ಗುರುವಾರ, ಅಕ್ಟೋಬರ್ 1, 2009

ಕೆಂಡಸಂಪಿಗೆಯ ಪರಿಮಳ ಇನ್ನಿಲ್ಲ!

’ಕೆಂಡಸಂಪಿಗೆ’ ಆನ್‌ಲೈನ್ ಪತ್ರಿಕೆ ಅಚಾನಕ್ಕಾಗಿ ತನ್ನ ಪ್ರಕಟಣೆ ನಿಲ್ಲಿಸಿದೆ!
ಇದೀಗಷ್ಟೇ ವಿಷಯ ತಿಳಿದು ಅದರ ಖಾಯಂ ಓದುಗನಾದ ನಾನು ಆಘಾತಕ್ಕೊಳಗಾಗಿದ್ದೇನೆ!
ತತ್‌ಕ್ಷಣ ನನಗನ್ನಿಸಿದ್ದು ಹೀಗೆ:

ಘಮಘಮ ಪರಿಮಳ
ಮಸ್ತಿಷ್ಕದ ನಾಸಿಕಕ್ಕೆ;
ಮಧುರಾನುಭವ
ಅದರ ಹೃದಯಕ್ಕೆ

ಕಡು ಸುವಾಸನೆಯ
ಕೆಂಡಸಂಪಿಗೆ
ಇನ್ನಿಲ್ಲ!
ನಡುನೀರಿನಲ್ಲಿ
ಮುಳುಗಿಹೋಯಿತಲ್ಲ!

ಮಿದುಳ ಕಣ್ಣಿಗೆ ಅದರಂದ
ಸೊಂಪಾಗಿತ್ತು,
ಸಂಪಿಗೆ
ಹದುಳ ತಪ್ಪಿ
ಹೊರಟುಹೋಯಿತೇ?

ಘ್ರಾಣಿಸಿದವರೆ ಎಲ್ಲ,
ಪೋಷಿಸಿದವರಿಲ್ಲ
ಎಂದೇ
ಮುದುಡಿತೇ?

ಏನೇ ಆದರೂ
ಇದು ಸಲ್ಲ
ಇದು ಸಲ್ಲ.

***

ಹೀಗೆ ಅಂತರ್ಜಾಲದ ನಿಧಿಯೊಂದು ಕಣ್ಮರೆಯಾಗುವುದು ಆತಂಕಕಾರಿ ಬೆಳವಣಿಗೆ.
ಪ್ರಿಯ ಮಿತ್ರರೇ,
ನೀವು ’ಕೆಂಡಸಂಪಿಗೆ’ಯ ಓದುಗರಾಗಿದ್ದಿರಾ? ಹೌದಾದರೆ ನಿಮಗೇನನ್ನಿಸುತ್ತಿದೆ?

14 ಕಾಮೆಂಟ್‌ಗಳು:

  1. ಸುದ್ದಿ ಓದಿ ನ೦ಬಲಾಗಲಿಲ್ಲ, ಅದರ ಲಿಂಕ್ ಕ್ಲಿಕ್ಕಿಸಿ ಖಾತ್ರಿಪಡಿಸಿಕೊ೦ಡೆ. ನಾನು ಕೂಡ ಕೆನ್ಡಸ೦ಪಿಗೆಯ ಖಾಯಂ ಓದುಗ. ನಿಮ್ಮಷ್ಟೇ ಆಘಾತವಾಯಿತು.

    ಪ್ರತ್ಯುತ್ತರಅಳಿಸಿ
  2. Are you sure Sir?
    Mr. Rasheed is my friend and my senior in MA at Mysore University. We are colleagues, of course at different Stations of AIR. Let me check up. If it is true, sorry, May it find another beginning soon.
    Bedre Manjunath

    ಪ್ರತ್ಯುತ್ತರಅಳಿಸಿ
  3. ಸಾರ್...ಸಾರ್...ಸಾರ್

    "ಸಂಪದ ಕೋಮಾ, ಸಂಪಿಗೆ ಗೋತಾ"
    ಹೀಗಾಗ್ಬಾರ್ದಿತ್ತು :(

    ಪ್ರತ್ಯುತ್ತರಅಳಿಸಿ
  4. ಕಳಕಳಿ ವ್ಯಕ್ತಪಡಿಸಿರುವ ಮೂವರು ಮಿತ್ರರಿಗೂ ಧನ್ಯವಾದಗಳು. ಬೇರೊಂದು ಮರದಲ್ಲಾದರೂ ಅಬ್ದುಲ್ ರಶೀದರ ಕೃಷಿಯ ಸಂಪಿಗೆ ಅರಳಲೆಂದು ಹಾರೈಸೋಣ.

