ಶನಿವಾರ, ಅಕ್ಟೋಬರ್ 3, 2009

ಪರಿಹಾರ ಕಾರ್ಯಕ್ಕೆ ಕೈಜೋಡಿಸೋಣ

ರೋಂ ನಗರ ಉರಿಯುತ್ತಿದ್ದಾಗ ಚಕ್ರವರ್ತಿ ನೀರೊ ಪಿಟೀಲು ಬಾರಿಸುತ್ತಿದ್ದನಂತೆ! ಉತ್ತರ ಕರ್ನಾಟಕವು ನೀರಿನಲ್ಲಿ ಮುಳುಗುತ್ತಿದ್ದಾಗ ಮುಖ್ಯಮಂತ್ರಿ ಯಡಿಯೂರಪ್ಪ ದಾಬಸ್‌ಪೇಟೆಯಲ್ಲಿ ಸನ್ಮಾನ ಮಾಡಿಸಿಕೊಳ್ಳುತ್ತಿದ್ದರು! ನೀರು ಬಂದು ಜನರನ್ನು ಆಹುತಿ ತೆಗೆದುಕೊಳ್ಳುತ್ತಿದ್ದಾಗ ಯಡಿಯೂರಪ್ಪನವರು ’ಕ್ಷೀರ ಬಂಧು’ ಬಿರುದು ಸ್ವೀಕರಿಸುತ್ತಿದ್ದರು!

ಉತ್ತರ ಕರ್ನಾಟಕದ ಈ ಕುಂಭದ್ರೋಣ ಮಳೆ ತೀರಾ ಅನಿರೀಕ್ಷಿತವೇನಲ್ಲ. ವಾರದ ಮೊದಲಿಂದಲೂ ಹವಾಮಾನ ಇಲಾಖೆಯು ವಾಯುಭಾರ ಕುಸಿತದ ಬಗ್ಗೆ ಮತ್ತು ಸಂಭವನೀಯ ಅತಿವೃಷ್ಟಿಯ ಬಗ್ಗೆ ಎಚ್ಚರಿಸುತ್ತಲೇ ಇತ್ತು. ಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡು ಸರ್ಕಾರವು ನದಿಪಾತ್ರಗಳ ಮತ್ತು ತಗ್ಗು ಪ್ರದೇಶಗಳ ಜನರನ್ನು ಆರಂಭದಲ್ಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದ್ದರೆ ಮತ್ತು ಮಾಧ್ಯಮಗಳ ವರದಿ ತಲುಪದ ಕುಗ್ರಾಮಗಳಲ್ಲಿ ಹಾಗೂ ಬಡ ಜನರ ವಾಸಸ್ಥಳಗಳಲ್ಲಿ ಡಂಗುರ ಸಾರಿಸಿ ಅತಿವೃಷ್ಟಿಯ ಬಗ್ಗೆ ಎಚ್ಚರಿಕೆ ಮತ್ತು ಅಗತ್ಯ ಸೂಚನೆಗಳನ್ನು ನೀಡಿದ್ದರೆ ಸಾವುನೋವಿನ ಪ್ರಮಾಣವನ್ನು ಸಾಕಷ್ಟು ತಗ್ಗಿಸಬಹುದಿತ್ತು. ಆದರೆ ಆ ಕೆಲಸವನ್ನು ಸರ್ಕಾರವು ಮಾಡಲಿಲ್ಲ.

