ಪ್ರಸ್ತುತ ವಿವಾದಕ್ಕೀಡಾಗಿರುವ ತಮ್ಮ ’ಜಿನ್ನಾ: ಇಂಡಿಯಾ, ಪಾರ್ಟಿಷನ್, ಇಂಡಿಪೆಂಡೆನ್ಸ್’ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಒಂದು ಕಡೆ ಹೀಗೆ ಹೇಳುತ್ತಾರೆ:
"ಭಾರತದ ಮಣ್ಣಿನಿಂದ ರೂಪುಗೊಂಡು ಭಾರತೀಯ ಅನುಭವದಿಂದ ಹದಗೊಂಡ ಭಾರತೀಯ ತಾನೆಂಬ ತನ್ನ ಮೂಲವನ್ನು ತಿರಸ್ಕರಿಸಿದುದು ಜಿನ್ನಾ ಅವರ ಭಾವನೆಯ ಪ್ರಾಥಮಿಕ ಮತ್ತು ರಾಚನಿಕ ಪ್ರಮಾದ."
ಮುಂದುವರಿದು ಜಸ್ವಂತ್ ಸಿಂಗ್ ಹೇಳುತ್ತಾರೆ:
"ಸರಿಯಲ್ಲದ ಈ ’ಅಲ್ಪಸಂಖ್ಯಾತ ಭಾವಲಕ್ಷಣ’ದಿಂದಾಗಿ ದೇಶವಿಭಜನೆಯೆಂಬ ಒಣ ಅವಿವೇಕವು ಮೊಟ್ಟಮೊದಲು ಅಣಿಗೊಂಡದ್ದು. ಅನಂತರ ಈ ಅವಿವೇಕವು (ತನಗೆದುರಾದ) ತಡೆಯನ್ನು ನೀಗಿಕೊಳ್ಳುತ್ತ ಅವಿಚ್ಛಿನ್ನ ಭಾರತದ ಸಂಪೂರ್ಣ ರಚನೆಯನ್ನು ಮತ್ತು ಭವ್ಯ ಸೌಧವನ್ನು ಸಂಕಟಕ್ಕೀಡುಮಾಡಿತು. ಇದಕ್ಕೆ ಉತ್ತರವು (ಮದ್ದು?) ದೇಶವಿಭಜನೆಯಲ್ಲಿ ಮಾತ್ರ ಲಭ್ಯ ಎಂದು ಜಿನ್ನಾ ಪ್ರತಿಪಾದಿಸಿದರು ಮತ್ತು ನೆಹರು, ಪಟೇಲ್ ಹಾಗೂ ಕಾಂಗ್ರೆಸ್‌ನ ಇತರರು ಕೂಡ ಕೊನೆಗೆ ಒಪ್ಪಿದರು. ಹೀಗೆ ಪಾಕಿಸ್ತಾನ ಜನ್ಮತಳೆಯಿತು."
