ಭಾನುವಾರ, ಮೇ 17, 2009

ಈ ಫೋಟೊ ಹೀಗೇಕೆ?

ಮೇಲಿನ ಫೋಟೊ ನೋಡಿರಿ. ಅದರ ಅಡಿಬರಹ ಓದಿರಿ. ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಫೋಟೊ ಇದು. ಇದರ ಅಡಿಬರಹ ಸುಮ್ಮನೆ ಬರೆದದ್ದು. ಇಬ್ಬರೂ ಈ ರೀತಿ ಮುಖವಾಡ ಧರಿಸಿ ನಿಂತಿರುವುದಕ್ಕೆ, ಅದರಲ್ಲೂ ಸೀರೆಯುಟ್ಟ ಮಹಿಳೆಯೊಬ್ಬರು ಕುಮಾರಸ್ವಾಮಿಯ ಮುಖವಾಡ ಧರಿಸಿರುವುದಕ್ಕೆ ವಿಶೇಷ ಕಾರಣವಿದೆ. ಅದು ಹೀಗಿದೆ.

ಚುನಾವಣೆಯಲ್ಲಿ ದೇವೇಗೌಡರಿಗೆ ಎದುರಾಳಿಯಾಗಿ ಮಹಿಳೆಯೊಬ್ಬಳನ್ನು ಕಣಕ್ಕಿಳಿಸಿದರೆ ಗೌಡರು ಸೋಲುತ್ತಾರೆಂದು ಜ್ಯೋತಿಷಿಯೊಬ್ಬರು ಹೇಳಿದ ಪ್ರಕಾರ 2004ರ ಚುನಾವಣೆಯಲ್ಲಿ ಡಿಕೆಶಿ ಅವರು ತೇಜಮ್ಮ ಅವರನ್ನು ಕಣಕ್ಕಿಳಿಸಿದರು. ಜ್ಯೋತಿಷಿಯ ಮಾತು ನಿಜವಾಯಿತು. ಗೌಡರು ಸೋತರು, ತೇಜಮ್ಮ ಗೆದ್ದರು.

ಈ ಸಲದ ಚುನಾವಣೆಯಲ್ಲಿ ದೇವೇಗೌಡರ ಮಗನನ್ನೂ ಅದೇ ರೀತಿ ಸೋಲಿಸಬಹುದೆಂದು ಅದೇ ಜ್ಯೋತಿಷಿ ಹೇಳಿದ್ದನ್ನು ಕೇಳಿ ತೇಜಮ್ಮನವರು ಸ್ವಯಂಸ್ಫೂರ್ತಿಯಿಂದ ಕುಮಾರಸ್ವಾಮಿಯ ವಿರುದ್ಧ ಕಣಕ್ಕಿಳಿದರು. ಆದರೆ ಹೀನಾಯವಾಗಿ ಸೋತರು!

ತೇಜಮ್ಮನ ವಿರುದ್ಧ ಕುಮಾರಸ್ವಾಮಿ ಗೆದ್ದರೂ ರೇವಣ್ಣನಿಗೆ ಒಳಗೊಳಗೇ ಆತಂಕ! ಮಹಿಳೆಯ ವಿರುದ್ಧವಾಗಿ ಹಾಗೂ ಜ್ಯೋತಿಷಿಯ ಮಾತಿಗೆ ವ್ಯತಿರಿಕ್ತವಾಗಿ ತಮ್ಮನು ಗೆದ್ದಿರುವುದರಿಂದ ಮುಂದೆ ಅವನಿಗೆ ಏನು ಆತಂಕ ಕಾದಿದೆಯೋ ಎಂಬ ಆತಂಕ! ರೇವಣ್ಣ ಅದೇ ಜ್ಯೋತಿಷಿಯ ಬಳಿಗೆ ಓಡಿ ತಮ್ಮ ಆತಂಕವನ್ನು ಮುಂದಿಟ್ಟರು. ಜ್ಯೋತಿಷಿಯು ಕೂಡಿ, ಕಳೆದು, ಗುಣಿಸಿ, ಭಾಗಿಸಿ, ಕಣ್ಣುಮುಚ್ಚಿ, ಕಣ್ಣುತೆರೆದು ಪರಿಹಾರವನ್ನು ಹೇಳಿದರು. ಅದೆಂದರೆ, ಕುಮಾರಸ್ವಾಮಿಯು ಮಹಿಳೆಯ ವೇಷ ತೊಟ್ಟು ಪಕ್ಷದ ಕಚೇರಿಯ ಮುಂದೆ ರಾಹುಕಾಲ ಪೂರ್ತಿ ನಿಲ್ಲಬೇಕು. ಪಕ್ಕದಲ್ಲಿ ತಂದೆ ದೇವೇಗೌಡರೂ ಇರತಕ್ಕದ್ದು.

ಸರಿ ಎಂದು ರೇವಣ್ಣ ಹೋಗಿ ತಮ್ಮನಿಗೆ ಈ ಮಾತು ಹೇಳಿದಾಗ ಕುಮಾರಸ್ವಾಮಿ ಇದಕ್ಕೆ ಸುತರಾಂ ಒಪ್ಪಲಿಲ್ಲ. ದೇವೇಗೌಡರೂ ಹಿಂದೇಟು ಹಾಕಿದರು. ರೇವಣ್ಣ ಪುನಃ ಜ್ಯೋತಿಷಿಯ ಬಳಿ ಧಾವಿಸಿ ಸಮಸ್ಯೆ ತೋಡಿಕೊಂಡರು. ಆಗ ಜ್ಯೋತಿಷಿಯು ಪರ್ಯಾಯ ಪರಿಹಾರವೊಂದನ್ನು ಸೂಚಿಸಿದರು. ಅದನ್ನೇ ನೀವು ಈ ಫೊಟೋದಲ್ಲಿ ನೋಡುತ್ತಿದ್ದೀರಿ.
(ಚಿತ್ರಕೃಪೆ: ಕೆಪಿಎನ್)

3 ಕಾಮೆಂಟ್‌ಗಳು:

  1. ಸರ್,

    ದೇವೇಗೌಡರ ಕುಟುಂಬ ಹೇಗಾದ್ರು ಮಾಡಿ ಜ್ಯೋತಿಷಿಗಳ ಮಾತನ್ನು ಪಾಲಿಸಿಯೇ ತೀರುತ್ತೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಸರ್.

    ಪ್ರತ್ಯುತ್ತರಅಳಿಸಿ
  2. ಕುಮಾರಸ್ವಾಮಿ ಹೆಣ್ಣುವೇಷದಲ್ಲಿ (ಅಥವಾ ಹೆಣ್ಣುಮಗಳು ಕುಮಾರಸ್ವಾಮಿ ವೇಷದಲ್ಲಿ) ಎಷ್ಟು ಚೆನ್ನಾಗಿ ಕಾಣ್ತಾರಲ್ಲ!

    ಪ್ರತ್ಯುತ್ತರಅಳಿಸಿ
  3. ಒಳನೋಟ (ಅಪಾರ್ಥ ಮಾಡಿಕೊಳ್ಳಬೇಡಿ) ಹರಿಸಿದ ಶಿವು, ಸುನಾಥ್ ಇಬ್ಬರಿಗೂ ಧನ್ಯವಾದ.

    ಪ್ರತ್ಯುತ್ತರಅಳಿಸಿ