ಶುಕ್ರವಾರ, ಅಕ್ಟೋಬರ್ 2, 2009

ಗಾಂಧೀಜಿ: ಚಳವಳಿ ಮೀರಿದ ಆದರ್ಶ ಪುರುಷ

ಗಾಂಧೀಜಿಯ ಬಗ್ಗೆ ನಾವು ಸಾಕಷ್ಟು ಓದಿದ್ದೇವೆ, ಭಾಷಣಗಳನ್ನು ಕೇಳಿದ್ದೇವೆ. ಗಾಂಧೀ ಸಾಹಿತ್ಯವೂ ಇಂದು ಕೈಗೆಟುಕುವ ದರಗಳಲ್ಲಿ ವಿವಿಧ ಭಾಷೆಗಳಲ್ಲಿ ದೇಶಾದ್ಯಂತ ಲಭ್ಯವಿದೆ. ತೆರೆದ ಪುಸ್ತಕದಂತಿದ್ದ ಗಾಂಧೀಜಿಯ ಜೀವನದ ಬಗ್ಗೆ ಹೊಸದಾಗಿ ಸಂಶೋಧಿಸಿ ಹೇಳಬೇಕಾದ್ದೇನೂ ಉಳಿದಿಲ್ಲ. ಗಾಂಧೀ ಪ್ರಣೀತ ತತ್ತ್ವಗಳ ಉಲ್ಲೇಖದ ನೆಪದಲ್ಲಿ ನಂನಮ್ಮ ಪಾಂಡಿತ್ಯ ಪ್ರದರ್ಶನವೂ ಇಂದು ಸಮಾಜಕ್ಕೆ ಬೇಕಾಗಿಲ್ಲ. ಸಮಾಜಕ್ಕೆ ಇಂದು ಅಗತ್ಯವಾಗಿರುವುದು ಗಾಂಧೀಜಿ ತೋರಿದ ಆದರ್ಶಗಳ ಪಾಲನೆ. ಗಾಂಧೀಜಿಯವರ ಜೀವನ, ಸಾಹಿತ್ಯ ಮತ್ತು ತತ್ತ್ವಗಳ ಅರಿವಿಲ್ಲದವರಿಗೆ, ವಿಶೇಷವಾಗಿ ಇಂದಿನ ಯುವ ಪೀಳಿಗೆಗೆ, ಆ ಅರಿವು ಹುಟ್ಟಿಸಲು ವಿಪುಲ ಸಾಹಿತ್ಯ ಲಭ್ಯವಿದೆ. ಅವರು ಅರಿಯುವ ಮನಸ್ಸು ಮಾಡಬೇಕು ಅಷ್ಟೆ.

ಗಾಂಧಿ ಜಯಂತಿ ಬಂತೆಂದರೆ ನಮ್ಮ ರಾಜಕಾರಣಿಗಳು ಆಡುವ ನಾಟಕ ನೋಡಿ ಅಸಹ್ಯವಾಗುತ್ತದೆ! ಹಲವೊಮ್ಮೆ ಸಿಟ್ಟು ಉಕ್ಕಿಬರುತ್ತದೆ! ಪ್ರತಿ ದಿನ, ಪ್ರತಿ ಗಳಿಗೆ ಗಾಂಧೀ ತತ್ತ್ವದ ವಿರುದ್ಧ ಸಾಗುವ ಈ ರಾಜಕಾರಣಿಗಳು ಗಾಂಧಿ ಜಯಂತಿಯ ದಿನ ಅಪ್ಪಟ ಖಾದಿ ದಿರುಸು ಧರಿಸಿ, ಗಾಂಧಿಟೋಪಿ ತಲೆಗಿಟ್ಟುಕೊಂಡು, ಗಾಂಧೀಜಿ ಫೋಟೋಕ್ಕೆ ಹಾರ ಏರಿಸಿ, ಕ್ಯಾಮೆರಾಗಳ ಮುಂದೆ ಪೋಸು ಕೊಡುತ್ತಾರೆ! ಪರಮ ದುಷ್ಟರೂ ಕಡು ಭ್ರಷ್ಟರೂ ಆದ ಇವರು ಆ ದಿನ ಗಾಂಧೀಜಿಯ ಹೆಸರೆತ್ತಿಕೊಂಡು ನಮಗೆಲ್ಲ ಸತ್ಯ, ಅಹಿಂಸೆ, ಅಸ್ತೇಯ ಗುಣಗಳನ್ನು ಬೋಧಿಸುತ್ತಾರೆ! ತಮಗೇನೂ ಗೊತ್ತಿಲ್ಲದಿದ್ದರೂ ಮಹಾಪಂಡಿತರಂತೆ ಗಾಂಧೀಜಿಯ ಬಗ್ಗೆ ಬೂಸಾ ಬಿಡುತ್ತಾರೆ!