ಪುಸ್ತಕದಲ್ಲಿ ಇನ್ನೊಂದು ಕಡೆ ಜಸ್ವಂತ್ ಸಿಂಗ್ ಹೇಳುತ್ತಾರೆ:
"ಜಿನ್ನಾರ ವಿರೋಧ ಹಿಂದೂಗಳಮೇಲಾಗಲೀ ಹಿಂದೂ ಧರ್ಮದಮೇಲಾಗಲೀ ಆದುದಾಗಿರಲಿಲ್ಲ, ಮುಸ್ಲಿಂ ಲೀಗ್‌ನ ನಿಜವಾದ ಎದುರಾಳಿ ಕಾಂಗ್ರೆಸ್ ಎಂದು ಜಿನ್ನಾ ಭಾವಿಸಿದ್ದರು ಮತ್ತು ಲೀಗ್ ಅನ್ನು ಸ್ವಯಂ ತನ್ನ ’ಆತ್ಮವಿಸ್ತರಣೆ’ಯಂತೆ ಪರಿಗಣಿಸಿದ್ದರು. ಮುಸ್ಲಿಮರನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಸರ್ಕಾರಗಳ ಅಸಾಮರ್ಥ್ಯವನ್ನು ರುಜುವಾತುಪಡಿಸಲು ಜಿನ್ನಾ ಬಹಳಷ್ಟು ಹಿಂದೂ-ಮುಸ್ಲಿಂ ಗಲಭೆಗಳನ್ನು (೧೯೪೬; ಬಂಗಾಳ, ಬಿಹಾರ, ಇತ್ಯಾದಿ) ಹುಟ್ಟುಹಾಕಿದರು.......ಜಿನ್ನಾರೊಂದಿಗಿನ ಅಸಂಖ್ಯಾತ ಸಂಭಾಷಣೆಗಳಲ್ಲಿ ಹಿಂದೂಗಳ ಅಥವಾ ಹಿಂದೂ ಧರ್ಮದ ವಿರುದ್ಧ ಅವರು ಮಾತಾಡಿದ ನೆನಪು ನನಗೆ ವಿರಳ. ಅವರ ವಿರೋಧ ಏನಿದ್ದರೂ ಕಾಂಗ್ರೆಸ್ ನಾಯಕತ್ವದಮೇಲೆಯೇ ಕೇಂದ್ರೀಕೃತವಾಗಿತ್ತು ಮತ್ತು ಆ ವಿರೋಧವು ಅನಂತರದಲ್ಲಿ ಬಹುತೇಕ ದ್ವೇಷವಾಗಿ ಬೆಳೆಯಿತು (ಎಂ.ಆರ್.ಎ.ಬೇಗ್, ಜಿನ್ನಾರ ಕಾರ್ಯದರ್ಶಿ)."
ಮತ್ತೊಂದು ಕಡೆ ಸಿಂಗ್ ಹೇಳುತ್ತಾರೆ:
"ಇವೆಲ್ಲದರಲ್ಲೂ ಧರ್ಮ ಎಂಬುದು ಸಂಪೂರ್ಣವಾಗಿ ಪ್ರಾಸಂಗಿಕವಾದುದಾಗಿತ್ತು; ತನಗೆ ಬೇಕಿದ್ದ ವ್ಯಕ್ತಿತ್ವ ಮತ್ತು ಗುಣಗಳನ್ನು ಜಿನ್ನಾರಿಗೆ ಪಾಕಿಸ್ತಾನ ಮಾತ್ರ ಕೊಟ್ಟಿತು. ಪಾಕಿಸ್ತಾನವನ್ನು ಗಳಿಸಲು ಜಿನ್ನಾ ಅಗತ್ಯವಾಗಿದ್ದರೆ, ಜಿನ್ನಾನ ಬಯಕೆ ಈಡೇರಿಕೆಗೆ ಪಾಕಿಸ್ತಾನವೂ ಅಗತ್ಯವಾಗಿತ್ತು."
ಮಗದೊಂದು ಕಡೆ ಸಿಂಗ್ ಹೇಳುತ್ತಾರೆ:
".....೧೯೩೯ರ ದಂಗೆಯ ಸ್ಫೋಟ ಮತ್ತು ೧೯೪೭ರ ವಿಭಜನೆ ಈ ಅವಧಿಯ ಮಧ್ಯೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು ಶೋಚನೀಯ ಮಟ್ಟದಲ್ಲಿ ವಾಸ್ತವಿಕತೆ, ದೂರದೃಷ್ಟಿ, ಉದ್ದೇಶ ಮತ್ತು ಇಚ್ಛಾಶಕ್ತಿ ಇವುಗಳ ಕೊರತೆಯನ್ನು ಹೊಂದಿತ್ತೆಂದು ಅತ್ಯಂತ ದುಃಖದಿಂದ ಹೇಳಬೇಕಾಗಿದೆ."
