ಭಾನುವಾರ, ಮೇ 17, 2009

ಎಲೆಕ್ಷನ್ ಗುಳಿಗೆಗಳು!

* ರಾಜ್ಯ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರ.
- ಕರ್ನಾಟಕಕ್ಕೆ ಇದು ಮಾಮೂಲಿ ಗ್ರಹಚಾರ!

***

* ರಾಜ್ಯದಲ್ಲಿ ಭರ್ಜರಿ ಜಯ, ಆದರೆ ಕೇಂದ್ರದಲ್ಲಿ ಸರ್ಕಾರದ ಭಾಗ್ಯ ಇಲ್ಲ! ಇದಕ್ಕೆ ಯಡಿಯೂರಪ್ಪ ಏನನ್ನುತ್ತಿದ್ದಾರೆ?
- ’ನಗುವುದೋ ಅಳುವುದೋ ನೀವೇ ಹೇಳಿ’, ಅನ್ನುತ್ತಿದ್ದಾರೆ!

***

* ’ರಾಮಮಂದಿರ ಕಟ್ತೀವಿ’ ಅಂದರೂ ಸೋತರು.
- ’ಖಂಡಿತ ಕಟ್ಟೋಲ್ಲ’ ಅಂದರೆ ಗೆಲ್ತಾರೇನೋ ಮುಂದಿನ ಸಲ.

***

* ಆರು-ಮೂರು ಒಂಬತ್ತು, ಕಾಂ-ಜ ಇಲ್ಲಿ ಹಳ್ಳಕೆ ಬಿತ್ತು!
- ಗೆದ್ದರೂ ಇಲ್ಲಿ ಹತ್ತೊಂಬತ್ತು, ಅಲ್ಲಿ ಅಧಿಕಾರ ’ಕೈ’ಕೊಟ್ತು!

***

* ಕೇಂದ್ರದಲ್ಲಿ ಯುಪಿಎ ಆಡಳಿತ ಮುಂದುವರಿದದ್ದು ಯಡಿಯೂರಪ್ಪನವರಿಗೆ ಒಂದು ರೀತೀಲಿ ಒಳ್ಳೇದೇ ಆಯ್ತು.
- ತಮ್ಮ ಆಡಳಿತ ವೈಫಲ್ಯಕ್ಕೆ ಎಂದಿನಂತೆ ಕೇಂದ್ರದಮೇಲೆ ಗೂಬೆ ಕೂರಿಸಿ ಪಾರಾಗೋ ಚಾಳಿಯನ್ನು ಮುಂದುವರಿಸಿಕೊಂಡು ಹೋಗಬಹುದು.

***

* ಭಾರತಕ್ಕಿನ್ನು ಏಕಕಾಲಕ್ಕೇ ಮೂರು ತಲೆಮಾರುಗಳ ಆಡಳಿತ!
- ಮೊದಲನೇ ತಲೆಮಾರಿನ ಪ್ರಧಾನಿ, ಎರಡನೇ ತಲೆಮಾರಿನ ಮೇಡಂ ಸೋನಿ(ಯಾ) ಮತ್ತು ಮೂರನೇ ತಲೆಮಾರಿನ (ರಾಹುಲ್ ಎಂಬ) ನಿಧಾನಿ!

***

* ಮಮತಾ ಗಾಳಕ್ಕೆ
- ಬಂಗಾಳದ ಮತ.

***

* ಯುಪಿಎ ಸರ್ಕಾರ ಇನ್ನು
- ಮಮತೆಯ ಮಡಿಲಲ್ಲಿ!

***

* ಕೇರಳ, ಬಂಗಾಳ ಎರಡೂ ಕಡೆ ಕಮ್ಯುನಿಸ್ಟರು ಸೋತುಹೋದರು.
- ಸೋತು ಎಲ್ಲಿಗೆ ಹೋದರು? ಚೀನಾಕ್ಕಾ, ನೇಪಾಳಕ್ಕಾ?

***

* ಅನುಭವಮಂಟಪದ ಪೀಠ ಏರಲು ಹೊರಟಿದ್ದ ಪಾಸ್ವಾನ್‌ಗೆ
- ಶೂನ್ಯಸಂಪಾದನೆ!

