ಗುರುವಾರ, ಆಗಸ್ಟ್ 6, 2009

ದಿನಕ್ಕೊಂದು ಕವನ: (೧೭) ನನ್ನ ಜೀವನ

ಅರ್ಥರಹಿತ ಪದಪುಂಜವನ್ನು
ಕವಿತೆಯೆಂದು ಕರೆಯುವ
ದುಸ್ಸಾಹಸದಂತೆ
ನನ್ನ ಜೀವನ

ಕಥೆಯೆಂದೊರೆವ ಹೇಳಿಕೆಗೆ
ಅರಿವಾಗದ ತಿರುವು ಕೊಡುವ
ಅನರ್ಥದಂತೆ
ನನ್ನ ಜೀವನ

ತಲೆಬುಡವಿಲ್ಲದೆ ಸಾಗುವ
ತರಾವರಿ ಮಸಾಲೆಭರಿತ
ಧಾರಾವಾಹಿ ಕಾದಂಬರಿಯಂತೆ
ನನ್ನ ಜೀವನ

ಪದಗಳ ಬಂಧವೇ ಮುಖ್ಯವಾಗಿ
ಪದಾರ್ಥವೇ ಶೂನ್ಯವಾದ
ಪ್ರಬಂಧದಂತೆ
ನನ್ನ ಜೀವನ

ನಗುವಿನ ಬದಲು ಅಳು ಉಕ್ಕಿಸುವ
ಹಾಸ್ಯವೆಂಬುದು ಅಪಹಾಸ್ಯವಾಗುವ
ನಗೆಬರಹದಂತೆ
ನನ್ನ ಜೀವನ

ಓದಿದರೆ ತಲೆಕೆಡುವ
ನೋಡಿದರೆ ಕಂಗೆಡುವ
ನವ್ಯ
ಅಸಂಗತ
ನಾಟಕದಂತೆ
ನನ್ನ ಜೀವನ

ಅರ್ಥವಿಲ್ಲದ
ಶಬ್ದ,
ಲಾಲಿತ್ಯವಿಲ್ಲದ
ಸಾಹಿತ್ಯ
ನನ್ನ ಜೀವನ

4 ಕಾಮೆಂಟ್‌ಗಳು:

  1. ಜೀವನದ ಶೂನ್ಯತೆಯನ್ನು ಪ್ರಬ೦ಧ, ಧಾರಾವಾಹಿ, ಕಾದ೦ಬರಿ, ನಾಟಕ, ನಗೆಬರಹ ಗಳೊ೦ದಿಗೆ ಥಳಕು ಹಾಕಿ ಪೋಣಿಸಿದ ಕವನದಲ್ಲಿ ಅಡಗಿರುವ ಸತ್ಯ ಅಣಕಿಸುವ೦ತಿದೆ

    ಪ್ರತ್ಯುತ್ತರಅಳಿಸಿ
  2. ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.

    ಪ್ರತ್ಯುತ್ತರಅಳಿಸಿ
  3. ಆನ೦ದ ಸರ್ ,
    ನೀವು ಬರೆಯುವ ಕವನ ,ಗುಳಿಗೆ ಗಳಿಗೆ ನಾನು ಏನೆ೦ದು ಪ್ರತಿಕ್ರಯಿಸಲಿ ? ಎಲ್ಲವು ಎಷ್ಟು ಅರ್ಥ ಗರ್ಭಿತವಾಗಿದೆ ಎ೦ದರೆ ನಾನು ಅದನ್ನು ಪೂರ್ಣವಾಗಿ ಅರ್ಥ ಮಾಡಿ ಕೊಳ್ಳಲು ನಾನು ಅನುಭವದಲ್ಲಿ ತು೦ಬಾ ಸಣ್ಣವಳು ಎನಿಸಿತು ಸಾರ್ ..
    ನಿಮ್ಮ ಪ್ರತಿ ಶಬ್ದ ಗಳನ್ನು ಅಬ್ಬ ಎಷ್ಟು ಕರಾರುವಕ್ಕಾಗಿ ಎಷ್ಟು ಸು೦ದರವಾಗಿ ಹಾಕಿದ್ದೀರಿ !!! .. ನನ್ನ ಮಿತಿ ಯಲ್ಲಿ ನಾನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ
    ತು೦ಬಾ ತು೦ಬಾ ಧನ್ಯವಾದಗಳು ...

    ಪ್ರತ್ಯುತ್ತರಅಳಿಸಿ
  4. ಮಿತ್ರ ಪರಾಂಜಪೆ ಅವರೇ,
    ನಿಮ್ಮ ಚೊಕ್ಕ ವಿಮರ್ಶೆ(ಗಳಿ)ಗಾಗಿ ನಾನು ಋಣಿ.
    ಅಮ್ಮಾ, ರೂಪಾ ಅವರೇ,
    ನಾನಾದರೂ ಏನೆಂದು ಮರುತ್ತರ ನೀಡಲಿ?
    ನಾನು ಧನ್ಯ!
    ಇಷ್ಟೇ ಹೇಳುತ್ತೇನೆ.

    ಪ್ರತ್ಯುತ್ತರಅಳಿಸಿ