ಹೀಗೆ, ತಮ್ಮ ಪುಸ್ತಕದಲ್ಲಿ ಜಸ್ವಂತ್ ಸಿಂಗ್ ಅವರು ಇತಿಹಾಸದ ವಾಸ್ತವವನ್ನು ಗ್ರಹಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಹೊರತು ಎಲ್ಲಿಯೂ ಜಿನ್ನಾರನ್ನು ಅನವಶ್ಯವಾಗಿ ಹಾಡಿ ಹೊಗಳಿಲ್ಲ, ಮುಸ್ಲಿಮರ ತುಷ್ಟೀಕರಣದ ಯತ್ನ ಮಾಡಿಲ್ಲ ಮತ್ತು ಮುಖ್ಯವಾಗಿ ಇಂದಿನ ಭಾರತದ ಒಟ್ಟಂದಕ್ಕೆ ಧಕ್ಕೆ ತರುವಂಥದೇನನ್ನೂ ಬರೆದಿಲ್ಲ. ಅಂದಿನ ಕಾಂಗ್ರೆಸ್ ಪಕ್ಷದ ಬಗ್ಗೆ ಜಿನ್ನಾರಿಗಿದ್ದ ಶಂಕೆಗಳನ್ನು ಮತ್ತು ಆ ಶಂಕೆಗಳಿಂದಾಗಿ ಆತ ಪ್ರತ್ಯೇಕ ಪಾಕಿಸ್ತಾನ ರಚನೆಯ ಹಠಕ್ಕೆ ಬಿದ್ದುದನ್ನು ಪುಸ್ತಕದಲ್ಲಿ ಸಿಂಗ್ ವಿಶದಪಡಿಸಿದ್ದಾರಷ್ಟೆ.
ಸಿಂಗ್ ಅವರ ಈ ರೀತಿಯ ವಿಶದೀಕರಣದಿಂದ ಭಾರತದಲ್ಲಿನ ಹಿಂದೂ-ಮುಸ್ಲಿಂ ಸಾಮರಸ್ಯಕ್ಕಾಗಲೀ ಭಾರತ-ಪಾಕಿಸ್ತಾನ ಮೈತ್ರಿಗಾಗಲೀ ಇತ್ಯಾತ್ಮಕ ಕೊಡುಗೆ ಉಂಟಾದೀತೇ ಹೊರತು ನೇತ್ಯಾತ್ಮಕ ಕೊಡುಗೆ ಸರ್ವಥಾ ಉಂಟಾಗುವುದಿಲ್ಲ. ಜಿನ್ನಾ ಅವರು ಧರ್ಮದ ಕಾರಣದಿಂದಾಗಿ ಪ್ರತ್ಯೇಕ ರಾಷ್ಟ್ರವನ್ನು ಕೇಳಲಿಲ್ಲ, ರಾಜಕೀಯ ಕಾರಣದಿಂದಾಗಿ ಕೇಳಿದರು ಎಂಬುದು ಸಿಂಗ್ ಅವರ ಅಂಬೋಣ. ವಿಭಜನೆಯು ಧರ್ಮದ್ವೇಷದ ಕಿಚ್ಚನ್ನು ಹಚ್ಚಿದ್ದನ್ನು ಸಿಂಗ್ ಅವರೂ ಒಪ್ಪುತ್ತಾರೆ. ಇವೆಲ್ಲದರ ಮೂಲ ಕಾರಣವನ್ನು ಬಯಲಿಗೆಳೆಯುವ ಪ್ರಯತ್ನವನ್ನು ಸಿಂಗ್ ಮಾಡಿದ್ದಾರೆ. ಆ ಯತ್ನದ ಹಾದಿಯಲ್ಲಿ ಜಿನ್ನಾರ ಬಗ್ಗೆ ಸ್ಪಷ್ಟೀಕರಣದ ನುಡಿಗಳು ಬಂದಿವೆ. ನಾವು ಮುಖ್ಯವಾಗಿ ಗಮನಿಸಬೇಕಾದ ಸಂಗತಿಯೆಂದರೆ, ಪುಸ್ತಕದ ಯಾವ ಭಾಗವೂ ಓದುಗನು ಜಸ್ವಂತ್ ಸಿಂಗ್ ಅವರ ದೇಶಭಕ್ತಿಯನ್ನು ಅನುಮಾನಿಸುವಂತೆ ಮೂಡಿಬಂದಿಲ್ಲ. ಸಿಂಗ್ ಅವರು ಈ ದೇಶದ ಮಾಜಿ ಸೈನಿಕನೆಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಟ್ಟುಕೊಳ್ಳಬೇಕು.
