ಸೋಮವಾರ, ಸೆಪ್ಟೆಂಬರ್ 28, 2009

ಜಂಬೂಸವಾರಿ ಸ್ಪೆಷಲ್!

ಇದೀಗಷ್ಟೇ ಮೈಸೂರಿನ ದಸರಾ ಜಂಬೂಸವಾರಿ ಮೆರವಣಿಗೆಯ ದೂರದರ್ಶನ ನೇರಪ್ರಸಾರ ನೋಡಿದ ನಾನು ಪ್ರತಿ ವರ್ಷದಂತೆ ಈ ವರ್ಷವೂ ಗಮನಿಸಿದ ವಿಶೇಷ ಆಕರ್ಷಣೆಗಳು:

* ಆಕರ್ಷಕ ಸ್ತಬ್ಧಚಿತ್ರಗಳ ಮತ್ತು ಜಾನಪದ ಕಲಾ ತಂಡಗಳ ಮೆರವಣಿಗೆಯ ಮಧ್ಯೆ ಪದೇ ಪದೇ ಕ್ಯಾಮೆರಾಕ್ಕೆ ಪೋಸು ಕೊಡುತ್ತಿದ್ದ ದೂರದರ್ಶನದ ’ಅತ್ಯಾಕರ್ಷಕ’ ನಿರ್ದೇಶಕ ಮಹೇಶ್ Joshಇ.

* ವಿದ್ವಾಂಸ ನಿರೂಪಕರ ನಡುವೆ ಸೇರಿಕೊಂಡು ಅಧ್ವಾನದ ನಿರೂಪಣೆ ನೀಡುತ್ತಿದ್ದ ಅಜ್ಞಾನಿ ನಿರೂಪಕರು.

* ದೊರೆತನ ಕಸಿದುಕೊಂಡದ್ದಕ್ಕೆ ಸರ್ಕಾರದ ವಿರುದ್ಧ ಪ್ರತಿಭಟನೆಯ ಸಂಕೇತವೋ ಎಂಬಂತೆ ನೈಟ್ ಡ್ರೆಸ್‌ನಂಥ ಉಡುಪಿನಲ್ಲಿ ಅಂಬಾರಿ ಪೂಜೆಗೆ ಆಗಮಿಸಿದ ’ಮಹಾರಾಜ’ ಶ್ರೀಕಂಠದತ್ತ ಒಡೆಯರ್.

* ಮೈಸೂರು ದಸರೆಯ ಯಶಸ್ಸೇ ಈ ರಾಜ್ಯದ ಜನತೆಗೆ ತನ್ನ ಪರಮೋಚ್ಚ ಕೊಡುಗೆ ಎಂಬಂತೆ ಬೀಗಿಕೊಂಡಿದ್ದ ಶೋಭಾ ಕರಂದ್ಲಾಜೆ.

* ಉಪ್ಪಿಟ್ಟಿನಲ್ಲಿ ಅಲ್ಲೊಂದು ಇಲ್ಲೊಂದು ಕಾಣುವ ಒಗ್ಗರಣೆ ಸಾಸಿವೆಕಾಳಿನಂತೆ ದೇಶೀಜನಸಮೂಹದ ಮಧ್ಯೆ ಅಲ್ಲೊಬ್ಬರು ಇಲ್ಲೊಬ್ಬರು ಕಾಣುತ್ತಿದ್ದ ಬಿಳಿದೊಗಲಿನ ವಿದೇಶೀಯರು.

* ಜನಸಾಗರವನ್ನು ಆಗಾಗ ಹೆದರಿಸುತ್ತಿದ್ದ ಮಳೆಮೋಡ.

ಮತ್ತು

* ಪ್ರಸಾರದ ಮಧ್ಯೆ ಕೈಕೊಟ್ಟ ನಮ್ಮ ಏರಿಯಾದ ವಿದ್ಯುತ್!

