ಭೂಮಿಯ ಹಸಿರನ್ನೆಲ್ಲ
ನೇಯ್ದು ಸೀರೆ ಮಾಡಿ
ನಿನಗೆ ಉಡಿಸಬೇಕೆಂಬ ಆಸೆ
ಭೂಗರ್ಭದ ಹೊನ್ನನ್ನೆಲ್ಲ
ಆಯ್ದು ಆಭರಣ ಮಾಡಿ
ನಿನಗೆ ತೊಡಿಸಬೇಕೆಂಬ ಆಸೆ
ನಕ್ಷತ್ರಗಳನ್ನೆಲ್ಲ ಪೋಣಿಸಿ
ನಿನಗೆ ಮುಡಿಸುವ ಆಸೆ
ಪೂರ್ಣಚಂದ್ರನನ್ನು ನಿನ್ನ ಕೈಗೆ
ಕನ್ನಡಿಯಾಗಿ ಕೊಡುವ ಆಸೆ
ಮೋಡಗಳಮೇಲೆ ನಿನ್ನನ್ನು
ಮೆರೆಸುವ ಆಸೆ
ನಿನ್ನ ಮೈ
ಮರೆಸುವ ಆಸೆ
ಬಳಿಕ,
ನಿನ್ನ ಅವಗುಂಠನವ
ಸರಿಸುವಾಸೆ
ನಿನ್ನ ನೊಸಲಿಗೆ ತಿಲಕ
ಇರಿಸುವಾಸೆ
ನಿನ್ನ ವರ್ಣನೆಯ ಮಳೆ
ಸುರಿಸುವಾಸೆ
ನಿನ್ನ ಸಂತಸದ ಹೊಳೆ
ಹರಿಸುವಾಸೆ
ಪದಗಳನ್ನಾರಿಸಿ ನಿನ್ನ
ಪಾದಕ್ಕೆ ಇಡುವಾಸೆ
ಪದ್ಯಗಳ ಹಾಡಿ ನಿನ್ನನು
ಮುದಗೊಳಿಸುವಾಸೆ
ಹದವಾಗಿ ನಿನ್ನನ್ನು
ರಮಿಸುವಾಸೆ
ಬದುಕಾಗಿ ನಿನ್ನನ್ನು
ವರಿಸುವಾಸೆ
ಹೀಗೆ,
ನಿನ್ನಮೇಲೆನ್ನ
ಗೆಲುವಿನಾಸೆ
ಎಲೆ!
ಕಾವ್ಯ
ಕನ್ನಿಕೆಯೆ!
ನನಗೆ
ನಿನ್ನೊಲವಿನ
ಆಸೆ
ಶನಿವಾರ, ಜೂನ್ 27, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
sogasada kavite.
ಪ್ರತ್ಯುತ್ತರಅಳಿಸಿshastriji firsttime i am visiting your blog.
ಪ್ರತ್ಯುತ್ತರಅಳಿಸಿgood writeups especially of pakistan
keepvisiting my blog also
usdesai.blogspot.com
ಮಿತ್ರದ್ವಯರಿಗೆ ಹೃತ್ಪೂರ್ವಕ ಧನ್ಯವಾದಗಳು.
ಪ್ರತ್ಯುತ್ತರಅಳಿಸಿ