(ತಮಾಷೆಗಾಗಿ)
-----------------
ಅರವಜ್ಞನೆಂಬುವನು ಗರ್ವದಿಂದಾದವನು
ಸರ್ವರೊಳಗೊಂದೊಂದು ಪದವಿಟ್ಟು ಅವರನ್ನೆ
ದೂರ್ವನಿವನಯ್ಯ ಅರವಜ್ಞ
***
ಹೊಗೆನಕಲ್ ಅರವರದು ಕಾವೇರಿ ಅರವರದು
ಬೆಂಗ್ಳೂರು ಸಿಟಿ ಕೂಡ ಅರವರದು ಕನ್ನಡಿಗ
ನಿನ್ನದೇನುಂಟು ಅರವಜ್ಞ
***
ಅರವ ಬಹು ಹಳೆ ಭಾಷೆ ಅರವ ಬಹು ಹಿರಿ ಭಾಷೆ
ಅರವ ತಾ ಶಾಸ್ತ್ರೀಯ ಭಾಷೆಯೈ ಜಗದಲ್ಲಿ
ಅರವಕೆಣೆಯಿಲ್ಲ ಅರವಜ್ಞ
***
ಕರುಣೆಯಾ ನಿಧಿ ನಾನು ತಮಿಳಿಗರ ವಿಧಿ ನಾನು
ಹಿರಿತನದಿ ನಾಡಿಗೇ ದೊರೆ ನಾನು ಕನ್ನಡಕೆ
ಉರುಳಯ್ಯ ನಾನು ಅರವಜ್ಞ
***
ತಿರುವಳ್ಳುವರ್ ಪ್ರತಿಮೆ ಬೆಂಗಳೂರಿಗೆ ಬೇಕು
ಅರವರಾ ಬುಡ ಭದ್ರ ಆಗ್ಬೇಕು ಚೆನ್ನೈಗೆ
ಸರ್ವಜ್ಞ ಸಾಕು ಅರವಜ್ಞ
(ಅರವ (ನಾಮಪದ) = ತಮಿಳು ಭಾಷೆ; ತಮಿಳು)
ಬುಧವಾರ, ಆಗಸ್ಟ್ 5, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಸಕಾಲಿಕ ಕವನ/ವಚನ.
ಪ್ರತ್ಯುತ್ತರಅಳಿಸಿಧನ್ಯವಾದ ಪರಾಂಜಪೆ ಅವರೇ.
ಪ್ರತ್ಯುತ್ತರಅಳಿಸಿತಮಾಷೆ ಆಂದ್ರುನೂ ನಿಜಾನೇ ಸರ್
ಪ್ರತ್ಯುತ್ತರಅಳಿಸಿಧನ್ಯವಾದ ಚಿತ್ರಾ ಕರ್ಕೇರಾ ಅವರೇ.
ಪ್ರತ್ಯುತ್ತರಅಳಿಸಿ