ಐಶ್ವರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಐಶ್ವರ್ಯ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಮಾರ್ಚ್ 20, 2009

ಐಶ್ ವಿಷ್ಯ ಐಸಾ!

ಎರಡು ವರ್ಷಗಳ ಕೆಳಗೆ
ಐಶ್ ಎಂಬ
ಐಶ್ಕಾಂತದ ಸೆಳೆತಕ್ಕೆ ಸಿಕ್ಕು
ಅಭಿಷೇಕು
ಶೇಕು!

ಅಭಿಷೇಕಿನ
ಶಾಕಿಗೆ
ಕರಗಿ
ಐಸ್
ಪಾನಿ ಪಾನಿ!

ಏನ್ಮಾಡೋದು ಸ್ವಾಮೀ,
ಜವಾನಿ
ದಿವಾನಿ!

ಪರಿಣಾಮ
ಸುಖಾಂತ.
ಅಭಿ-
-ಶೇಕ್ ಸಾಹೇಬ ಆದ
ಐಶ್-ಕಾಂತ.

ಅಮಿತಾಭನಿಗೆ ಅಮಿತಾನಂದ;
ಜಯಾ ಮುಖದಲ್ಲಿ ಜಯ.
ಕೃಷ್ಣರಾಜ ರೈ ಖುಷಿಯೇ ಸೈ;
ವೃಂದಮ್ಮನೋರು?
ಕುಡಿದರು ಹಾಲುಖೀರು.

ಐಶ್-ಅಭಿ ಇಬ್ಬರೂ
ಕೋಟ್ಯಧಿಪತಿಗಳಾದ್ದರಿಂದ
ಇಬ್ಬರದ್ದೂ ಈಗ
ಐಶಾರಾಮಿ ಬದುಕು.

ಸಲ್ಮಾನ್, ವಿವೇಕ್ ಮಾತ್ರ
ಸಲ್ಲಲಿಲ್ಲ
ಯದಕೂ!

(ಯದಕೂ=ಯಾವುದಕ್ಕೂ. ದಾವಣಗೆರೆ ಭಾಷೆಯಲ್ಲಿ.)