ಹೀಗಿರುವಾಗ, ಬಿಜೆಪಿ ಪಕ್ಷದಿಂದ ಸಿಂಗ್ ಅವರ ಉಚ್ಚಾಟನೆ ತಪ್ಪು ನಡೆಯೆಂದೇ ಹೇಳಬೇಕಾಗುತ್ತದೆ. ಸಿಂಗ್ ಉಚ್ಚಾಟನೆಗೆ ಇತರ ಒಳ ಕಾರಣಗಳೂ ಇರುವ ಸಂಗತಿ ರಹಸ್ಯವಾಗಿಯೇನೂ ಉಳಿದಿಲ್ಲ. ಅದೇನೇ ಇರಲಿ, ’ವಿನಾಶ ಕಾಲೇ ವಿಪರೀತ ಬುದ್ಧಿಃ’ ಎಂಬಂತಾಗಬಾರದು ಬಿಜೆಪಿಯ ಈ ಬುದ್ಧಿಪರಾಕ್ರಮ. ಏಕೆಂದರೆ, ಈ ದೇಶವನ್ನು ಯಾವುದೇ ಒಂದು ಪಕ್ಷದ ಏಕಚಕ್ರಾಧಿಪತ್ಯಕ್ಕೆ ಬಲಿಕೊಡಬಾರದು. ಯಾವ ಪಕ್ಷದ ಆಡಳಿತವೇ ಇರಲಿ, ಪ್ರಬಲ ಎದುರಾಳಿ ಪಕ್ಷ ನಮಗಿಂದು ಅತ್ಯವಶ್ಯ. ಇಂಥ ಸಂದರ್ಭದಲ್ಲಿ ಬಿಜೆಪಿಯು ಆತ್ಮಹತ್ಯಾಮಾರ್ಗ ತುಳಿಯದೆ ಬಹಳ ಎಚ್ಚರದಿಂದ ಹೆಜ್ಜೆಯಿಡಬೇಕು.
ಗುರುವಾರ, ಆಗಸ್ಟ್ 20, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಲೇಖಕರು ಈ ಕಾಮೆಂಟ್ ಅನ್ನು ತೆಗೆದು ಹಾಕಿದ್ದಾರೆ.
ಪ್ರತ್ಯುತ್ತರಅಳಿಸಿಆನ೦ದ ಸಾರ್,
ಪ್ರತ್ಯುತ್ತರಅಳಿಸಿಇಲ್ಲಿ ಜಸ್ವಂತ್ ಸಿಂಗ್ ಬರಿ ಹೂರ ನೋಟಕ್ಕೆ ಎ೦ದು ಅನ್ನಿಸುತ್ತದೆ .. ಮೂಲವಾಗಿ ಬಿ .ಜೆ.ಪಿ ಯಲ್ಲಿ ಅವರ ಬಗ್ಗೆ ಸಿಟ್ಟು ಇತ್ತು ಎ೦ದು ಅನ್ನಿಸುತ್ತದೆ ..
