ನಮ್ಮೂರ ಸಂತೆ
ಸುತ್ತಮುತ್ತ ಹೆಸರುವಾಸಿ
ಸಕಲ ವಸ್ತುಗಳು ಲಭ್ಯ
ಒಂದೇ ಕಡೆಯಲ್ಲಿ
ವಾರಕ್ಕೊಮ್ಮೆ ಇಲ್ಲಿ
ಸುತ್ತಲ ಹಳ್ಳಿಗಳ ಜನ
ಮುತ್ತುತ್ತಾರೆ ಆ ದಿನ
ಮಾರುಕಟ್ಟೆ ತುಂಬಿ
ಮಗ್ಗುಲಿನ ಬಯಲು ತುಂಬಿ
ಸಂದುಗೊಂದುಗಳಲ್ಲಿ
ರಸ್ತೆಯಲ್ಲಿ
ಗಲ್ಲಿ ಗಲ್ಲಿ
ಕೊನೆಗೆ
ಸಾರ್ವಜನಿಕ ಮೂತ್ರಿಯಲ್ಲಿ
ಕೂಡ
ಬಟ್ಟೆ ಹಾಸಿಕೊಂಡು
ಬುಟ್ಟಿ ಇಟ್ಟುಕೊಂಡು
ಕೂತಿರುತ್ತಾರೆ ಮಾರುವವರು
ಮುತ್ತಿರುತ್ತಾರೆ ಊರಿನವರು
ಪರ ಊರಿನವರು
ನಮ್ಮೂರ ಸಂತೆ
ಬಲು ಜೋರು
ಜನಗಳ ಜೊತೆಗೆ
ದನಗಳೂ ಹತ್ತಾರು!
ನಾವು ಕೈಯಿಟ್ಟಲ್ಲಿ
ಅವು ಬಾಯಿಡುತ್ತವೆ
ಬಡಿತ ತಿಂದು
ಮುಂದೆ ಕಾಲಿಡುತ್ತವೆ
ನಮ್ಮ ಚೀಲದಮೇಲೆ ಕಾಲು
ಇನ್ನೊಂದು ಬುಟ್ಟಿಯಮೇಲೆ ಕಣ್ಣು
ಬೇಕು ಭಾರೀ ಹುಷಾರು
ನಮ್ಮೂರ ಸಂತೆ
ಕಳ್ಳರ ತಾಣ
ರಷ್‌ನಲ್ಲಿ ನುಗ್ಗುವಾಗ ನಮ್ಮ
ಜೇಬಿಗೆ ಕೈತೂರಿಸುವವರು
ತರಕಾರಿಗೆ ಬಗ್ಗಿದಾಗ ಕೊರಳ
ಸರ ಹಾರಿಸುವವರು
ಏನೂ ದೊರೆಯದಾದಾಗ
ಗಿರಾಕಿಗಳಂತೆ ನಟಿಸಿ
ತರಕಾರಿಯನ್ನೇ ತಮ್ಮ
ಚೀಲಕ್ಕಿಳಿಸುವವರು
ಇಂಥವರು
ಸುಮಾರು ಮಂದಿ
ನಮ್ಮೂರ ಸಂತೆ
ತುಂಬ ಸೋವಿ
ಒಂದು ರೂಪಾಯಿ ಅಂದದ್ದನ್ನು
ನಾಲ್ಕಾಣೆಗೇ ಕೊಡುತ್ತಾರೆ
ಕಾಣೆ ನೋಡದೆ ತೂಗಿಸಿಕೊಂಡರೆ
ತುಂಬಾ ಮುಂಗೋಲು ತೂಗುತ್ತಾರೆ
ನಮ್ಮೂರ ಸಂತೆ
ಹಗಲು ಮಾತ್ರವಲ್ಲ
ರಾತ್ರಿಯೂ ಇರುತ್ತದೆ.
ಹಗಲು ಪುರುಸೊತ್ತಾಗದಿದ್ದವರು,
ಸೋವಿ ರೇಟಿಗೆ ಸಾಮಾನು
ಬಯಸುವವರು
ಬರುತ್ತಾರೆ ರಾತ್ರಿ,
ಉಳಿದದ್ದು ಬಳಿದದ್ದು
ಅವರಿಗೆ
ಕಡಿಮೆ ದರದಲ್ಲಿ
ಖಾತ್ರಿ.
ಶುಕ್ರವಾರ, ಆಗಸ್ಟ್ 7, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಆನ೦ದ ಸರ್
ಪ್ರತ್ಯುತ್ತರಅಳಿಸಿಸ೦ತೆಯ ವರ್ಣನೆ ಕಣ್ಣಿಗೆ ಕಟ್ಟಿದ೦ತೆ ವರ್ಣಿಸಿದ್ದಿರಿ .. ತು೦ಬಾ ರಸವತ್ತಾಗಿ ಇದೆ .
ಧನ್ಯವಾದ ರೂಪಾ ಅವರೇ.
ಪ್ರತ್ಯುತ್ತರಅಳಿಸಿ