7 ಕಾಮೆಂಟ್‌ಗಳು:

  1. ನಮಸ್ತೆ ಸರ‍್
    ಪಾಯಿಂಟ್ ೧, ೨ & ೪ ‌ಅಂತೂ ಬಹಳಷ್ಟು ಜನರಿಗೆ ಬೇಸರ ಹುಟ್ಟಿಸಿದ ವಿಚಾರಗಳು ಅಂದ್ಕೊಂಡಿದ್ದೀನಿ....

    ಧನ್ಯವಾದಗಳು

    ಪ್ರತ್ಯುತ್ತರಅಳಿಸಿ
  2. ನಾನಂತೂ ಜ೦ಬೂಸವಾರಿಯ ನೇರಪ್ರಸಾರ ನೋಡಲಿಲ್ಲ, ನಿಮ್ಮ ವರದಿಯಿ೦ದ ಸವಾರಿಯ ಸಮಗ್ರ ಚಿತ್ರಣ ಕಣ್ಮು೦ದೆ ಬಂತು.

    ಪ್ರತ್ಯುತ್ತರಅಳಿಸಿ
  3. ಆನ೦ದ ಸರ್.
    ಗುಳಿಗೆ ಸ್ವಲ್ಪ ಸ್ಟ್ರಾಂಗ್ ಕಮ್ಮಿ ಆಗಿದೆ . :-)

    ಪ್ರತ್ಯುತ್ತರಅಳಿಸಿ
  4. ಸಾರ್,
    ಪಾಯಿಂಟ್ ಮೂರು ಸ್ವಲ್ಪ ನಗು ತರೀಸ್ತು

    ಪ್ರತ್ಯುತ್ತರಅಳಿಸಿ
  5. ನಾಲ್ವರು ಮಿತ್ರರೂ ಸರಿಯಾದ ಪಾಯಿಂಟ್‌ಗಳನ್ನೇ ತಿಳಿಸಿದ್ದೀರಿ. ನಾಲ್ವರಿಗೂ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  6. hindina raajara dasara eega bari savinenapu maatra. indina mantrigala dasara ghora duhswapna. andhu raajara mele janarige, janara mele raajarige preethi, vishwaasa, abhimaana yellavoo iththu. Eeega namma manthrigalige kevala dhuddu maaduva, swaprathishte hechchisikolluva, mereyuva avakaashavaagidhe. indhina dasaraadhalli shisthu illa, gowrava illa, kurigala, dhanagala, huchchara meravanige maathra. yaavudhe halliya annammana jaatreya udhaaharaneyannu naavu idhakke kodabahudhu. nijavaagiyu namma sarkaarakke budhdhi idhdhare dasaraa vyavahaaravannu maraLi raajarige oppisi, taavu hinde ninthu support maadali. kelasakke baarada jana dasareya aacharaNeyalli moogu thoorisuvudhannu nillisali. Aaga konchavaadharoo dasarege merugu baruththade.

    ಪ್ರತ್ಯುತ್ತರಅಳಿಸಿ
  7. r ಅವರೇ,
    ವಸ್ತುನಿಷ್ಠವಾಗಿ ವಿಷಯದ ವಿಶ್ಲೇಷಣೆ ಮಾಡಿದ್ದೀರಿ. ನಾಡಿನ ಸಂಸ್ಕೃತಿ-ಪರಂಪರೆಯ ದ್ಯೋತಕವಾದ ಸಮಾರಂಭದಲ್ಲಿ, ಸರ್ಕಾರಿ ನೌಕರನಾದ ಮುಖ್ಯ ಕಾರ್ಯದರ್ಶಿಯು (ಮಾಜಿ)’ಮಹಾರಾಜ’ರ ಜೊತೆಗೆ ನಿಂತು ಅಂಬಾರಿಯ ಪೂಜೆ ಮಾಡುವುದೆಂದರೇನು?! (ಇಲ್ಲಿ ಸಮಾನತೆ-ಮೇಲು-ಕೀಳಿನ ವಿಷಯ ಅಪ್ರಸ್ತುತ. ಪರಂಪರೆಯ ಗೌರವವಷ್ಟೇ ಪ್ರಸ್ತುತ.)

    ಪ್ರತ್ಯುತ್ತರಅಳಿಸಿ