ಈಗಿನ ಬಿ .ಜೆ.ಪಿ ವಿದ್ಯಮಾನ ವನ್ನು ಅವಲೋಕಿಸಿದರೆ ಬಿ .ಜೆ.ಪಿ ಈ ಸಲ ಅದಿಕಾರಕ್ಕೆ ಬರುತ್ತೇನೆ ಎ೦ಬ ಅದರ ಆತ್ಮ ವಿಶ್ವಾಸ ಸೋತಾಗ ಅದಕ್ಕೆ ಅದನ್ನು ಒಪ್ಪಲು ಆಗದೆ ಬಿಡಲು ಆಗದೆ ಬಿಸಿ ತುಪ್ಪದ೦ತೆ ಆಗಿದೆ .. ಗುಜರಾತು ಹಾಗೂ ಕೆಲವು ರಾಜ್ಯ ಬಿಟ್ಟು ಆದು ತನ್ನ ಕೆಟ್ಟ ಆಡಳಿತಕ್ಕೆ ಪ್ರಸಿದ್ದಿ ಪಡೆದಿದೆ .. ತನ್ನ ತಪ್ಪನ್ನು ಅವಲೋಕನ ಮಾಡುವುದು ಬಿಟ್ಟು ಜಸ್ವಂತ್ ಸಿಂಗ್ ಅ೦ಥಹ ಹಿರಿಯರನ್ನು ತನ್ನ ಕೋಪಕ್ಕೆ ಬಲಿ ಪಶು ಮಾಡುತ್ತಿದೆ ಎ೦ದು ನನ್ನ ಅನಿಸಿಕೆ ..
ನಿಮ್ಮ ಹಾಗೆ ಸರಿಯಾಗಿ ವಿಶ್ಲೆಷಣೆ ಮಾಡಲು ಗೊತ್ತಿಲ್ಲ .. ಇದರಲ್ಲಿ ತಪ್ಪು ಗಳು ಇರ ಬಹುದು ..
Jaswant pustakadalli enide anno kutuhala nanagu tumba ittu. sumaru hosatannu ottu madi kottiddiri. dhanyavaada.
ಪ್ರತ್ಯುತ್ತರಅಳಿಸಿಜಸ್ವಂತ್ ಸಿಂಗರನ್ನು ಪುಸ್ತಕದ ಕಾರಣಕ್ಕೆ ಪಕ್ಷದಿಂದ ತೆಗೆದು ಹಾಕಿದರು ಎಂಬುದು ಸುಳ್ಳು ಎಂದು ಭಾರತದ ರಾಜಕರಣದಲ್ಲಿ ಅಲ್ಪಸ್ವಲ್ಪ ಆಸಕ್ತಿಯಿರುವ ಯಾರಿಗಾದರೂ ತಿಳಿಯುತ್ತದೆ. ಚುನಾವಣೋತ್ತರ ಚರ್ಚೆಗಳಲ್ಲಿ ಜಸ್ವಂತ್ ಬಿ.ಜೆ.ಪಿ. ಉನ್ನತವರ್ಗಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದ್ದನ್ನು ಭಾರತೀಯ ಿಷ್ಟು ಬೇಗ ಮರೆಯುವುದಿಲ್ಲ. ಒಂದು ಪಕ್ಷ ಪುಸ್ತಕದ ಕಾರಣಕ್ಕೇ ಅವರನ್ನು ಹೊರಹಾಕಿದ್ದು ನಿಜ ಎನ್ನುವುವಾದರೆ ಹಾಗೂ ಬಿ.ಜೆ.ಪಿ. ಸರ್ಕಾರಗಳು ಪುಸ್ತಕವನ್ನು ನಿಷೇಧಿಸುವುದನ್ನು ನೋಡಿದರೆ ಅವರಿಗೆ ಸತ್ಯವನ್ನು ಎದುರಿಸುವುದಕ್ಕಿಂತ ಭ್ರಮಾಲೋಕದಲ್ಲಿ ಬದುಕುವುದೇ ಇಷ್ಟವೆಂದಾಯಿತು. ಬಿ.ಜೆ.ಪಿ. ಈಗ ಭ್ರಾಮಕ ಜನರ ಪಕ್ಷ ಮಾತ್ರ!
