ಮಂಗಳವಾರ, ಜೂನ್ 30, 2009

ದಿನಕ್ಕೊಂದು ಕವನ: (೪) ಶಬ್ದ-ನಿಶ್ಶಬ್ದ

’ರಾಮ ಹರೇ, ಕೃಷ್ಣ ಹರೇ’ ಜಪ
’ಕುಹೂ, ಕುಹೂ’ ಆಲಾಪ
’ಜುಳು ಜುಳು’ ಮಂಜುಳ ನಾದ
ಮಗುವಿನ ನಗುವಿನ
’ಕಿಟಿ ಕಿಟಿ’ ಮೋದ
’ಹೊಡಿ! ಬಡಿ! ಗುದ್ದು!’
’ಢಂ! ಢಮಾರ್!’ ಸದ್ದು
’ಅಯ್ಯೋ! ಅಮ್ಮಾ!’ ಚೀತ್ಕಾರ
’ಯಾರು?! ಎಲ್ಲಿ?’ ಫೂತ್ಕಾರ

ಎಲ್ಲವೂ
ಶಬ್ದಗಳೇ.
ಆದರೆ,
ಎಷ್ಟೊಂದು ವ್ಯತ್ಯಾಸ!

ಜೀವನವೇ ಶಬ್ದ
ಸಾವು ನಿಶ್ಶಬ್ದ

ಒಮ್ಮೆ ಅದು ಸುಂದರ ಇದು ಭೀಕರ
ಇನ್ನೊಮ್ಮೆ
ಇದು ಸುಂದರ ಅದು ಭೀಕರ.
ಎಂಥ ವಿಪರ್ಯಾಸ!

ಅದಕ್ಕೇ ಇರಬೇಕು
ಶಬ್ದ-ನಿಶ್ಶಬ್ದಗಳಾಚೆಯ
ಶಾಂತಿಗಾಗಿ ಹಂಬಲಿಸುವುದು
ಪ್ರಾಜ್ಞರ
ಮಾನಸ.

2 ಕಾಮೆಂಟ್‌ಗಳು:

  1. ದಿನವು ನಿಮ್ಮ ಕವನ ಓದುತ್ತಿದ್ದೇನೆ. ಆದರೆ ಸಮಯಾಭಾವದಿ೦ದ ಕಮೆ೦ಟಿಸಲು ಆಗುತ್ತಿಲ್ಲ. ಚಿ೦ತನೆಗೆ ಹಚ್ಚುವ ವಿಚಾರ ಗಳನ್ನು ಕವನವಾಗಿಸಿದ್ದಿರಿ. ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