ಗುರುವಾರ, ಮೇ 14, 2009

ಬಿಟ್ಟೆನೆಂದರೆ ಬಿಡದೀ ಫೋಟೊ!

ಪ್ರಿಯ ಓದುಗ ಮಿತ್ರರೇ,

ನಿನ್ನೆ ತಾನೇ ಈ ಬ್ಲಾಗ್‌ನ ನನ್ನ ಲೇಖನಕೃಷಿಗೆ ನಮಸ್ಕಾರ ಹೇಳಿ ಹೋಗಿದ್ದೆ. ಇಂದು ಮತ್ತೆ ವಕ್ರಿಸಿದ್ದೇನೆ! ಈ ಕೆಳಗಿನ ಛಾಯಾಚಿತ್ರ ಮತ್ತೆ ನನ್ನನ್ನು ಇಲ್ಲಿಗೆ ಎಳೆತಂದಿದೆ.

’ಬಿಟ್ಟೆನೆಂದರೆ ಬಿಡದೀ ಮಾಯೆ!’ ಎಂಬ ನಾಣ್ಣುಡಿಯಂತೆ,
ಬಿಟ್ಟೆನೆಂದರೆ ಎನ್ನನು ಬಿಡದೀ ಫೋಟೊ!

ಪ್ರಸಿದ್ಧ ದಿನಪತ್ರಿಕೆಯೊಂದರ ಇಂದಿನ (14ನೇ ಮೇ 2009) ಸಂಚಿಕೆಯಲ್ಲಿ ಪ್ರಕಟವಾಗಿರುವ ಫೋಟೊ ಇದು. ಈ ಫೋಟೋವನ್ನೂ ಮತ್ತು ಅದರ ಅಡಿಬರಹವನ್ನೂ ಗಮನಿಸಿ.


ಗಮನಿಸಿದಿರಾ?

ಈ ಫೊಟೋಕ್ಕೆ ಅಡಿಬರಹವನ್ನು ನೀಡಿದವರು ಭಾರಿ ಬುದ್ಧಿವಂತರೇ ಸರಿ. ಬ್ರಾಕೆಟ್‌ಗಳೊಳಗೆ, ಅರ್ಥಾತ್, ಆವರಣಗಳೊಳಗೆ, ’ಎಡದಿಂದ ಎರಡನೆಯವರು’, ’ಬಲ’, ಎಡಬದಿ’, ಎಂಬ ವಿವರಗಳನ್ನು ನೀಡುವ ಮೂಲಕ ಆ ಪತ್ರಕರ್ತ ಮಹನೀಯರು (ಅಥವಾ ಪತ್ರಕರ್ತೆ ಮಹಿಳೀಯರು) ಓದುಗರಿಗೆ ಮಹದುಪಕಾರ ಮಾಡಿದ್ದಾರೆ. ಆವರಣಗಳೊಳಗೆ ಈ ವಿವರಗಳನ್ನು ನೀಡಿರದಿದ್ದರೆ ಓದುಗರಿಗೆ, ’ಯಾರು ಪ್ರಭಾಕರನ್ ಪತ್ನಿ, ಯಾರು ಪುತ್ರ ಮತ್ತು ಯಾರು ಪುತ್ರಿ’, ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಯಾರುಯಾರಿಗೋ ಯಾರುಯಾರನ್ನೋ ಕನ್‌ಫ್ಯೂಸ್ ಮಾಡಿಕೊಂಡು ಓದುಗರು ಫಜೀತಿ ಪಡುತ್ತಿದ್ದರು. ಇಬ್ಬರು ಸ್ತ್ರೀಯರ ಪೈಕಿ ಪ್ರಭಾಕರನ್‌ನ ಪತ್ನಿ ಯಾರು, ಪುತ್ರಿ ಯಾರು ಎಂದು ಗೊತ್ತಾಗದೆ ತಲೆ ಕೆರೆದುಕೊಳ್ಳುತ್ತಿದ್ದರು. ಪತ್ನಿ ’ಎಡದಿಂದ ಎರಡನೆಯವರು’ ಮತ್ತು ಪುತ್ರಿ ’ಎಡಬದಿ’, ಎಂದು ಅಡಿಬರಹ ಬರೆದಾತ/ಬರೆದಾಕೆ ನಮೂದಿಸಿರುವುದರಿಂದಾಗಿ ಮಾತ್ರ ಓದುಗರಿಗೆ ಗೊತ್ತಾಯಿತು.