ಗಾಂಧೀಜಿ ಇಂದು ಈ ರಾಜಕಾರಣಿಗಳ ’ಕೈ’ಯಲ್ಲಿ ಜನರನ್ನು ಮರುಳು ಮಾಡುವ ಸಾಧನವಾಗಿದ್ದಾರೆ! ವ್ಯಾಪಾರಿಗಳಿಗೆ ಜಾಹಿರಾತಿನ ವಸ್ತುವಾಗಿದ್ದಾರೆ! ವಿದ್ಯಾರ್ಥಿ ಮತ್ತು ನೌಕರ ಸಮುದಾಯಕ್ಕೆ ವಾರ್ಷಿಕ ರಜಾದಿನದ ಹೇತುವಾಗಿದ್ದಾರೆ! ಗಾಂಧೀಜಿಯ ಬಗ್ಗೆ ಹೆಚ್ಚಿನ ಅರಿವಿಲ್ಲದ ಮತ್ತು ತಿಳಿದುಕೊಳ್ಳುವ ಅಪೇಕ್ಷೆಯೂ ಇಲ್ಲದ ಇಂದಿನ ’ಮಾಡರ್ನ್’ ಯುವ ಪೀಳಿಗೆಗೆ ಗಾಂಧೀಜಿ ಹಾಸ್ಯದ ವಸ್ತುವಾಗಿದ್ದಾರೆ! ಎಂ.ಜಿ.ರೋಡ್ ಆಗಿ ಅವರ ಬಾಯಲ್ಲಿ ಚಾಲ್ತಿಯಲ್ಲಿದ್ದಾರೆ!

ಯುಗಪುರುಷ ಗಾಂಧೀಜಿ ಗತಿಸಿ ಆರೇ ದಶಕಗಳಲ್ಲಿ ಎಂಥ ದುರಂತ!

ಗಾಂಧೀಜಿಯ ಅವತಾರ ಕೇವಲ ಸ್ವಾತಂತ್ರ್ಯ ಚಳವಳಿಯ ಮಟ್ಟಿಗಷ್ಟೇ ಪರಿಗಣನಾರ್ಹ ಎಂದು ನಾವು ಭಾವಿಸಿರುವುದರಿಂದಲ್ಲವೆ ಈ ದುರಂತ? ಸ್ವಾತಂತ್ರ್ಯ ಚಳವಳಿಯ ಸಾಧನೆಯನ್ನೂ ಮೀರಿದ ಆದರ್ಶ ಪುರುಷನೊಬ್ಬ ಗಾಂಧೀಜಿಯಲ್ಲಿದ್ದನೆಂಬುದನ್ನು ಮತ್ತು ಆ ಆದರ್ಶ ಇಂದಿಗೂ-ಎಂದೆಂದಿಗೂ ಅನುಸರಣೀಯವೆಂಬುದನ್ನು ನಾವೇಕೆ ಅರಿಯುತ್ತಿಲ್ಲ?

ಗಾಂಧಿ ಜಯಂತಿಯ ದಿನವಾದ ಇಂದು ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ.

7 ಕಾಮೆಂಟ್‌ಗಳು:

  1. Mr.Shastri,
    I today visted your 'Gulige' and enjoyed it. I do not agree with all your opinions expressed in different articles there. But certain things are to be appreciated.i agree with your voews on Gandhiji.mini poems and note on just stopped 'kendasampigeya kampu'.I do not agree with certain views about dasara last procession.
    AS I have not practiced typing in kannada on computer, I am expressing my reaction in English.Please excuse me. I can typer kannada on a typewriter, but not on computer.
    Please visit my English blogson the following website:
    http://www.hubpages.com/prasadjain
    http://Blogger.com/padmaprasad
    Sincerly yours,
    Dr.S.P.Padmaprasad

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಹಿರಿಯ ವಿದ್ವಾಂಸರಾದ ಡಾ.ಎಸ್.ಪಿ.ಪದ್ಮಪ್ರಸಾದ್ ಅವರಿಗೆ ತುಂಬುಹೃದಯದ ಸ್ವಾಗತ. ತಮ್ಮ ಪ್ರತಿಕ್ರಿಯೆಗಾಗಿ ಮತ್ತು ಪ್ರಾಮಾಣಿಕ ಅಭಿಪ್ರಾಯಕ್ಕಾಗಿ ಧನ್ಯವಾದ. ತಮ್ಮ ಬ್ಲಾಗ್‌ಗಳಿಗೆ ಖಂಡಿತ ಭೇಟಿ ನೀಡುತ್ತೇನೆ. ನನಗದು ಸಂತಸದ ವಿಷಯ.

