ಶನಿವಾರ, ಮೇ 2, 2009

ನೀವು ಕೇಳದಿರಿ - 2

* ಕೇಳಿ-ಕೇಳಿದಿರಿ-ಕೇಳದಿರಿ ಇವುಗಳ ವ್ಯತ್ಯಾಸವೇನು?
- ಮೊದಲನೆಯದು ಬರೀ ’ಕೇಳಿ’. (ವಿವರಣೆ ಅನವಶ್ಯ) ( ’ಹಾಯ್’!).
ಎರಡನೆಯದು ’ಕೇಳಿ ದಿರಿ’ಸು (ಕ್ರೀಡೆಯ ದಿರಸು) (’ಸುಧಾ’).
ಮೂರನೆಯದು ’ಕೇಳದಿರಿ’ಸು (ಕೇಳದೇ ಇಡು!) (ಪಾಯಿಂಟ್ ಇಡು, ಬತ್ತಿ ಇಡು ಇತ್ಯಾದಿ).

+++

* ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಸಲ ಉಡುಪಿ ಜಿಲ್ಲೆಯೇ ಯಾಕೆ ಫಸ್ಟ್ ಬರುತ್ತದೆ?
- ಶ್ರೀಕೃಷ್ಣನ ಅನುಗ್ರಹ ಅಂತಾರೆ ಪೇಜಾವರ ಶ್ರೀಗಳು.

+++

* ಇದೇನಿದು, ಕರ್ನಾಟಕದಲ್ಲಿ ಕೇರಳ-ಆಂಧ್ರ ಪೋಲೀಸರ ಗೂಂಡಾಗಿರಿ!
- ಯಾಕೆ, ಕರ್ನಾಟಕದಲ್ಲಿ ಕರ್ನಾಟಕದ ಪೋಲೀಸರು ಮಾತ್ರ ಗೂಂಡಾಗಿರಿ ಮಾಡ್ಬೇಕು ಅಂತ ರೂಲ್ಸಿದೆಯೇನು? ಇಷ್ಟಕ್ಕೂ, ಗೂಂಡಾಗಿರಿ ಮಾಡದೆ ಒಂದು ದಿನವಾದ್ರೂ ಹೇಗೆ ಇರಬಲ್ಲರು ಪೋಲೀಸರು, ಪಾಪ!

+++

* ಗುಜರಾತ್‌ನಲ್ಲೇ ಗೋಧ್ರಾ ವಿಚಾರಣೆ....
- ಅಯೋಧ್ಯೆಯಲ್ಲೇ ರಾಮಮಂದಿರ.

+++

* ಅಂಬಾನಿ ಹೆಲಿಕಾಪ್ಟರ್ ಹಗ’ರಣ’ ಏನಿದು ಕಥೆ?!
- ’ಅಂಬಾ, ನೀ ಹೇಳಿದೆ ಅಂತ ನಾವಿಬ್ಬರೂ ಮತ್ತೆ ಒಂದಾಗಿದ್ದೇವೆಯೇ ಹೊರತು ನಮ್ಮ ವೈರ ಇನ್ನೂ ಅಳಿದಿಲ್ಲ’, ಅನ್ನುತ್ತಿದ್ದಾರಂತೆ ಅಂಬಾನಿದ್ವಯರು ತಮ್ಮ ಅಂಬೆ ಕೋಕಿಲಾಬೆನ್ ಬೆನ್ನಿಗೆ!

+++

* ಈ ಸಲದ ಚುನಾವಣಾ ಫಲಿತಾಂಶವನ್ನು ಯಾರೂ ಊಹಿಸಲು ಸಾಧ್ಯವಿಲ್ಲ ಅಂದಿದ್ದಾರೆ ಪ್ರಿಯಾಂಕಾ ಗಾಂಧಿ!
- ಭಗವದ್ಗೀತೆ ಓದಿದ್ದು ಜಾಸ್ತಿಯಾಗಿರಬೇಕು.

+++

* ಹಂದಿಜ್ವರ ಹತೋಟಿಗೆ ಭಾರತ ಸರ್ಕಾರ ಏನು ಮಾಡುತ್ತಿದೆ?
- ಪತ್ರಿಕೆಗಳಲ್ಲಿ ಜಾಹಿರಾತು ನೀಡುತ್ತಿದೆ.

+++

* ಐಪಿಎಲ್ ಫುಲ್ ಫಾರ್ಮ್‌ ತಿಳಿಸಿ ಗುರುವರ್ಯಾ.
- ಐಪಿಎಲ್ ಫುಲ್ ಫಾರ್ಮ್‌‌ನಲ್ಲೇ ಇದೆಯಲ್ಲಾ ಶಿಷ್ಯೋತ್ತಮಾ, ಚೀರ್ ಗರ್ಲ್ಸ್ ಫೋಟೋಗಳನ್ನು ನೋಡಿದರೆ ಗೊತ್ತಾಗೋಲ್ವೆ?

--0--

4 ಕಾಮೆಂಟ್‌ಗಳು:

  1. Sir very nice .. very punching also .. i enjoyed a lot ... if some thing happens also u r gulige is there to eat .. so without worry i can enjoy .. :-) :-) :-)

    ಪ್ರತ್ಯುತ್ತರಅಳಿಸಿ
  2. ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚಿನ ಸಲ ಉಡುಪಿ ಜಿಲ್ಲೆಯೇ ಯಾಕೆ ಫಸ್ಟ್ ಬರುತ್ತದೆ?
    - ಶ್ರೀಕೃಷ್ಣನ ಅನುಗ್ರಹ ಅಂತಾರೆ ಪೇಜಾವರ ಶ್ರೀಗಳು.


    this line is too good sir ... by reading this i couln't control by laughing ... :-)
    :-)

    ಪ್ರತ್ಯುತ್ತರಅಳಿಸಿ
  3. * ನನ್ನ ಗುಳಿಗೆಯಂಗಡಿಯ ರೂಪ ಹೆಚ್ಚಿಸಿದ್ದೀರಿ ರೂಪಾ, ಧನ್ಯವಾದ.
    * ಎಂದಿನಂತೆ ಮೆಚ್ಚಿ ಪ್ರೋತ್ಸಾಹಿಸುತ್ತಿದ್ದೀರಿ ಸುನಾಥ್, ಧನ್ಯವಾದ.

    ಪ್ರತ್ಯುತ್ತರಅಳಿಸಿ