* ಮೊಯ್ಲಿ ಪದಚ್ಯುತರಾದರು. ಚುನಾವಣೆಯಲ್ಲೂ ಸೋತರೆ ಆಗ?
- ’ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯ ಬರೆದು ಮುಗಿಸಿರುವ ಮಹಾಕವಿ ’ಮಹಾಭಾರತ ಮಹಮಹಾನ್ವೇಷಣಂ’ ಮಹಮಹಾಕಾವ್ಯ ಆರಂಭಿಸಬಹುದು!
+++
* ಮೊಯ್ಲಿ ತಮ್ಮದು ಪದಚ್ಯುತಿ ಅಲ್ಲ ಅಂತಾರೆ?!
- ಹಾಗಾದರೆ ಅದು ರಾಮಾಯಣ!
+++
* ಮೊಯ್ಲಿ ಸಾಹೇಬರದು ಅಂದು ಟೇಪ್ ಹಗರಣ, ಇಂದು?
- ಟ್ರ್ಯಾಪ್ ಹಗರಣ!
+++
* ಶ್ರುತಿ ಮೇಡಂ ತಿರುಪತಿಯಲ್ಲಿ ಮರುಮದುವೆಯಾಗ್ತಾರಂತೆ?
- ಚಕ್ರವರ್ತಿಗೆ ತಿರುಪತಿ ಲಡ್ಡು, ಮಹೇಂದರ್‌ಗೆ ತಿರುಪತಿ ನಾಮ ಎಂಬುದರ ಸಂಕೇತವಾಗಿ ತಿರುಪತಿಯಲ್ಲಿ ಮದುವೆ!
+++
* ಚಿರಂಜೀವಿ ಸ್ಪರ್ಧೆ ತಿರುಪತಿಯಲ್ಲಿ, ಶ್ರುತಿ ಮದುವೆ ತಿರುಪತಿಯಲ್ಲಿ!
- ಹೌದು, ಎರಡೂ ತಿರುಪತಿಯೇ!
+++
* ಶ್ರುತಿಯ ಭಾವಿ ಪತಿಯ ಹೆಸರು ಚಂದ್ರಚೂಡ ಚಕ್ರವರ್ತಿ ಅಂತನಾ?
- ಮಹೇಂದರ್ ಷಾರ್ಟಾಗಿ ’ಚಂಚ’ ಅಂತಾರೆ.
(ಶ್ರುತಿಗೆ ಚೂಡ!) (ಜಗೀಬಹುದು!)
+++
* ಚಂದ್ರಚೂಡ ಚಕ್ರವರ್ತೀನ ಷಾರ್ಟ್ ಆಗಿ ಸೀಸೀ ಅನ್ನಬಹುದಾ?
- ಶ್ರುತಿಗೆ ಸೀಸೀ, ಮಹೇಂದರ್‌ಗೆ ಕಹಿಕಹಿ!
(ನೋಡಿದವರಿಗೆ ’ಇಸ್ಸೀಸೀ!’)
+++
* ಐಪಿಎಲ್ ವಾಣಿಜ್ಯೀಕರಣವನ್ನು ಕೇಂದ್ರ ಕ್ರೀಡಾ ಸಚಿವ ಗಿಲ್ ಆಕ್ಷೇಪಿಸಿದ್ದಾರೆ?
- ಕ್ರಿಕೆಟ್ಟಾಟ ಇರಲಿ, ಕೆಟ್ಟಾಟ ಬೇಡ ಅಂದಿದ್ದಾರೆ.
+++
* ಎಸ್ಸೆಸ್ಸೆಲ್ಸಿಯಲ್ಲಿ ಉಡುಪಿ ಜಿಲ್ಲೆ ಟಾಪ್, ಪಿಯುಸಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಟಾಪ್!
- ಡಿಗ್ರಿಯಲ್ಲಿ ಅವೆರಡೂ ಟಾಪ್! ಬೇಸಿಗೇಲಿ ೪೦ರಿಂದ ೪೬ ಡಿಗ್ರಿವರೆಗೂ ಹೋಗುತ್ತೆ!
