಪ್ರತ್ಯುತ್ತರಅಳಿಸಿ
  10. ಸುವರ್ಣಯುಗದ ನಿಖರ ಭವಿಷ್ಯ ನುಡಿದಿರುವ ದಿಲೀಪರಿಗೆ ಧನ್ಯವಾದ.
    ’ಹಾಸ್ಯವೋ ಅಥ್ವಾ..’ ಅಂತ ಕೇಳಿದಿರಾ ಲೋಹಿತ್, ಅಧ್ವಾನದ ಹಾಸ್ಯ ಅಂತಿಟ್ಕೊಳ್ಳಿ. :-)

    ಪ್ರತ್ಯುತ್ತರಅಳಿಸಿ
  11. ಸರ್ಕಾರದ ಮಾಡುತ್ತಿರುವ ಹಾಸ್ಯಕ್ಕೆ ಸರಿಯಾದ ಉತ್ತರ ಸರ್.

    ಪ್ರತ್ಯುತ್ತರಅಳಿಸಿ
  12. naanu yedyurappanavara abhimaaniyalla endhu modhalu spashtapadisutta bareyalu aarambhisuththene.

    swamee, eegina sarkarada kurithu teeke, vyangya, budhdhivaada yellavoo barabekaadhdhe. Aadhare, idhuvaregoo nammannaLida mahaa purusharu yaava reethiyalli bereyaagi kaanisidhdhare swamee?

    jaathi vaishamya, bhedha huttu haakidha Devaraja Urs avaradhenu kaarubaaru kadimeyaa?

    Linganmakki yojaneyalli kotyanthara haNa thindavarannu hattiradalli ittukondu beLesida, bhrashtachaaravannu praarambhisida Nijalingappanavaru saachaana?

    Gundu Rao, Bangarappa, Veerappa Moily, Deve Gowda, Ramakrishna Hegde ivarella yaava reethi smaraNiyaru swaami?

    obbobbaradoo ondondu bruhatkathe, mahabharatha, Bhagavatha charithregale.

    innu Dharma Singh, Kumaraswamy, J.H. Patel enthahavarendu goththillada kannadigare illa.

    ottinalli yaaroo yaarannoo dooshisuva, beraLu maadi thorisuva haage illa.

    eega yedyurappanavaradu avarellara MUNDHUVAREDA BHAAGA ashte.

    ಪ್ರತ್ಯುತ್ತರಅಳಿಸಿ
  13. ನಿಮ್ಮ ಮಾತು ಅಕ್ಷರಶಃ ಸತ್ಯ r ಅವರೇ.
    ಈ ಹಿಂದಿನ ಸರ್ಕಾರಗಳನ್ನೂ ನಾನು ಟೀಕಿಸಿದ್ದೇನೆ. ನಾನು ಟೀಕಿಸಿದಷ್ಟು ಕನ್ನಡದ ಇನ್ನಾವ ಹವ್ಯಾಸಿ ಪತ್ರಕರ್ತ ಲೇಖಕನೂ ಟೀಕಿಸಿಲ್ಲ. ಟೀಕೆಯ ಉದ್ದೇಶಗಳು ಎರಡು. ಒಂದು, ಜನಜಾಗೃತಿ ಹುಟ್ಟಿಸುವುದು. ಎರಡು, ಹೇಳಿಕೇಳಿ ನಾನೊಬ್ಬ ಹಾಸ್ಯವಿಡಂಬನಾ ಸಾಹಿತ್ಯ ಕೃಷಿಕ. ’ಗುಳಿಗೆ’ ಆರಂಭವಾದದ್ದು ಹಾಸ್ಯವಿಡಂಬನೆಯಿಂದಲೇ.

    ಪ್ರತ್ಯುತ್ತರಅಳಿಸಿ