ಶುಕ್ರವಾರ, ಜೂನ್ 19, 2009

ಕೃಷ್ಣಯ್ಯ ಶೆಟ್ಟರ ಕಥೆ!

ರಾಜ್ಯ ಸರ್ಕಾರದ ಮುಜರಾಯಿ ಖಾತೆ ಸಚಿವರಾಗಿದ್ದ ಕೃಷ್ಣಯ್ಯ ಶೆಟ್ಟರಿಂದ ರಾಜೀನಾಮೆ ಪಡೆದು ’ಆಪರೇಷನ್ ಕಮಲಾಗತ’ ಸೋಮಣ್ಣನಿಗೆ ಸಚಿವ ಸಾನ ನೀಡಿ ಕೃಷ್ಣಯ್ಯ ಶೆಟ್ಟರನ್ನು ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಈ ಬೆಳವಣಿಗೆಯಲ್ಲಿ ನಾವು ಗಮನಿಸಬಹುದಾದ ಮೋಜಿನ ಅಂಶಗಳು ಇಂತಿವೆ:
* ಕೃಷ್ಣಯ್ಯ ಶೆಟ್ಟರು ದೇವಸ್ಥಾನದಿಂದ ಸೀದಾ ಒಳಚರಂಡಿಗೆ!
* ಹಿಂದೊಮ್ಮೆ ಗಂಗಾಜಲ ಸರಬರಾಜು ಮಾಡಿದ್ದ ಶೆಟ್ಟರಿಂದ ಇನ್ನುಮುಂದೆ ಬರಿ ನೀರು ಸರಬರಾಜು.
* ’ಆಪರೇಷನ್ ಕಮಲ’ದಲ್ಲಿ ಕಮಲ ಒಲಿದದ್ದು ಸೋಮಣ್ಣನಿಗೆ; ಆಪರೇಷನ್ ಆಗಿದ್ದು ಕೃಷ್ಣಯ್ಯ ಶೆಟ್ಟರಿಗೆ!
* ಕೃಷ್ಣಯ್ಯ ಶೆಟ್ಟರ ಮಂತ್ರಿಪದವಿ ಕೃಷ್ಣಾರ್ಪಣ!
* ಶೆಟ್ಟರು ಹಂಚಿದ್ದು ಲಡ್ಡು; ಅವರಿಗೆ ಸಿಕ್ಕಿದ್ದು ಚಿಪ್ಪು!
* ಶೆಟ್ಟರದು ರಾಜೀನಾಮೆ ಅಲ್ಲ, ರಾಜಿ ಮತ್ತು ನಾಮ!!!
* ಸಿಎಂ ಹೆಸರಲ್ಲಿ ಪೂಜೆ ಮಾಡಿಸಿದರೂ ಶೆಟ್ಟರಿಗೆ ಸಿಎಮ್ಮಿಂದ ಪೂಜೆ ತಪ್ಪಲಿಲ್ಲ!
* ’ಭೂಕೈಲಾಸ’ ಚಿತ್ರದ ಹಾಡು: ’ರಾಮನ ಅವತಾರಾ, ರಘುಕುಲ ಸೋಮನ ಅವತಾರ’.
’ಬೂಸಿಯ ಕೈವಾಡ’ (ವಿ)ಚಿತ್ರದ ಹಾಡು: ’ಸೋಮನ ಅವತಾರಾ, ವೈಶ್ಯಕುಲ ಕೃಷ್ಣಗೆ ಗ್ರಹಚಾರ’!
* ಉಡುಪಿಯಲ್ಲಿ ’ಕೃಷ್ಣಪೂಜೆ ವಿವಾದ’ ಆಯಿತು; ದೆಹಲಿಯಲ್ಲಿ ಎಸ್ಸೆಂ ಕೃಷ್ಣಗೆ ಅನಿರೀಕ್ಷಿತವಾಗಿ ಮಂತ್ರಿಪದವಿ ದೊರಕಿತು; ಬೆಂಗಳೂರಲ್ಲಿ ಕೃಷ್ಣಯ್ಯ ಶೆಟ್ಟರಿಗೆ ಮಂತ್ರಿಪದವಿ ಕೈತಪ್ಪಿಹೋಯಿತು.
ಎಲ್ಲ ಕೃಷ್ಣಲೀಲೆ!

7 ಕಾಮೆಂಟ್‌ಗಳು:

  1. ಇ ಕೃಷ್ಣ ಲೀಲೆಗೆ ರಾಮ ನ ಕೈವಾಡ ವೆನಾದರು ಇದೆಯೇ?
    ಹಿಂದೆ ವಿಭೀಷಣ ರಾಮ ನ ಸೇನೆ ಗೆ ಸೇರಿದ್ದು ಮೊದಲ ಆಪರೇಷನ್ ಕಮಲ ಅನ್ಸುತ್ತೆ.
    ಪಾಪ ಇಲ್ಲಿ ಯೇಡಿಯುರಪ್ಪ ಮಾಡ್ತಾ ಇರೋದು ದೇಶೋದ್ದರಕ್ಕೆ...

    ---------------------
    ಚೆನ್ನಾಗಿದೆ ಶಾಸ್ತ್ರೀ ಗಳೇ..

    ಪ್ರತ್ಯುತ್ತರಅಳಿಸಿ
  2. ಬಾಲು ಶಾಸ್ತ್ರಿಗಳೇ,
    ಬಾಲು ನಿಮ್ಮ ಅಂಗಳಕ್ಕೆ ಬಂದದ್ದೇ ತಡ, ಆ ರಾಮನಿಗೂ ಮತ್ತು ಈ (ಆನಂದ)ರಾಮನಿಗೂ ಸರಿಯಾಗೇ ಗುರಿಯಿಟ್ಟು ಎಸೆದಿದ್ದೀರಿ!
    ಇದೋ, ನಾನು ಕ್ಯಾಚ್ ಹಿಡಿದೆ: ಈ ’ಗುಳಿಗೆ ರಾಮ’ನ ಕೈವಾಡದಿಂದಲ್ಲ, ಕೈ(ಯಿಂದ ಬರೆವ)ಗುಣದಿಂದ ನಮ್ಮ ಪುಢಾರಿಗಳ ಕಾಯಿಲೆ ಕೊಂಚವಾದರೂ ತಹಬಂದಿಗೆ ಬರುತ್ತೋ ನೋಡಬೇಕು.
    ನನ್ನ ಆಸೆ ಅತಿಯಾಯ್ತು ಅಂತೀರಾ?
    ರೂಪಾ ಅವರೇ,
    ಎಂದಿನಂತೆ ನಿಮ್ಮ ಮೆಚ್ಚುಗೆಯ ಪ್ರೋತ್ಸಾಹ ನನಗೆ ಖುಷಿ ತಂದಿದೆ.

    ಪ್ರತ್ಯುತ್ತರಅಳಿಸಿ
  3. ಉತ್ತಮ ನಾಡಿನ ಬಗ್ಗೆ ಕಲ್ಪನೆ ಮಾಡಿ ಕೊಳ್ಳುವುದು ಅತಿ ಆಸೆ ಆಗಲಾರದು ಎಂದೆನಿಸುತ್ತದೆ. ರಾಮ ನ ದೆಸೆಯಿಂದ (ಆನಂದ + ತೆತ್ರಾಯುಗದ ಮಹಾ ಪುರುಷ ) ವಾನರ ಸೇನೆ ಮತ್ತು ಮಣ್ಣಿನ ಮಕ್ಕಳಿಗೆ ಸುಬುದ್ದಿ ಬರಲಿ.

    ಪ್ರತ್ಯುತ್ತರಅಳಿಸಿ