ಮಂಗಳವಾರ, ಮೇ 5, 2009

ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)

* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?

- ’ಟ್ರಿಕ್ ಡೈರೆಕ್ಟರ್’.

+++

* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?

- ’ಓಲ್ಡನ್ ಸ್ಟಾರ್’.

+++

* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?

- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!

+++

* ಪೂಜಾ ಗಾಂಧಿ ಕನ್ನಡ ಕಲೀತಿದ್ದಾರಾ?

- ಕಲೀತಿದ್ದಾರೆ ಕಲೀತಿದ್ದಾರೆ; ಕನ್ನಡದಲ್ಲೇ ನುಲೀತಿದ್ದಾರೆ; ಅದನ್ನು ಕೇಳಿ / ನೋಡಿ ಪಡ್ಡೆ ಹೈಕಳು ನಲೀತಿದ್ದಾರೆ!

+++

* ಪೂಜಾ ಗಾಂಧಿಯ ವೆಬ್‌ಸೈಟ್ ತಗೊಂಡು ನಾನೇನ್ಮಾಡಲಿ?

- Sight seeing ಮಾಡೋ ಮಾರಾಯ! ಕಣ್ಣು ತಂಪಾಗುತ್ತೆ!

+++

* ’ಕಿರಣ್ ಬೇಡಿ’ ಮಾಲಾಶ್ರೀ ಅವರ ನೆಕ್ಸ್ಟ್ ಫಿಲಂ ಹೆಸರೇನು?

- ’ಹೆದರ್‌ಬೇಡಿ’.
(ಈ ಹೆಸರಿನ ಮೇಲ್ಗಡೆ ಸಣ್ಣಕ್ಷರಗಳಲ್ಲಿ, ’ಸೈಜ್ ನೋಡಿ’ ಎಂದು ಬರೆದಿರುತ್ತೆ.)

+++

* ಪರಭಾಷಾ ನಟಿಯೋರ್ವಳಿಗೆ ಕನ್ನಡದಲ್ಲಿ ಮಾತಾಡಲು ನಾಲಗೆ ತಿರುಗೋಲ್ವಂತೆ!

- ಸ್ಟಾರ್‌ಟಂಗ್ ಟ್ರಬಲ್ ಪಾಪ!

--೦--

3 ಕಾಮೆಂಟ್‌ಗಳು:

  1. ಶಾಸ್ತ್ರಿಗಳೇ
    ನಿಮ್ಮ ತಲೆಗೆ ಗುಳಿಗೆ ಪ್ರಭಾವ ಚೆನ್ನಾಗಿ ಆಗಿದೆ. Good one.

    ಪ್ರತ್ಯುತ್ತರಅಳಿಸಿ
  2. ನಿಮ್ಮ ಗುಳಿಗೆ ಬಹಳ ಚೆನ್ನಾಗಿದೆ ಸರ್, ಡೋಸೇಜ್ ಜಾಸ್ತಿ ಆದರೆ ಏನು ಸೈಡ್ ಇಫ್ಫೆಕ್ಟ ಇಲ್ಲ ತಾನೇ

    ಪ್ರತ್ಯುತ್ತರಅಳಿಸಿ
  3. Self effect ಮತ್ತು side effect ಬಗ್ಗೆ ಸೂಕ್ತ analysis ಮಂಡಿಸಿರುವ ಇಬ್ಬರು ಮಿತ್ರರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