ನವದೆಹಲಿ, ನವೆಂಬರ್ 17:
’ಹಿಸ್ಟರಿ ರಿಪೀಟ್ಸ್’ ಎಂಬ ಮಾತು ಎಷ್ಟೊಂದು ಸತ್ಯ!
2004ರಲ್ಲಿ ಸೋನಿಯಾ ಗಾಂಧಿ ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಪ್ರಧಾನಿ ಹುದ್ದೆಯನ್ನು ನಿರಾಕರಿಸಿದರು. ಆ ಹುದ್ದೆ ಮನಮೋಹನ್ ಸಿಂಗ್ ಪಾಲಾಯಿತು. ಸೋನಿಯಾ ಗಾಂಧಿಯದು ಮಹಾನ್ ತ್ಯಾಗವೆಂದೇ ಕಾಂಗ್ರೆಸ್ ವಲಯದಲ್ಲಿ ಬಣ್ಣಿಸಲಾಯಿತು. ಇದೀಗ ಮನಮೋಹನ್ ಸಿಂಗ್ ಕೂಡ ತಮ್ಮ ಅಂತರಾತ್ಮದ ಕರೆಗೆ ಓಗೊಟ್ಟು ಪ್ರಧಾನಿ ಹುದ್ದೆಯನ್ನು ತ್ಯಾಗಮಾಡಿದ್ದಾರೆ. ಆ ಹುದ್ದೆ ರಾಹುಲ್ ಗಾಂಧಿ ಪಾಲಾಗಿದೆ. ಸಿಂಗ್ ಅವರದೂ ಮಹಾನ್ ತ್ಯಾಗವೆಂದು ಕಾಂಗ್ರೆಸ್ ವಲಯದಲ್ಲಿ ಬಣ್ಣಿಸಲಾಗುತ್ತಿದೆ.
ತಮ್ಮ ವಿದೇಶಿ ಮೂಲದ ಕಾರಣದಿಂದಾಗಿ ಸೋನಿಯಾ ಅಂದು ಪ್ರಧಾನಿ ಹುದ್ದೆ ಕೈಬಿಟ್ಟರು. ತಮ್ಮ ವಿದೇಶಿ ವಿದ್ಯಾಭ್ಯಾಸದ ಪ್ರಭೆಯೊಂದಿಗೆ ರಾಹುಲ್ ಇಂದು ಪ್ರಧಾನಿ ಪಟ್ಟವನ್ನೇರಿದ್ದಾರೆ.
ಸಮರ್ಥ ವ್ಯಕ್ತಿಯೆಂದು ಹೇಳಿ ಸೋನಿಯಾ ಅಂದು ಸಿಂಗ್ ಅವರಿಗೆ ಪಟ್ಟ ಕಟ್ಟಿದರು. ಸಮರ್ಥ ಯುವಶಕ್ತಿಯೆಂದು ಹೇಳಿ ಸಿಂಗ್ ಇಂದು ರಾಹುಲ್‌ಗೆ ಪಟ್ಟ ಬಿಟ್ಟುಕೊಟ್ಟಿದ್ದಾರೆ.
ಸಿಂಗ್‌ಗೂ ಮೊದಲು ಪ್ರಧಾನಿಯಾಗಿದ್ದ ವಾಜಪೇಯಿ ಅವರು ಪ್ರಧಾನಿ ಹುದ್ದೆ ತಮ್ಮ ಕೈಬಿಟ್ಟುಹೋದ ಕೆಲವೇ ತಿಂಗಳುಗಳಲ್ಲೇ ಆರೋಗ್ಯದ ಸಮಸ್ಯೆ ಎದುರಿಸಬೇಕಾಗಿ ಬಂತು. ಪರಿಣಾಮವಾಗಿ ಅವರೀಗ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಪ್ರಧಾನಿ ಹುದ್ದೆಯ ಪ್ರಥಮಾವಧಿ ಮುಗಿಯುವ ಕೆಲವೇ ತಿಂಗಳು ಮೊದಲು ಸಿಂಗ್ ಅವರನ್ನೂ ಆರೋಗ್ಯದ ಸಮಸ್ಯೆ ಕಾಡಿ ಅವರು ಆಪರೇಷನ್‌ಗೆ ಒಳಗಾಗಬೇಕಾಯಿತು. ಪರಿಣಾಮವಾಗಿ ಸಿಂಗ್ ಈಗ ಎರಡನೇ ಬಾರಿ ಪ್ರಧಾನಿಯಾದ ಆರೇ ತಿಂಗಳಲ್ಲಿಯೇ ಆರೋಗ್ಯದ ಸಮಸ್ಯೆಯಿಂದಾಗಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯುವ ಘೋಷಣೆ ಮಾಡಿದ್ದಾರೆ.
ಹಿಸ್ಟರಿ ರಿಪೀಟ್ಸ್, ಬಟ್ ಇನ್ ಎ ಡಿಫರೆಂಟ್ ಸ್ಟೈಲ್! ಅಲ್ಲವೆ?
ಭಾನುವಾರ, ಮೇ 17, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸರ್,
ಪ್ರತ್ಯುತ್ತರಅಳಿಸಿಎಲ್ಲಾ ಅದೇ ರೀತಿ ಮಕ್ಕಿಕಾಮಕ್ಕಿ ಇದ್ದಂತಿದೆ.
ಅಲ್ವೆ ಶಿವು?
ಪ್ರತ್ಯುತ್ತರಅಳಿಸಿ:-)