--೦--
ಸಿನಿಮಾ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 10, 2009
ಶನಿವಾರ, ಮೇ 9, 2009
ನೀವು ಕೇಳದಿರಿ - 7
* ಭಾರತದಲ್ಲಿ ಹಂದಿಜ್ವರ ಇದೆಯೆ?
- ಚುನಾವಣೆ ಸೀಸನ್ನಾದ್ದರಿಂದ ಸೇಂದಿಜ್ವರ ಇದೆ.
+++
* ವರುಣ್ ವಿರುದ್ಧ ಮಾಯಾವತಿ ಹೂಡಿದ್ದ ಮೊಕದ್ದಮೆ ವಜಾ ಆಯ್ತಲ್ಲ ಗುರುವೇ!
- ಹೌದು. ವರುಣ್ ಮೇಲೆ ಮಾಯಾ-ಮಂತ್ರ ನಡೆಯಲಿಲ್ಲ. ಮಾಯಾಜಾಲದಿಂದ ವರುಣ್ ಹೊರಬಂದ. ಅವನಿಗೆ ಇನ್ನಾವ ಮಾಯಾಬಜಾರ್ ಕಾದಿದೆಯೋ ’ಮಾಯಾವಿ’ತಿಯೇ ಬಲ್ಲಳು!
+++
* ಹಿಂದೂ-ಮುಸ್ಲಿಮರು ಬಯಸಿದ ದಿನ ರಾಮಮಂದಿರ ನಿರ್ಮಾಣ ಮಾಡುತ್ತಾರಂತೆ ಅಡ್ವಾಣಿ?
- ’ಆದರೆ-ಹೋದರೆ, ಅತ್ತಿ ಮರದಲ್ಲಿ ಹತ್ತಿ ಬೆಳೆದರೆ, ಅಜ್ಜಾ, ನಿನಗೊಂದು ರೇಷ್ಮೆಪಂಚೆ’!
+++
* ನೆಹರೂ ಅವರು ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರೇ?
- ಮಗಳನ್ನು ಹಾಗೂ ಮಗಳ ಮಕ್ಕಳನ್ನು ಬಲು ಇಷ್ಟಪಡುತ್ತಿದ್ದರು. ಆ ಇಷ್ಟದ ಫಲವನ್ನೇ ನಾವೀಗ ಉಣ್ಣುತ್ತಿರುವುದು!
+++
* ವಿಜಯ್ ಮೋರೆ ಮುಖಕ್ಕೆ ಮಸಿ ಬಳಿದ ಪ್ರಕರಣ ಮೂರೂವರೆ ವರ್ಷಗಳ ನಂತರ ಈಗ ವಿಚಾರಣೆಗೆ ಬಂದಿದೆಯಲ್ಲಾ ಗುರೂ!
- ಹೌದು.
ಮೋರೆ ಮೋರೆಗೆ ಮಸಿ
ಈಗ ತಟ್ಟಿದೆ ಬಿಸಿ
ಇನ್ನೂ ಕಾಯಿರಿ ಒಸಿ
ಆಗುತ್ತೆಲ್ಲಾ ಹುಸಿ
+++
* ಶ್ರುತಿ ಅಭಿಮಾನಿ ನಿಮ್ಮಮೇಲೆ ಕೇಸ್ ಹಾಕ್ತಾನಂತೆ?
- ಮಹೇಂದರ್ ಅಭಿಮಾನಿ ನನ್ನ ಪರವಾಗಿ ವಕೀಲನನ್ನಿಡ್ತಾನೆ.
+++
* ಷೋಗಳ ಟೈಮ್ ಬದಲಾದಕೂಡಲೇ ಸಿನಿಮಾ ಥಿಯೇಟರ್‌ಗೆ ಜನ ನುಗ್ತಾರೆಯೆ?