    ಪ್ರತ್ಯುತ್ತರಅಳಿಸಿ
  4. ಲೋಹಿತ್ ಅವರೇ, ’ಹಿಂದ್ ಸ್ವರಾಜ್’ ನನಗೆ ಬಹಳ ಇಷ್ಟವಾದ ಕೃತಿ. ಅದರ ಬಗ್ಗೆ (ಅಂದರೆ ಅಂಥ ವ್ಯವಸ್ಥೆಯ ಪ್ರಸ್ತುತತೆಯ ಬಗ್ಗೆ) ಬೆಂಗಳೂರಿನ ಗಾಂಧಿ ಸಾಹಿತ್ಯ ಸಂಘದಲ್ಲಿ ನಾನೊಮ್ಮೆ ಉಪನ್ಯಾಸ ಸಹ ಮಾಡಿದ್ದೆ.
    ’ಹಿಂದ್ ಸ್ವರಾಜ್’ ಕುರಿತು ಈ ಬ್ಲಾಗ್‌ನಲ್ಲಿ ಬರೆಯಬೇಕೆಂಬ ಹಂಬಲ ನನ್ನದೂ ಆಗಿದೆ. ಧನ್ಯವಾದ.

    ಪ್ರತ್ಯುತ್ತರಅಳಿಸಿ
  5. ಹೌದು ಹೌದು! ಎಂಥ ದುರಂತ ನಮ್ಮದು.
    ನಾನು ಕಳೆದ ೨೦ ವರ್ಷಗಳಿಂದ ಅಮೆರಿಕದ ವಾಸಿ.
    ಅಮೇರಿಕನ್ ಮಕ್ಕಳು ಗಾಂದಿಜಿಯ ಬಗ್ಗೆ ಅರಿತಷ್ಟೂ, ಕುತೂಹಲ ತಳೆದಷ್ಟೂ ಕೂಡ ಭಾರತೀಯ ಯುವಕರು ಗಾಂಧಿಯವರ ಮಹಾತ್ಮೆ ತಿಳಕೊಂದಿಲ್ಲ ಎಂದು ನನ್ನ ಭಾವನೆ.

    http://www.kamat.com/vikas/blog.php?BlogID=1322


    -ವಿಕಾಸ ಕಾಮತ

    ಪ್ರತ್ಯುತ್ತರಅಳಿಸಿ
  6. ಕಾಲಕ್ಕು ತಾನು ಸಂಯಮ ಕಳೆದು ಕೊಳ್ಳದೆ ಮುಂದುವರೆಯಲು(೨೦ನೆ ಶತಮಾನದಲ್ಲಿ) ಗಾಂಧೀಜಿಯವರ ತತ್ವಗಳ ಆಸರೆ ಬೇಕಾಯಿತೆಂದು ನನ್ನನಿಸಿಕಿ.
    ವಿಪರ್ಯಾಸವೆಂದರೆ ಗಾಂಧಿಯವರನ್ನು ನಾಡಿನ ಹಲವರು ತೆಗಳುವುದರಲ್ಲಿ, ಕೆಲವರು ಹೊಗಳುವುದರಲ್ಲಿ ಕಾಲಹರ್‍ಅಣ ಮಾಡುತ್ತಿದ್ದೇವೆ. ಸರ್ ನೀವು ಹೇಳಿದಂತೆ ತತ್ವ ಪಾಲನೆ ಅತ್ಯಗತ್ಯ.

    ಪ್ರತ್ಯುತ್ತರಅಳಿಸಿ
  7. ವಿಕಾಸ್ ಕಾಮತ್ (ಕಲಾರಂಗ) ಅವರಿಗೆ ಸ್ವಾಗತ.
    ನಮ್ಮ ಇಂದಿನ ಯುವಪೀಳಿಗೆಯ ಕುತೂಹಲಗಳೇ ಬೇರೆ! ಎಲ್ಲರೂ ಹಾಗೆಂದು ಅರ್ಥವಲ್ಲ, ಆದರೆ ಗಣನೀಯ ಸಂಖ್ಯೆಯ ಯುವಕರು ಅನ್ಯ’ವಿಷಯಾ’ಸಕ್ತರು.
    ’ಹಿಂದ್ ಸ್ವರಾಜ್’ ಪ್ರಸ್ತುತತೆ ಬಗ್ಗೆ ನಿಮ್ಮ ಆಂಗ್ಲ ಲೇಖನ ಓದಿದೆ. ವಿಚಾರಶೀಲವಾಗಿದೆ.
    ಶ್ರೀಕಾಂತ್ ಅವರೇ,
    ನಿಮ್ಮ ಅಭಿಪ್ರಾಯ ಅಕ್ಷರಶಃ ಸತ್ಯ.

    ಪ್ರತ್ಯುತ್ತರಅಳಿಸಿ