ನಿಧಾನವಾಗಿಯಾದರೂ ಈಗ ಸರ್ಕಾರ ಎಚ್ಚತ್ತಿದೆ. ಸಮರೋಪಾದಿಯಲ್ಲಿ ಪರಿಹಾರಕಾರ್ಯಗಳನ್ನು ಕೈಗೊಂಡಿದೆ. ಪರಿಹಾರಕಾರ್ಯಗಳಿಗೆ ಸರ್ಕಾರದ ಜೊತೆ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರೂ ಕೈಜೋಡಿಸುವುದು ಈ ತುರ್ತು ಸನ್ನಿವೇಶದಲ್ಲಿ ಅತ್ಯಗತ್ಯ. ಇಂದಲ್ಲ ನಾಳೆ ಮಳೆ ನಿಂತು ಪ್ರವಾಹವೇನೋ ಇಳಿಯುತ್ತದೆ, ಆದರೆ, ಆಹಾರದ ಕೊರತೆ, ಕುಡಿಯುವ ನೀರಿನ ಕೊರತೆ, ವಸತಿ ಸಮಸ್ಯೆ, ಸಾಂಕ್ರಾಮಿಕ ರೋಗಗಳು, ಮುಂತಾದ ಪಿಡುಗುಗಳು ಪ್ರವಾಹ ಸಂತ್ರಸ್ತರನ್ನು ದೀರ್ಘಕಾಲ ಕಾಡತೊಡಗುತ್ತವೆ. ಈ ಪಿಡುಗುಗಳ ನಿವಾರಣೆಯ ದಿಸೆಯಲ್ಲಿ ಸರ್ಕಾರವು ಸುಯೋಜಿತವಾಗಿ ಮತ್ತು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖವಾಗಬೇಕು. ವಿವಿಧ ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಸರ್ಕಾರಕ್ಕೆ ಸಹಾಯಹಸ್ತ ಚಾಚಬೇಕು. ಸಂಘಸಂಸ್ಥೆಗಳು ತಾವೂ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.

ಈ ಸಲದ ದೀಪಾವಳಿಯಲ್ಲಿ ನಾವೆಲ್ಲ ಪಟಾಕಿ ಸುಡದಿರಲು ನಿರ್ಧರಿಸೋಣ. ಆ ಹಣವನ್ನು ’ಮುಖ್ಯಮಂತ್ರಿಗಳ ಪರಿಹಾರ ನಿದಿ’ಗಾಗಲೀ ಯಾವುದಾದರೂ ವಿಶ್ವಸನೀಯ ’ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ’ಗಾಗಲೀ ನೀಡೋಣ. ನಮ್ಮ ಬಂಧುಗಳು ಅಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು, ರೋಗರುಜಿನಗಳಿಗೆ ತುತ್ತಾಗಿ, ತಿನ್ನಲು ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ, ಮಲಗಲು ಸೂರಿಲ್ಲದೆ ಸಂಕಟಪಡುತ್ತಿರುವಾಗ ನಾವಿಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸಲು ಮನಸ್ಸಾದರೂ ಹೇಗೆ ಒಪ್ಪುತ್ತದೆ? ಅಲ್ಲವೆ?

9 ಕಾಮೆಂಟ್‌ಗಳು:

  1. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ನಿಜ ಶಾಸ್ತ್ರಿಗಳೇ ನಿಜ! ಆದರೆ ಒಪ್ಪಲು ಅಥವಾ ಬಿಡಲು `ಮನಸ್ಸು' ಅಥವಾ ಅದನ್ನು ವೀಕ್ಷಿಸುವ `ಮನಸ್ಸಾಕ್ಷಿ' ಎಂಬುದಾದರೂ ಇರಬೇಕಲ್ಲ...ಈ ದೇಶದಲ್ಲಿ ಇಂತಹ ಮನಸ್ಸಾಕ್ಷಿ ಅಥವಾ `ಸಾಕ್ಷಿ ಪ್ರಜ್ಞೆ' ಎಂಬುದು ಎಲ್ಲಾದರೂ ಇದ್ದರೆ ಹುಡುಕಿಕೊಡುವಿರಾ...!?
    ಎಚ್.ಎಸ್. ಪ್ರಭಾಕರ, ಪತ್ರಕರ್ತ, ಹಾಸನ.

