ಬುಧವಾರ, ಜೂನ್ 3, 2009

ಎಂಥ ಮನುಷ್ಯರಿವರು?

* ಎಲ್.ಕೆ.ಅಡ್ವಾಣಿ ’ಉಕ್ಕಿನ ಮನುಷ್ಯ’.
* ಅರ್ಜುನ್ ಸಿಂಗ್ ’ತುಕ್ಕಿನ ಮನುಷ್ಯ’.
* ಬಾಳ್ ಠಾಕ್ರೆ ’ಸೊಕ್ಕಿನ ಮನುಷ್ಯ’.
* ಅಬ್ದುಲ್ ಕರೀಂ ತೆಲಗಿ ’ಠಕ್ಕಿನ ಮನುಷ್ಯ’.
* ರಾಮೇಶ್ವರ ಠಾಕುರ್ ’ಸುಕ್ಕಿನ ಮನುಷ್ಯ’.
* ರಾಹುಲ್ ಗಾಂಧಿ ’ಲುಕ್ಕಿನ ಮನುಷ್ಯ’.
* ಜನಾರ್ದನಸ್ವಾಮಿ ’ಲಕ್ಕಿನ ಮನುಷ್ಯ’.
* ಅರವಿಂದ ಅಡಿಗ ’ಬುಕ್ಕಿನ ಮನುಷ್ಯ’.
* ಮುಖೇಶ್ ಅಂಬಾನಿ ’ಚೆಕ್ಕಿನ ಮನುಷ್ಯ’.
* ಪುನೀತ್ ರಾಜ್‌ಕುಮಾರ್ ’ಕೊಕ್ಕಿನ ಮನುಷ್ಯ’.
* ಶ್ರೀಸಾಮಾನ್ಯ ’ಹಕ್ಕಿನ ಮನುಷ್ಯ’.
* ಯೆಂಡ್ಕುಡ್ಕ ರತ್ನ ’ಕಿಕ್ಕಿನ ಮನುಷ್ಯ’.
* ಕುಮಾರಸ್ವಾಮಿ ’ಬೆಕ್ಕಿನ ಮನುಷ್ಯ’.
(ಬೆಕ್ಕು ಕಣ್ಣುಮುಚ್ಚಿಕೊಂಡು ಹಾಲು ಕುಡಿಯುತ್ತೆ; ಕುಮಾರಣ್ಣ ಮುಖ ಮುಚ್ಚಿಕೊಂಡು ಸೋನಿಯಾ ಭೇಟಿಗೆ ಹೋಗ್ತಾರೆ.)
* ದೇವೇಗೌಡರು ’ಹುಕ್ಕಿನ ಮನುಷ್ಯ’.
(ಹುಕ್ ಅಂದರೆ ಕೊಕ್ಕೆ. ’ನೈಸ್’, ರಫ್, ಎಲ್ಲಾ ಯೋಜನೆಗಳಿಗೂ ಗೌಡರ ಕೊಕ್ಕೆ!)

12 ಕಾಮೆಂಟ್‌ಗಳು:

  1. ಚೆನ್ನಾಗಿದೆ, ಮು೦ದುವರಿಯಲಿ ಸರ್ ಗುಳಿಗೆ ಪುರಾಣ.ಓದಿ, ಕೇಳಿ ಪುನೀತರಾಗುತ್ತೇವೆ.

    ಪ್ರತ್ಯುತ್ತರಅಳಿಸಿ
  2. ಸರ್,

    ತುಂಬಾ ಚೆನ್ನಾಗಿದೆ....ಮುಂದುವರಿಯಲಿ.....

    ಪ್ರತ್ಯುತ್ತರಅಳಿಸಿ
  3. ಎಂಥ ಮನುಷ್ಯರಿವರು? - I liked it a lot Anandmava....real entertaining. I am thinking of adding somemore ....kkina manushya but I am not getting any. But I know given few minutes to you, you would add few more to this list.

    ಪ್ರತ್ಯುತ್ತರಅಳಿಸಿ
  4. ಆನಂದರಾಮ ಶಾಸ್ತ್ರೀ ‘ನಕ್ಕೀ’ ಮನುಷ್ಯ.
    (ನಕ್ಕಿ=ಖಂಡಿತವಾಗಿ)

    ಪ್ರತ್ಯುತ್ತರಅಳಿಸಿ
  5. ಪರಾಂಜಪೆ ಅವರೆ, ಪುನೀತ ನಾನು (ಮತ್ತು ನನ್ನ ಉಲ್ಲೇಖದಿಂದಾಗಿ ರಾಜ್ ಪುತ್ರ).
    ಶಿವು ಅವರೆ, ಮೆಚ್ಚುಗೆಗೆ ಧನ್ಯವಾದ.
    ಅನೂರಾಧಾ ಅವರೆ, ನಾನು ಪದಗಳ ಟ್ರಿಕ್ಕಿನ ಮಾವ!
    ಮಂಜುನಾಥ ಬೇದ್ರೆ ಅವರೆ, ನಿಮ್ಮ pat on the back ಸ್ವೀಕ್‌ಅರಿಸಿದ್ದೇನೆ. ಧನ್ಯವಾದ.
    ಶಿವಪ್ರಕಾಶ್ ಅವರೆ, ಧನ್‌ಧನ್‌ಧನ್‌ಯವಾದ.
    ರೂಪಾ ಅವರೆ, ಸೂಪರ್‍ ಥ್ಯಾಂಕ್ಸು, ಹ್ಞಾ.
    ಬಾಲು ಅವರೆ, ನಿಮಗೂ ಸೂಪರ್‍ ಥ್ಯಾಂಕ್ಸು ಇವೆ ಸ್ವಾಮಿ.
    ಸುನಾಥ್ ಅವರೆ, ಹೂನ್ರೀ ಯಪಾ, ನಾನು ನಕ್ಕಿ‍ ಮನ್ಷಾನ.
    (ನಕ್ಕಿ=ಬ್ಯಾಗಡಿ=ಬೇಗಡೆ)

    ಪ್ರತ್ಯುತ್ತರಅಳಿಸಿ
  6. ಸರ್, ತುಂಬಾ ಚೆನ್ನಾಗಿದೆ. ಎಷ್ಟೋಂದು ಪದಪುಂಜಗಳನ್ನು "ಕಕ್ಕಿ"ದ್ದೀರಿ!

    ಪ್ರತ್ಯುತ್ತರಅಳಿಸಿ
  7. ಚೆನ್ನ ಮಲ್ಲಿಕಾರ್ಜುನಾ ನಿಮ್ಮ ಪ್ರತಿಕ್ರಿಯೆ. ಧನ್ಯವಾದ.
    ಮುಖದಲಿ ವಿಕಾಸ ತೋರಿದ ಹೆಗ್ಡೇರಿಗೂ ಧನ್ಯವಾದ.

    ಪ್ರತ್ಯುತ್ತರಅಳಿಸಿ