ಮಲ್ಯ ಉವಾಚ
---------------
ಚಂದ್ರನಲ್ಲಿ ಸಿಕ್ಕಿರೋದು ನೀರು
ಮಾಡ್ತೀನಿ ಅದನ್ನು ಬೀರು!
ಹಾರಿಸ್ತೀನಿ ಅಲ್ಲಿಗೆ ಕಿಂಗ್‌ಫಿಷರು
ತೋರಿಸ್ತೀನಿ ನನ್ನ ಕಾರು’ಬಾರು’!
***
ಶಶಿಯೊಡಲಲ್ಲಿ ನೀರು ಕಂಡುಹಿಡಿದದ್ದು ಇಸ್ರೋ
ಖುಷಿಕೊಡುವಂಥ ಬೀರು ಕಂಡುಹಿಡಿದದ್ದು ನಾನು
ನಿಮ್ಮ್ ಸಂಶೋಧನೆ ಮುಂದುವರಿಸ್ರೋ
ನಾಕೌಟ್ ಆಗುವಷ್ಟು ಕೊಟ್ಟೇನು!
***
ಹಳೇದಾಯ್ತು ಕಿಂಗ್‌ಫಿಷರ್
ಮತ್ತು ನಾಕೌಟ್.
ಹೊಸಾ ಬ್ರ್ಯಾಂಡು ಮೂನ್‌ವಾಟರ್!
ಕುಡಿದ್ರೆ ಫುಲ್ ಟೈಟ್!
***
ನೀಲ್ ಆರ್ಮ್‌ಸ್ಟ್ರಾಂಗ್ ಕಾಲ್ ಇಟ್ಟರು
ಕಸ್ತೂರಿ ರಂಗನ್ ನೀರ್ ಹುಡುಕಿದರು
ಮಸ್ತ್ ಹುಡುಗೀರ್ ಜತೆ ಮಲ್ಯ ನಾನಲ್ಗೋಗಿ
ಮಾಡ್ತೀನಿ ಬಲು ಸ್ಟ್ರಾಂಗ್ ಕ್ಯಾಲೆಂಡರು!
***
’ಟಿಪ್ಪೂ ಖಡ್ಗ ತಂದೆ, ಗಾಂಧಿ ಕಣ್ಣಡಕ ತಂದೆ,
ಚಂದ್ರನ ಬಳಿ ಹೋಗಿ ನೀರನ್ನೂ ತರಲೇ?’
’ಏನೂ ಬೇಡ ತಂದೆ, ಸೊಲ್ಪ ಸುಮ್ಕಿರು ಎಂದೆ;
ನೀ ಕುಡಿಸಿದ ಬೀರೇ ಮಾಡ್ತಾ ಇದೆ ತರಲೆ!’
***
ಗೇರ್ ಗೇರ್ ಮಂಗಣ್ಣ!
ನೀರ್ ನೀರ್ ಚಂದ್ರಣ್ಣ!
ಬೀರ್ ಬೀರ್ ಮಲ್ಯಣ್ಣ!
ಚೀರ್ ಚೀರ್ ಶಾಸ್ತ್ರ್ಯಣ್ಣ!
ಭಾನುವಾರ, ಸೆಪ್ಟೆಂಬರ್ 27, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಬೀರ್ ಬೀರ್ ಮಲ್ಯಣ್ಣ
ಪ್ರತ್ಯುತ್ತರಅಳಿಸಿಚೀರ್ ಚೀರ್ ಶಾಸ್ತ್ರ್ಯಣ್ಣ
- ಚೆನ್ನಾಗಿದೆ. ಒಳ್ಳೆಯ ಹಾಸ್ಯ.
-ಮಂಜುನಾಥ ಅಜ್ಜಂಪುರ, ಬೆಂಗಳೂರು.
ಮಹಾನವಮಿಯ ಈ ಶುಭದಿನ
ಪ್ರತ್ಯುತ್ತರಅಳಿಸಿಮಂಜುನಾಥರ ಆಗಮನ
ಮತ್ತು ಶ್ಲಾಘನ
ಈ ಆನಂದನ
ಪಾಲಿಗೆ ಮಹದಾನಂದ ನಂದನ!
ಎಲ್ಲಾ ಚೆನ್ನಾಗಿದೆ,
ಪ್ರತ್ಯುತ್ತರಅಳಿಸಿಆದರೆ ಇದು ಬ್ಯಾಡಿತ್ತು..