- ಇಲ್ಲ. ಪ್ರೊಡ್ಯೂಸರ್‌ಗೆ ಟೈಮ್ ಕೂಡಿಬರಬೇಕು!
+++
* ಆ ನೇಪಾಳಿ ಇದ್ದಾನಲ್ಲಾ, ಆತ ಚಂಡನೋ, ಪ್ರಚಂಡನೋ?
- ನಿರ್ಧರಿಸುವುದು ರಣರಂಗ.
+++
* ಅಂತೂ ಕಸಬ್ ವಿರುದ್ಧ ಮೊದಲ ಪ್ರತ್ಯಕ್ಷ ಸಾಕ್ಷಿಯ ಹೇಳಿಕೆ ದಾಖಲಾಯಿತು.
- ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಕಸಬ್ ಕೃತ್ಯಕ್ಕೆ ಸಾಕ್ಷಿ ಏಕೆ?

ಶುಕ್ರವಾರ, ಮೇ 8, 2009
ನೀವು ಕೇಳದಿರಿ - 6 (ತಾರಾಜಕೀಯ ಸ್ಪೆಷಲ್)
* ಶ್ರುತಿ ಅವರು ಚಕ್ರವರ್ತಿ ಎಂಬುವವರನ್ನು ಮದುವೆಯಾಗುತ್ತಾರಂತೆ?
- ದೇವತೆಗಳ ಚಕ್ರವರ್ತಿ ಮಹೇಂದ್ರನಿಗಿಂತ ಆಯಮ್ಮಗೆ ಈ ಚಕ್ರವರ್ತಿಯೇ ಮೇಲಾದನೇ?!
+++
* ಸಿನಿಮಾ ಮತ್ತು ನಿಜಜೀವನ ಎರಡೂ ಒಂದೇನಾ?
- ಒಂದಕ್ಕೊಂದು ವಿರುದ್ಧ.
ಸಿನಿಮಾದಲ್ಲಿ ಶ್ರುತಿ ಅಳುತ್ತಿದ್ದರು, ನಿಜಜೀವನದಲ್ಲಿ ಮಹೇಂದರ್ ಅಳುತ್ತಾರೆ.
+++
* ’ಶ್ರುತಿ’? ’ಶೃತಿ’?
- ಮಹೇಂದರ್‌ಗಿನ್ನು ಕೇವಲ ’ಸ್ಮೃತಿ’!
+++
* ’ಜೈ ಹೋ’ ಬಳಸಿತಲ್ಲಾ ಕಾಂಗ್ರೆಸ್, ಅದಕ್ಕೆ ಜಯವಾಗುತ್ತೆಯೆ?
- ಗೆದ್ದರೆ ’ಜೈ ಹೋಗಯಾ’, ಸೋತರೆ ’ಜೈ ಹೋ ಗಯಾ’!
+++
* ಈ ಸಲ ಲೋಕಸಭೆಗೆ ಸ್ಪರ್ಧಿಸಿರುವ ಎಲ್ಲ ತಾರಾಮಣಿಗಳೂ ಗೆದ್ದುಬಿಟ್ಟು ಮನಮೋಹನ್ ಸಿಂಗರೇ ಮತ್ತೆ ಪ್ರಧಾನಿಯಾದರೆ?
- ವಿ.ಪಿ.ಸಿಂಗ್‌ಗೆ ಮಂಡಲ್ ಆಯೋಗ, ಎಂಎಂ ಸಿಂಗ್‌ಗೆ ತಾರಾಮಂಡಲ ಯೋಗ!
+++
* ’ಚಕ್ ದೇ ಇಂಡಿಯಾ - 2’ ಚಿತ್ರದಲ್ಲಿ ಶಾರುಖ್ ಖಾನ್ ಕ್ರಿಕೆಟ್ ಕೋಚ್ ಅಂತೆ!?