ಪ್ರತ್ಯುತ್ತರಅಳಿಸಿSIBANTHI
ಪ್ರತ್ಯುತ್ತರಅಳಿಸಿyou should read book.
in addition read old issues of SEMINAR edited by THAPAR
ಕಾಳಜಿಪೂರ್ವಕವಾಗಿ ಪ್ರತಿಕ್ರಿಯಿಸಿರುವ ನಾಲ್ವರು ಮಿತ್ರರಿಗೂ ಧನ್ಯವಾದಗಳು.
ಪ್ರತ್ಯುತ್ತರಅಳಿಸಿವಿನಾಶಕಾಲೇ ವಿಪರೀತ ಬುದ್ಧಿ ಎಂಬ ಮಾತು ಪ್ರಸ್ತುತ ಬಿಜೆಪಿಗೆ ಸರಿಯಾಗಿ ಹೊಂದುತ್ತದೆ. ಇಲ್ಲಿ ಯಡ್ಯೂರಪ್ಪನವರು ಅಲ್ಲಿ ಕೇಂದ್ರದ ಬಿಜೆಪಿ ನಾಯಕರು ಎಲ್ಲರೂ ತಲೆಯಲ್ಲಿ ಮಿದುಳೇ ಇಲ್ಲದಂತೆ ವರ್ತಿಸುತ್ತಿರುವುದನ್ನು ನೋಡಿದರೆ, ಬಿಜೆಪಿಯ ಅಂತ್ಯ ಅತಿ ಸಮೀಪದಲ್ಲಿದೆ ಎನಿಸುತ್ತದೆ. ರಾಜಾಸ್ಥಾನದಲ್ಲಿ ಅಧಿಕಾರ ಕಳೆದುಕೊಂಡರು, ಗುಜರಾತ್ ನಲ್ಲಿ ಜನಪ್ರಿಯತೆ ಕಡಿಮೆಯಾಗಿದೆ, ದಕ್ಷಿಣದಲ್ಲಿ ಬಿಜೆಪಿಗೆ ಎಡೆ ಇಲ್ಲ್ಕ ಕರ್ನಾಟಕದಲ್ಲೂ ಅಸಹನೆ ಕಟ್ಟೊಡೆಯುತ್ತಿದೆ. ಇವೆಲ್ಲಕ್ಕೆ ಕಲಶವಿಟ್ಟಂತೆ ಈಗ ಜಸ್ವಂತ್ ಸಿಂಗ್ ಅವರ ಉಚ್ಛಾಟನೆ. ಬಿಜೆಪಿಯನ್ನು ಆ ರಾಮನೇ ಕಾಪಾಡಬೇಕು
ಪ್ರತ್ಯುತ್ತರಅಳಿಸಿJaswant sing ra pustakada bagge nanagoo kutoohala ittu. Sankshiptavagi bahala chennagi vimarshe maadiddiri. Istondu asahane BJP ge olledalla.
ಪ್ರತ್ಯುತ್ತರಅಳಿಸಿಆನ೦ದ ಸರ್
ಪ್ರತ್ಯುತ್ತರಅಳಿಸಿಗೌರಿ ಹಾಗೂ ಗಣೇಶ ಹಬ್ಬದ ಶುಭಾಶಯಗಳು .
Dear Sri Anandarama Shastry,
ಪ್ರತ್ಯುತ್ತರಅಳಿಸಿBye-election results have come. Rightly People have rejected Somanna & Yogeshwar. Really happy news. It is a lesson for all Ayarams and Gayarams. Because of their selfishness, this election took place. They should be penalised for their foolish act.Re-election costs must be put on those candidates who create this nuisance but not on innocent tax paying citizens. Atleast now on let us hope Sri Yedyurappa will put an end to this illfamous Operation Kamala. Now it has become `Operation Mala'.
r,
ಪ್ರತ್ಯುತ್ತರಅಳಿಸಿu r
r(ight).
I fully agree with you.