ಕೇಲಿ, ಇಸ್ರೊ ಸಾಧನೆಯನ್ನು
(ಕೇಲಾ ಮಾಲೂಂ, ಕೇಲಿ ಕ್ಯಾ ಹೈ?)
ಹೇಲಿ, ನಮಗದು ಕೀರ್ತಿ ಅಲ್ವೆ?
(ತೊಳಕೊಳ್ಳೋಕೆ ನೀರಿದ್ದರೆ ಸೈ)
ಟಿಪ್ಪೂ ಖಡ್ಗ ತಂದೆ../ ಮೂನ್‌ವಾಟರ್..
ಪ್ರತ್ಯುತ್ತರಅಳಿಸಿಚೆನ್ನಾಗಿದೆ sir
ಮಿತ್ರದ್ವಯರಿಗೆ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ’ಬ್ಯಾಡಿತ್ತು’ ಹೌದು ಚಕೋರ ಅವರೇ, ಇದೋ ಅದನ್ನು ತೆಗೆದೆ.
ಆನ೦ದ ಸರ್,
ಪ್ರತ್ಯುತ್ತರಅಳಿಸಿಸು೦ದರವಾದ ಕವನಗಳು .
ವ೦ದನೆಗಳು
Olle 'Gulige'.
ಪ್ರತ್ಯುತ್ತರಅಳಿಸಿRavi Posavanike,
Photographer
The Times of India
Mangalore.
ಆನ೦ದ ರಾಮ ಶಾಸ್ತ್ರಿ ಗಳೆ,
ಪ್ರತ್ಯುತ್ತರಅಳಿಸಿನಿಮ್ಮ ವಿಡ೦ಬನೆ ಇ೦ದ ನಮ್ಮ ಮಲ್ಯನವರು ಮತಿಗೆಟ್ಟು, ಧೃತಿಗೆಟ್ಟು, ... (ಕುಲಗೆಟ್ಟು ಅನ್ನೊದು ಬೇಡ ಬಿಡಿ, ಅದು ಯಾವಾಗಲೊ ಆಗಿದೆ) ತಮ್ಮ ಕಾರ್ಕಾನೆಯನ್ನು ಮುಚ್ಚಿ, ಬೀರನ್ನು ಬಿಟ್ಟು, ಕ್ಯಾಲೆ೦ಡರ್ ನ ನಿಲ್ಲಿಸಿ... ಜೀವನದಲ್ಲಿ ಬೇಸತ್ತು, ಜಿಗುಪ್ಸೆ ಬ೦ದು ಮೌ೦ಟ್ ಅಬು ಗೆ ತಪಸ್ಸು ಮಾಡಲು ಹೊದರೆ .... ಹೋದರೆ....
ಇಗಾಗಲೆ ಸರ್ಕಾರಿ ಸಾರಾಯಿಯಿ೦ದ ವ೦ಚಿತರಾಗಿ, ಅತೀವ ದುಖದಲ್ಲಿ ಇರುವ ನಾಡ ಬ೦ದುಗಳು ನಿಮ್ಮ ಮೇಲೆ ದ೦ಡೆತ್ತಿ ಬರುವ ಸಾಧ್ಯತೆಗಳನ್ನು ತಳ್ಳಿಹಾಕುವ೦ತಿಲ್ಲ.
ರೂಪಾ ಅವರೇ,
ಪ್ರತ್ಯುತ್ತರಅಳಿಸಿಹೃತ್ಪೂರ್ವಕ ಧನ್ಯವಾದ.
’ಟೈಂಸ್’ ರವಿ ಅವರೇ,
’ಟೈಂ ಪಾಸ್ ಮಾಡಿ’ ಅನ್ನುವ ಬಾಲು ಅವರೇ,
ಸ್ವಾಗತ ಮತ್ತು ಧನ್ಯವಾದ.
ಬಾಲು ಅವರೇ,
ನಾಡ ಬ೦ಧುಗಳು ಬಂದರೆ ನನ್ನಮೇಲೆ ದ೦ಡೆತ್ತಿ
ಚಂದ್ರಲೋಕಕ್ಕೆ ಹಾರುವೆ ಕಿಂಗ್‌ಫಿಷರ್ ಹತ್ತಿ!