- ’ಕೋಲ್ಕತ್ತಾ ನೈಟ್ ರೈಡರ್ಸ್’ ತಂಡದ ಆಟಗಾರರೇ ಚಿತ್ರದ ಪಾತ್ರಧಾರಿಗಳು ಅಂತ ಪ್ರೊಡ್ಯೂಸರ್ ಹೇಳಿದ್ದಕ್ಕೆ ಶಾರುಖ್ ಖಾನ್ ಸಾಹೇಬರು, ’ನಾನು ಕೋಚ್ ಪಾತ್ರ ಮಾಡೋಲ್ಲ, ಬೇರೆಯವರಿಂದ ಮಾಡಿಸ್ಕಳಿ’ ಅಂದುಬಿಟ್ಟರಂತೆ!

ಮಂಗಳವಾರ, ಮೇ 5, 2009
ನೀವು ಕೇಳದಿರಿ - 4 (ಸಿನಿಮಾ ಸ್ಪೆಷಲ್)
* ’ಹೊಡಿಮಗ’ ಈಗ ’ಹ್ಯಾಟ್ರಿಕ್ ಹೊಡಿಮಗ’. ಅದರ ಡೈರೆಕ್ಟರ್?
- ’ಟ್ರಿಕ್ ಡೈರೆಕ್ಟರ್’.
+++
* ಗಣೇಶ ’ಗೋಲ್ಡನ್ ಸ್ಟಾರ್’. ಅಂಬರೀಷ್?
- ’ಓಲ್ಡನ್ ಸ್ಟಾರ್’.
+++
* ಚುನಾವಣೆ ವೇಳೆ ಒಂದಷ್ಟು ದಿನ ಅಂಬಿ ತನ್ನ ಪಕ್ಷದ ವಿರುದ್ಧವೇ (ಅನಧಿಕೃತವಾಗಿ) ಬಂಡೆದ್ದದ್ದು ಯಾಕೆ?
- ತಾನು ’ರೆಬೆಲ್ ಸ್ಟಾರ್’ ಎಂಬುದು ಇದ್ದಕ್ಕಿದ್ದಂತೆ ನೆನಪಾಗಿರಬೇಕು!
+++
* ಪೂಜಾ ಗಾಂಧಿ ಕನ್ನಡ ಕಲೀತಿದ್ದಾರಾ?
- ಕಲೀತಿದ್ದಾರೆ ಕಲೀತಿದ್ದಾರೆ; ಕನ್ನಡದಲ್ಲೇ ನುಲೀತಿದ್ದಾರೆ; ಅದನ್ನು ಕೇಳಿ / ನೋಡಿ ಪಡ್ಡೆ ಹೈಕಳು ನಲೀತಿದ್ದಾರೆ!
+++
* ಪೂಜಾ ಗಾಂಧಿಯ ವೆಬ್‌ಸೈಟ್ ತಗೊಂಡು ನಾನೇನ್ಮಾಡಲಿ?
- Sight seeing ಮಾಡೋ ಮಾರಾಯ! ಕಣ್ಣು ತಂಪಾಗುತ್ತೆ!
+++
* ’ಕಿರಣ್ ಬೇಡಿ’ ಮಾಲಾಶ್ರೀ ಅವರ ನೆಕ್ಸ್ಟ್ ಫಿಲಂ ಹೆಸರೇನು?
- ’ಹೆದರ್‌ಬೇಡಿ’.
(ಈ ಹೆಸರಿನ ಮೇಲ್ಗಡೆ ಸಣ್ಣಕ್ಷರಗಳಲ್ಲಿ, ’ಸೈಜ್ ನೋಡಿ’ ಎಂದು ಬರೆದಿರುತ್ತೆ.)
+++
* ಪರಭಾಷಾ ನಟಿಯೋರ್ವಳಿಗೆ ಕನ್ನಡದಲ್ಲಿ ಮಾತಾಡಲು ನಾಲಗೆ ತಿರುಗೋಲ್ವಂತೆ!
- ಸ್ಟಾರ್‌ಟಂಗ್ ಟ್ರಬಲ್ ಪಾಪ!

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)