ಇನ್ನು, ’ಬಲ’ಗಡೆ ಇರುವಾತ ಪ್ರಭಾಕರನ್ ಪುತ್ರನೆಂದು ಸದರಿ ಪತ್ರಕರ್ತನು/ಪತ್ರಕರ್ತೆಯು ಆವರಣದಲ್ಲಿ ಸೂಚಿಸಿರದಿದ್ದರೆ ಓದುಗರು ಎಲ್‌ಟಿಟಿಇ ಸಮವಸ್ತ್ರದಲ್ಲಿರುವ ಆತ ವೇಲುಪಿಳ್ಳೈ ಪ್ರಭಾಕರನ್ ಎಂದು ತಪ್ಪಾಗಿ ತಿಳಿದುಬಿಡುತ್ತಿದ್ದರು. ’ಬಲ’ಗಡೆಯ ಆ ಸಮವಸ್ತ್ರಧಾರಿಯು ಪ್ರಭಾಕರನ್‌ನ ಪುತ್ರನೆಂಬುದು ಆವರಣದ ಸೂಚನೆಯಿಂದಾಗಿ ಓದುಗರಿಗೆ ಗೊತ್ತಾಯಿತು. ಇದರಿಂದಾಗಿ, ಫೋಟೋದಲ್ಲಿರುವ ಚಿಕ್ಕ ಬಾಲಕನೇ ವೇಲುಪಿಳ್ಳೈ ಪ್ರಭಾಕರನ್ ಎಂಬುದೂ ಓದುಗರಿಗೆ ಕ್ಲಿಯರ್ ಆಯಿತು.

ಓದುಗರಿಗೆ ಈ ರೀತಿ ಸ್ಪಷ್ಟ ಮಾಹಿತಿ ನೀಡಿರುವ ಸದರಿ ಪತ್ರಕರ್ತನಿಗೆ/ಪತ್ರಕರ್ತೆಗೆ ರಾಜ್ಯ ಮಾಧ್ಯಮ ಅಕಾಡೆಮಿಯ ಈ ಸಲದ ಪ್ರಶಸ್ತಿಯನ್ನು ನೀಡತಕ್ಕದ್ದು.

ಈ ಚಿತ್ರದ ಈ ಅಡಿಬರಹವನ್ನು ಶ್ರೀಲಂಕಾ ಸರ್ಕಾರವು ಓದುವುದಿಲ್ಲವಾದ್ದರಿಂದ ಪಾಪ ಆ ಪುಟ್ಟ ಹುಡುಗ ಬಚಾವ್! (ಈಗವನು ದೊಡ್ಡವನಾಗಿದ್ದಾನೆ, ಆದರೂ......)

**೦**

(ಛಾಯಾಚಿತ್ರ ಕೃಪೆ: ರಾಯಿಟರ್ಸ್‌) (ಚಿತ್ರದ ಅಡಿಬರಹದಲ್ಲಿ ಇದು ವೇದ್ಯವಾಗಿದೆಯಾದರೂ ಕೃಪೆಯನ್ನು ಪ್ರತ್ಯೇಕವಾಗಿ ನೆನೆಯಬೇಕಷ್ಟೆ.)

---೦---

6 ಕಾಮೆಂಟ್‌ಗಳು:

  1. ಕನ್ನಡ ಪತ್ರಕರ್ತರು ಸಾಮಾನ್ಯವಾಗಿ ಇಂಗ್ಲೀಶಿನಿಂದ ಕನ್ನಡಕ್ಕೆ ಶಬ್ದಾನುವಾದ ಮಾಡುತ್ತಾ ಇಂತಹ ತಪ್ಪನ್ನು ಮಾಡುತ್ತಿರುತ್ತಾರೆ. ನಾನೂ ಈ ಚಿತ್ರವನ್ನು ರಾಯಿಟರ್ಸ್‌ನವರ ಜಾಲತಾಣದಲ್ಲಿ ಇತ್ತೀಚೆಗಷ್ಟೇ ನೋಡಿದ್ದೆ. ಇಂಗ್ಲೀಶಿನಲ್ಲಿ ಅಡಿಬರೆಹ ಇದೇ ರೀತಿ ಇದೆ.

    -ಪವನಜ

    ಪ್ರತ್ಯುತ್ತರಅಳಿಸಿ
  2. odugarannu moorkharendu bhaavisi pathrakartharu kelavomme ee reethi bareyuthaaro athava avare swathaha aapaati moorkharagirutharo thiliyadu.

    Angla maadhyama pathrikegalalli saha intha prayathnagalu bahala nadeyuthave. Avugalalli bahala irritate aaguvudu 'pun intended' endu bracketinalli bareyuva krama

    Idara arthavenendare - odugare,nanna 'play on words'annu gamanisidira? adu akasmikavaagi, unintentionally adaddalla. Adu eshtu brilliantaagide endare nimma thalegalige adannu grahisuva shakthi illa, adudarinda naane adannu nimma gamanakke tharuthiddene. Odi aanandisiri.

