ಶುಕ್ರವಾರ, ಸೆಪ್ಟೆಂಬರ್ 4, 2009

ವೈಎಸ್‌ಆರ್ ಸಾವು: ವಿಚಿತ್ರ ಪ್ರಶ್ನೆಗಳು!

* ೨೪ ಗಂಟೆಗಳೊಳಗೆ ವೈಎಸ್‌ಆರ್ ದೇಹ ಪತ್ತೆಯಾಯಿತು. ವರ್ಷಗಳ ಕಾಲ ಪ್ರಯತ್ನಿಸಿದರೂ ವೀರಪ್ಪನ್ ಯಾಕೆ ಪತ್ತೆಯಾಗಲಿಲ್ಲ?

* ಮುಖ್ಯಮಂತ್ರಿಗಳನ್ನೇ ಪ್ರತಿಕೂಲ ಹವಾಮಾನದಲ್ಲಿ ಅಸುರಕ್ಷಿತ ವಾಹನ ಹತ್ತಿಸುವ ನಮ್ಮ ವ್ಯವಸ್ಥೆಯು ಶ್ರೀಸಾಮಾನ್ಯರಿಗೆ ಇನ್ನೇನು ರಕ್ಷಣೆ ನೀಡೀತು?

* ಸ್ವಯಂ ತಮಗೇ ಮುಳುವಾಗಬಹುದಾದ ಪ್ರತಿಕೂಲ ಹವಾಮಾನವನ್ನಾಗಲೀ ತಮ್ಮ ವಾಹನದ ಸ್ಥಿತಿಯನ್ನಾಗಲೀ ಗಮನಿಸದ ಜನನಾಯಕರು ಜನರ ರಕ್ಷಣೆಯನ್ನು ಅದೆಷ್ಟರಮಟ್ಟಿಗೆ ಗಮನಿಸಿಯಾರು?

* ಬದುಕಿದ್ದಾಗ ’ಸ್ವಾರ್ಥಿ, ಪಕ್ಷಪಾತಿ, ವಂಚಕ, ಅಹಂಕಾರಿ’ ಎಂದೆಲ್ಲ ಕೆಲವರಿಂದ ಕರೆಸಿಕೊಳ್ಳುತ್ತಿದ್ದವನು ಸತ್ತಕೂಡಲೇ ಅವೇ ಕೆಲವರ ಬಾಯಲ್ಲೇ ದಿಢೀರನೆ ಮಹಾತ್ಮ ಆಗಿಬಿಡುತ್ತಾನಲ್ಲಾ, ಅದು ಹೇಗೆ?!

* ಮುಖ್ಯಮಂತ್ರಿಗಾಗಿ ಪ್ರಾಣ ತೆತ್ತ ಇತರ ನಾಲ್ವರೂ ಮನುಷ್ಯರೇ ತಾನೆ? ಅಧಿಕಾರದ ಗಾತ್ರಕ್ಕನುಗುಣವಾಗಿ ಸಂತಾಪ-ಪ್ರಚಾರಗಳೇ?!

* ವೈಎಸ್‌ಆರ್ ನಿಧನದ ಶೋಕ ಭರಿಸಲಾರದೆ ಸಾಲು ಸಾಲು ಜನ ಸತ್ತರಲ್ಲಾ, ಅವರನ್ನು ಮುಗ್ಧರೆನ್ನಬೇಕೋ ದಡ್ಡರೆನ್ನಬೇಕೋ?

* ಬಳ್ಳಾರಿ ಗಣಿ ದಣಿಗಳೀಗ ಯಾವ ಗಣಿತ ಮಾಡುತ್ತಿರಬಹುದು? ಯಾರ ಬಳಿ ಕಣಿ ಕೇಳುತ್ತಿರಬಹುದು?

5 ಕಾಮೆಂಟ್‌ಗಳು:

  1. ಸೂಕ್ತವಾದ ಪ್ರಶ್ನೆಗಳು, ಉತ್ತರವು ಅದರಲ್ಲೆ ಇದೆ ಕಂಡುಕೊಳ್ಳಲು ಇಷ್ಟವಿಲ್ಲದವರಿಗೇಗೆ ಕಾಣುವುದು.

    ಬಳ್ಳಾರಿ ಶನಿ, ಕ್ಷಮಿಸಿ ದಣಿಗಳು
    ೧) ಹೆಲಿಟ್ಯೂರಿಸಮ್/೨೦ ಸಾವಿರ ಕೋಟಿ ಸ್ಟೀಲ್ ಪ್ಲಾಂಟ್/ಜಗನ್ಮೋಹನನ ಕುರಿತು ಎಣಿಕೆ ಮಾಡುತ್ತಿರಬಹುದೇನೊ
    ಗಣಿಗಣ್ಯರು ಅರಣ್ಯ ರೋದನ ಕ್ಷಮಿಸಿ ಅರಣ್ಯ ಖನನ ಎಂದು ನಿಲ್ಲಿಸುವರೋ

    ಪ್ರತ್ಯುತ್ತರಅಳಿಸಿ
  2. ಪರಾಂಜಪೆ ಅವರೇ, ಚಿಕ್ಕ-ಚೊಕ್ಕ ವಿಶ್ಲೇಷಣೆಗಾಗಿ ಧನ್ಯವಾದ.
    ಶ್ರೀಕಾಂತ್ ಅವರೇ, ಬಳ್ಳಾರಿ ದಣಿ ಬಗ್ಗೆ ಬೇಸ್ ಬರ್ದಿದಿ ಬಿಡು ಸಾಮೀ!

    ಪ್ರತ್ಯುತ್ತರಅಳಿಸಿ
  3. ಆನ೦ದ ಸರ್,
    ನೀವು ಹೇಳಿದ ವಿಷಯ ಸರಿ ಇದೆ . ನಾನು ನಿಮ್ಮನ್ನು ನಾನು ನಿಮ್ಮನ್ನು ಬೆ೦ಬಲಿಸುತ್ತೇನೆ .

    ಪ್ರತ್ಯುತ್ತರಅಳಿಸಿ
  4. ನಿಮ್ಮ ಬೆಂಬಲದಿಂದ ನನಗೆ ಇನ್ನಷ್ಟು ಬಲ ಬಂತು ರೂಪಾ ಅವರೇ, ಧನ್ಯವಾದ.

    ಪ್ರತ್ಯುತ್ತರಅಳಿಸಿ