ಕಾಳಜಿಭರಿತ ಪ್ರತಿಕ್ರಿಯೆಗಾಗಿ ಧನ್ಯವಾದ.
ಮೆಚ್ಚುಗೆಗಾಗಿ ಧನ್ಯವಾದ ರಾಜಾರಾಮ್ ಅವರೇ.
ನಿಮಗೂ ಶುಭಾಶಯಗಳಮ್ಮಾ ರೂಪಾ ಅವರೇ.
I totally agree with you. I was as shocked as anyone when I learnt of his expulsion from the party. He wasn't rewriting history, nor was he blindly glorifying Jinnah. A few of them were his opinions and he's entitled to them. And what he did was merely looking at the events from a different view. Why should one always paint things with a communal overtone? The party needn't have chided him and publically renounced his work. By doing so, they only helped increase the book's sales. They could've ignored it, and the book would probably have passed by as yet another politicians random ramblings.
ಪ್ರತ್ಯುತ್ತರಅಳಿಸಿVinasha kale vipareetha buddhi, indeed.
Kaustuba
ಕೌಸ್ತುಭ ಅವರೇ,
ಪ್ರತ್ಯುತ್ತರಅಳಿಸಿನಿಮ್ಮ ಮಾತುಗಳು ಅಕ್ಷರಶಃ ಸತ್ಯ. ವಸ್ತುನಿಷ್ಠ ಪ್ರತಿಕ್ರಿಯೆಗಾಗಿ ಧನ್ಯವಾದ.
ವಿನಾಶಕಾಲೇ ವಿಪರೀತ ಬುದ್ಧಿ...ಕರೆಕ್ಟ್ ಹಾಗೇ ಅನ್ನಿಸುತ್ತದೆ...ಜಸ್ವಂತ್ ಉಚ್ಛಾಟನೆ ಬೇಕಿರಲಿಲ್ಲ...ತನ್ನ ತಪ್ಪುಗಳನ್ನು ಸರಿಪಡಿಸಿಕೊಂಡು ಆತ್ಮವಿಮರ್ಶೆ ಮಾಡದಿದ್ದರೆ ಬಿಜೆಪಿಗೆ ಉಳಿವಿಲ್ಲ....
ಪ್ರತ್ಯುತ್ತರಅಳಿಸಿಜಸ್ವಂತರ ಪುಸ್ತಕ ಪರಿಚಯಿಸಿದ್ದಕ್ಕೆ ವಂದನೆ...
ಸಹಮತದ ಪ್ರತಿಕ್ರಿಯೆಗಾಗಿ ಧನ್ಯವಾದ ವೇಣು ವಿನೋದ್ ಅವರೇ.
ಪ್ರತ್ಯುತ್ತರಅಳಿಸಿKaleda Bhanuvaru eebagge charcha karyakramavannu TV yelli(English) noodide. Sarisumaru, ellaru Singhavara jotheyalle iddaru.
ಪ್ರತ್ಯುತ್ತರಅಳಿಸಿNimma okkannegalu sariyagi ive.
ಧನ್ಯವಾದ ರಮೇಶ್ ಅವರೇ.
ಪ್ರತ್ಯುತ್ತರಅಳಿಸಿJaswanth Singh Aayithu, Haryanadalli Chowthala jothege too bittidhdare, Vasundhara Raje tamma dani serisidhdhare, eega Arun Shouri sididhidhdhare, innu bahala hinde Uma Bharathi, Kalyan Singh, Govindacharya yellaroo Central Leadership virudhdha tamma daniyeththiddhavre.Innoo yaake BJPya muKhandarige budhdhi bruththilla?
ಪ್ರತ್ಯುತ್ತರಅಳಿಸಿಹೌದು r ಅವರೇ, ಸುಧೀಂದ್ರ ಕುಲಕರ್ಣಿ ಕೂಡ ’ಠೂ’.
ಪ್ರತ್ಯುತ್ತರಅಳಿಸಿರಾಜ-ನಾಥ
ಗಬ್ಬು ನಾತ!