    kaustubha

    ಪ್ರತ್ಯುತ್ತರಅಳಿಸಿ
  3. * ಬಿಡುವು ಮಾಡಿಕೊಂಡು ನನ್ನ ಬ್ಲಾಗ್‌ಗೆ ಭೇಟಿ ನೀಡಿದ್ದಕ್ಕಾಗಿ ಡಾ.ಯು.ಬಿ.ಪವನಜ ಅವರಿಗೆ ಧನ್ಯವಾದ. ರಾಯಿಟರ್ಸ್‌ನವರ ಜಾಲತಾಣದಲ್ಲಿ ಇಂಗ್ಲಿಷ್ ಅಡಿಬರೆಹ ಸರಿಯಾಗಿದೆ. ಪ್ರಭಾಕರನ್ ಹೆಸರಿನ ಮುಂದೆ ’ಬಲ’ ಎಂದು ಸರಿಯಾಗಿಯೇ ನಮೂದಿಸಲಾಗಿದೆ ಮತ್ತು ಮಗನ ಹೆಸರಿನ ಮುಂದೆ ಯಾವ ಸೂಚನೆಯೂ ಇಲ್ಲ. ಕನ್ನಡಕ್ಕೆ ಅನುವಾದಿಸುವಾಗ ಅಪ್ಪನ ’ಬಲ’ವನ್ನು ಮಗನಿಗೆ ನೀಡಲಾಗಿದೆ. ಇಷ್ಟಕ್ಕೂ ಈ ಚಿತ್ರಕ್ಕೆ ಆವರಣದ ಸೂಚನೆಗಳ ಅಗತ್ಯವೇ ಇರಲಿಲ್ಲ. ಇನ್ನು, ಶಬ್ದಾನುವಾದ ಮಾಡುತ್ತಾ ಇಂತಹ ತಪ್ಪನ್ನು ಮಾಡುತ್ತಿರುತ್ತಾರೆಂಬ ನಿಮ್ಮ ಮಾತು ಅಕ್ಷರಶಃ ಸತ್ಯ.
    * ಪರಾಂಜಪೆಯವರಿಗೆ ಪ್ರತಿ ನಮಸ್ಕಾರಸಹಿತ ಧನ್ಯವಾದ.
    * ಕೌಸ್ತುಭರ ಅಭಿಪ್ರಾಯಗಳು ಚಿಂತನಾರ್ಹವಾಗಿವೆ. ’ಪನ್‌’ಡಿತರ ಬಗ್ಗೆ
    ಚೆನ್ನ್‌ಆಗಿ ಹೇಳಿದ್ದೀರಿ!

    ಪ್ರತ್ಯುತ್ತರಅಳಿಸಿ
  4. ಚಿತ್ರದ ಅಡಿಬರಹದಲ್ಲಿ ಏನೂ ಗೊಂದಲವಿಲ್ಲ (ಎಂದೇ ತಾನೆ ನೀವೂ ಹೇಳ್ತಿರೋದು)?

    ಇಂಥ ಚಿತ್ರಗಳನ್ನು ನೋಡುವವರಿಗೆ (ಅಂದರೆ ಪತ್ರಿಕೆಯ ಓದುಗರಿಗೆ- ಅವರು ಗಂಡಸರಿರಲಿ ಅಥವಾ ಹೆಂಗಸರಿರಲಿ) ಚಿತ್ರದಲ್ಲಿರುವ ಹೆಂಗಸು/ಹುಡುಗಿಯರ ಮೇಲೆ ದೃಷ್ಟಿ ಮೊದಲು ಹೋಗುವುದು. ಹಾಗಾಗಿ ಈ ಚಿತ್ರದಲ್ಲಿರುವ ಹೆಂಗಸು/ಹುಡುಗಿಯ ವಿವರಗಳನ್ನು with respect to ಓದುಗ/ನೋಡುಗ ಕೊಡಲಾಗಿದೆ.

    ಇನ್ನು, ಪ್ರಭಾಕರನ್‍ನ ಪುತ್ರ ಬಾಲಚಂದ್ರನ್ ಹೆಸರಿನ ಪಕ್ಕ ಆವರಣದಲ್ಲಿ ಬಲ ಅಂತ ಬರೆದಿರೋದಕ್ಕೆ ಎರಡು ಕಾರಣ: ೧) ಆತ ಪ್ರಭಾಕರನ್‌ನ ಕುಲಬಲ! ೨) ಆತನ ವಿವರಣೆ with respect to ನೋಡುಗ ಅಲ್ಲ, instead, with respect to ಪ್ರಭಾಕರನ್! ಅವನು ಪ್ರಭಾಕರನ್‌ನ ಬಲಭಾಗಕ್ಕೆ (immediate ಬಲ) ಇರುವುದರಿಂದ ಆ ವಿವರ ಇದೆ.

    ಈ ಚಿತ್ರ ಮತ್ತು ವಿವರಣೆಗೆ ರಾಜ್ಯ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮಾತ್ರವಲ್ಲ, ಪುಲಿಟ್ಜರ್ ಪ್ರಶಸ್ತಿ ಸಿಗಬೇಕೆಂಬುದು ನನ್ನ ಆಶಯ!

    ಪ್ರತ್ಯುತ್ತರಅಳಿಸಿ
  5. ಬಲ-ವಾದ ಪ್ರತಿಪಾದನೆ ಮಾಡಿದ್ದೀರಿ joshಈಜೀ. ನಿಮಗೆ ಪುಲ್ಲ್‌ಲಿಟರೇಚರ್ ಪ್ರಶಸ್ತಿ ಸಿಗಲೇಬೇಕು. ಲಹರಿ ಹರಿಸಿದ್ದಕ್ಕಾಗಿ ಧನ್ಯವಾದ.

    ಪ್ರತ್ಯುತ್ತರಅಳಿಸಿ