ಶನಿವಾರ, ಆಗಸ್ಟ್ 8, 2009

ದಿನಕ್ಕೊಂದು ಕವನ: (೧೯) ಗಿಳಿಯು ಪಂಜರದಲ್ಲಿ

-೧-

ಮರದಮೇಲೆ ಕುಳಿತಿರುವ
ಗಿಳಿಯನ್ನು ನೋಡಿರಿ!

ಸುತ್ತೆಲ್ಲ ಹಸಿರು
ಮತ್ತು
ತೆರೆದ ಬಾನು.

ಗಾಳಿ ಬೀಸಿದಂತೆ
ಮರದಲ್ಲೆ
ನವಿರುಯ್ಯಾಲೆ.

ತನ್ನ ಭಾರಕ್ಕೇ
ತಾನೂ
ಮರದ ಟೊಂಗೆಯೂ
ತನನನನ!
ಮೋಜು!

ಮರು ಗಳಿಗೆ
ಗಿಳಿಗೆ
ಮರ ಬೇಡವಾಯ್ತೊ
ಆಕಾಶಕ್ಕೆ ನೆಗೆತ
ಬಾನ್ ವಾಯೇಜು!

ತನ್ನ ಮರ ಎಷ್ಟು ಚಂದ!
ಹತ್ತಿರದಿಂದ
ಹಾಗೂ ದೂರದಿಂದ.

ಅಗೋ, ಇನ್ನೊಂದು ಮರ
ಉಂಟಲ್ಲ ಅಲ್ಲಿ
ಅದೂ ಚಂದ!
ಈಗ ಗಿಳಿ ಅಲ್ಲಿ.

ಈ ಮರ, ಆ ಮರ
ಆ ಮರ, ಈ ಮರ
ಮರ, ಬಾನು
ಬಾನು, ಮರ
ಎಂಥ ಸಡಗರ!

-೨-

ಇಂಥ ಗಿಳಿಯನ್ನು
ಹಿಡಿದು
ಪಂಜರದೊಳಿಟ್ಟರೆ ಹೇಗೆ?

-೩-

ನಿಮ್ಮದು
ಎಂಥ ಬಾಳಿನ ಬಗೆ?!

2 ಕಾಮೆಂಟ್‌ಗಳು:

  1. ಆನ೦ದ ಸರ್,
    ನೀವು ಹೇಳಿದ ಗಿಳಿ ನಾವೇ .. ಮನುಷ್ಯರು ಯಾವಾಗಲು "ಇರುವುದೆಲ್ಲವ ಬಿಟ್ಟು ಇರದಿದರೆಡೆಗೆ ತುಡಿವುದೇ ಜೀವನ" ಎ೦ದು ನ೦ಬಿದ್ದಾರೆ ಯಾವುದೋ ಬ೦ದನಕ್ಕೆ ಸಿಕ್ಕಿ ಬೀಳುತ್ತೇವೆ ..
    ಸೊಗಸಾದ ಕವನ

    ಪ್ರತ್ಯುತ್ತರಅಳಿಸಿ