    ಪ್ರತ್ಯುತ್ತರಅಳಿಸಿ
  5. ನಾನು ಕೂಡ ಕೆಂಡ ಸಂಪಿಗೆಯ ಕಾಯಂ ಓದುಗ.. ಆದರೆ ವೆಬ್ ಲಿಂಕ್ ನೋಡಿ ಖಚಿತ ಪಡಿಸಿ ಕೊಂಡೆ....ಆದರೆ ಕಾರಣ ತಿಳಿದು ಬಂದಿಲ್ಲ...ಯಾವ ಕಾರಣಕ್ಕಾಗಿ ನಿಲ್ಲಿಸುತ್ತ ಇದ್ದಾರೆ?

    ಪ್ರತ್ಯುತ್ತರಅಳಿಸಿ
  6. ಹೀಗೆ ಆಗಬಾರದಿತ್ತು...

    ಮತ್ತೆ ಶುರು ಮಾಡಬಹುದು...

    ಪ್ರತ್ಯುತ್ತರಅಳಿಸಿ
  7. ಸರ್,
    ನನಗೂ ತುಂಬ ಬೇಸರವಾಯ್ತು. ಕೆಂಡಸಂಪಿಗೆಯಲ್ಲಿನ ಬರಹಗಳು ಪುಸ್ತಕರೂಪದಲ್ಲಿ ಹೊರಬರಲಿ.

    ಪ್ರತ್ಯುತ್ತರಅಳಿಸಿ
  8. ಅಯ್ಯೋ ರಾಮಾ...!
    ಇದೇಕೆ ಹೀಗೆ. ಸಂಪದವೂ ಇನ್ನೂ ಬಂದಿಲ್ಲ .
    ಕೆಂಡಸಂಪಿಗೆಯೂ ಹೋಯಿತಲ್ಲ
    ಛೆ.. ಆನಂದ ಕನ್ನಡಿಗರಿಗೆ ಇಲ್ಲವಾಯಿತಲ್ಲ...

    ಪ್ರತ್ಯುತ್ತರಅಳಿಸಿ
  9. ನನ್ನ ಬ್ಲಾಗ್ ಮಿತ್ರರಾದ ಶ್ಯಾಮ್, ಗುರು ಪ್ರಸಾದ್, ಪ್ರಕಾಶ್ ಹೆಗ್ಡೆ, ಮಲ್ಲಿಕಾರ್ಜುನ, ರಾಘವೇಂದ್ರ ಶರ್ಮ ಅವರೇ,
    ’ಕೆಂಡಸಂಪಿಗೆ’ಯ ಬಗ್ಗೆ ನಿಮ್ಮ ಕಳವಳವೇ ನನ್ನದೂ ಆಗಿದೆ. ಅಬ್ದುಲ್ ರಶೀದ್ ಅವರಿಗೆ ವಿ-ಅಂಚೆ ಕಳಿಸಿದ್ದೇನೆ. ಉತ್ತರ ಬಂದೀತು, ಕಾದು ನೋಡುವಾ.

    ಪ್ರತ್ಯುತ್ತರಅಳಿಸಿ
  10. ನಿಜ. ಕೆಂಡ ಸಂಪಿಗೆ ಏಕಾಏಕಿ ಇನ್ನಿಲ್ಲವಾದದ್ದು ಬೇಸರ ತರಿಸಿದೆ
    ಕೇಶವ ಪ್ರಸಾದ್ ಬಿ ಕಿದೂರು

    ಪ್ರತ್ಯುತ್ತರಅಳಿಸಿ
  11. ಪತ್ರಕರ್ತ, ’ನುಡಿಚೈತ್ರ’ದ ಹೂಗಾರ ಕೇಶವ ಪ್ರಸಾದ್ ಅವರಿಗೆ ಸ್ವಾಗತ.
    ಪ್ರತಿಕ್ರಿಯೆಗಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ
  12. ಸ್ವಾಗತ ಶಿವಪ್ರಕಾಶ್ ಅವರೇ.
    ಸಂಪಿಗೆ ಮತ್ತೆ ಅರಳುವುದೆಂದು ಆಶಿಸೋಣ.

    ಪ್ರತ್ಯುತ್ತರಅಳಿಸಿ