    ಪ್ರತ್ಯುತ್ತರಅಳಿಸಿ
  4. ಧನ್ಯವಾದ ರೂಪಾ ಅವರೇ.
    ಸ್ವಾಗತ ಪ್ರಭಾಕರ ಅವರೇ, ನಮಗೆ ಬಹುತೇಕರಿಗೆ ಮನಸ್ಸಾಕ್ಷಿಯೂ ಇಲ್ಲ, ಸಾಕ್ಷಿಪ್ರಜ್ಞೆಯೂ ಇಲ್ಲ, ಯೇನಕೇನ ಪ್ರಕಾರೇಣ ಉಂಡುಟ್ಟು ನಿರ್ಗಮಿಸುವುದಷ್ಟೇ ನಮ್ಮ ಜೀವನೋದ್ದೇಶವಾಗಿದೆ!
    ಲೋಹಿತ್ (ಲೋದ್ಯಾಶಿ) ಅವರೇ, ನಿಮ್ಮ ಕಳಕಳಿಯನ್ನು ಮೆಚ್ಚುತ್ತೇನೆ. ನಾನು ಮುಂಚಿತವಾಗಿ ಪತ್ರಿಕೆಗಳಿಗೆ ಬರೆದಿದ್ದೆ. ಪತ್ರಿಕೆಗಳು ಪ್ರಕಟಿಸಲಿಲ್ಲ. ಬ್ಲಾಗ್ ಓದುಗರಿಗೆ ಗೊತ್ತಿದ್ದ ವಿಷಯವೇ ಆದ್ದರಿಂದ ಬ್ಲಾಗ್‌ನಲ್ಲಿ ಬರೆಯಲಿಲ್ಲ. ಇಷ್ಟಕ್ಕೂ, ಹವಾಮಾನ ಇಲಾಖೆಯ ಮುನ್ಸೂಚನೆ ನನಗೆ ಮಾತ್ರ ತಿಳಿದದದ್ದಲ್ಲ, ಎಲ್ಲ ಪತ್ರಿಕೆಗಳಲ್ಲೂ, ರೇಡಿಯೋ ಮತ್ತು ಟಿವಿ ಚಾನೆಲ್‌ಗಳಲ್ಲೂ ಮೇಲಿಂದಮೇಲೆ ಪ್ರಚುರಗೊಂಡಿತು. ಹವಾಮಾನ ಇಲಾಖೆಯು ಸರ್ಕಾರದ ಸಂಸ್ಥೆಯೇ ಆಗಿದ್ದು ಪ್ರತಿ ಜಿಲ್ಲಾಡಳಿತಕ್ಕೂ ಅದರೊಡನೆ ಸಂಪರ್ಕವಿರುತ್ತದೆ. ಅಂದಮೇಲೆ ಮುಂಜಾಗ್ರತಾ ಕ್ರಮವು ಸರ್ಕಾರದ ಹೊಣೆಯಲ್ಲವೆ? ’ಕ್ಷೀರಬಂಧು’ ಉಲ್ಲೇಖದ ಹಿಂದಿರುವ ವಿಡಂಬನೆ ಗಮನಿಸಿ.

    ಪ್ರತ್ಯುತ್ತರಅಳಿಸಿ
  5. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  6. OK ಲೋಹಿತ್. ನಿಮ್ಮ ಸಾಮಾಜಿಕ ಕಳಕಳಿಗೆ ಮತ್ತೊಮ್ಮೆ ನನ್ನ hats off.
    ಸಂತ್ರಸ್ತರ ಪರಿಹಾರಕಾರ್ಯಗಳಿಗೆ ನೆರವಾಗುವ ಕರ್ತವ್ಯವನ್ನು ನಾನು ಲಾಗಾಯ್ತಿನಿಂದಲೂ ಮಾಡುತ್ತಬಂದಿದ್ದೇನೆ. ನೀವು ನನಗೆ ಇನ್ನಷ್ಟು ಸ್ಫೂರ್ತಿ ನೀಡಿದ್ದೀರಿ.
    ’ಬೆಣ್ಣೆಮಸಾಲದೋಸೆ’ಯನ್ನು ನಾನು ಮೊದಲಿನಿಂದಲೂ ಗಮನಿಸುತ್ತಿದ್ದೇನೆ. ನನ್ನನ್ನೂ ದಾಖಲಿಸಿದ್ದೀರಿ, ನೆನೆದಿದ್ದೀರಿ. ಧನ್ಯವಾದ.
    ಅಂದಹಾಗೆ, ನಾನು ಬೆಣ್ಣೆಮಸಾಲೆದೋಸೆ ಊರಿನವನೇ. ದಾವಣಗೆರೆಯವನು.

    ಪ್ರತ್ಯುತ್ತರಅಳಿಸಿ
  7. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