***

* ಮೂತಿ ನೋಡೋಕೆ ಬಂದಿದ್ದೋರೆಲ್ಲಾ ಮತ ನೀಡಿದ್ದರೆ
- ಚಿರಂಜೀವಿ ಇಷ್ಟೊತ್ತಿಗೆ ಮುಖ್ಯಮಂತ್ರಿ ಆಗಿರ್ತಿದ್ದರು!

***

* ಚಿರಂಜೀವಿಗೆ ಒಂದು ಕ್ಷೇತ್ರದಲ್ಲಿ ಗೆಲುವು, ಇನ್ನೊಂದರಲ್ಲಿ ಸೋಲು.
- ’ಸುಖೇ ದುಃಖೇ ಸಮೇ ಕೃತ್ವಾ’ ಅಂತ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದು ಇದನ್ನೇ ಇರಬೇಕು.

***

* ರೇಣುಕಾ ಚೌಧರಿ ಸೋತರು.
- ನಿರ್ಮಲಾ ವೆಂಕಟೇಶ್ ಹಾಲು ಕುಡಿದರು!

***

* ದೇವೇಗೌಡರ ವಿರುದ್ಧ ಗೆದ್ದ ತೇಜಮ್ಮ ಗೌಡರ ಮಗನ ವಿರುದ್ಧ ಸೋತರು!
- ಮುಂದಿನ ಎಲೆಕ್ಷನ್ನಲ್ಲಿ ಮೊಮ್ಮಗನ ವಿರುದ್ಧ ಡಿಪಾಸಿಟ್ ಖೋತಾ?

***

* ಬಂಗಾರಪ್ಪ ಸೋಲಲು ಕಾರಣ?
- ಫ್..ಫ್..ದುಡ್ಡು. ಫ್..ಫ್..ಖರ್ಚು ಮಾಡಲು ಸಾಕಷ್ಟು ಇಲ್ಲದೇ ಇದ್ದದ್ದು.

***

* (ಮಾಜಿ) ಎಸ್.ಪಿ.ಸಾಂಗ್ಲಿಯಾನಾ ಚಿಂತಿಸಬೇಕಿಲ್ಲ.
- (ಮಾಜಿ) ’ಎಂ.ಪಿ.ಸಾಂಗ್ಲಿಯಾನಾ’ ಎಂಬ ಚಿತ್ರ ತಗ್ಗ್..ಯೋಕೆ ದೇವ್ರು ಪ್ರೊಡ್ಯೂಸರ್‍ನ ಹೆವನ್ನಿಂದ ಕಾಳಿಸಿ ಕೋಡ್ತಾರೇ.

***

* ಖರ್ಗೆ, ಧರಂ, ಮುನಿಯಪ್ಪ ಹಳೇ ಹುಲಿಗಳು.
- ಪೂಜಾರಿ, ಷರೀಫ್, ಬಂಗಾರಪ್ಪ ಹಳೇ ಇಲಿಗಳು!
* ಮಾರ್ಗರೆಟ್ ಆಳ್ವ?
- ಮಾರ್ಜಾಲ!

***

* ಜನಾರ್ದನ ಪೂಜಾರಿ ಸೋತದ್ದು ಯಾಕೆ?
- ಗಾದೇಲಿರೋ ಪೂಜಾರಿ ಇವರೇ ಅಂದ್ಕೊಂಡ ದೇವರು, ಅದಕ್ಕೆ!

***

* ದಾವಣಗೆರೆ ಫಲಿತಾಂಶ ಬಲು ವಿಶೇಷ.
- ಎಸ್ ಎಸ್ ಮಲ್ಲಿಕಾರ್ಜುನ್‌ಗೆ ಮತದಾರರು ನೋ ನೋ ಅಂದರು; ಪರಿಣಾಮ, ಸಿದ್ದೇಶ್ವರರು ಗೆದ್ದೇಶ್ವರರಾದರು.

***

* ಲಾಸ್ಟ್ ಕ್ವೆಶ್ಚನ್: ಮನಮೋಹನ್ ಸಿಂಗ್ ಇನ್ನಷ್ಟು ಪ್ರಬಲ?
- ಊಹ್ಞೂ. ಇನ್ನಷ್ಟು ದುರ್ಬಲ!

3 ಕಾಮೆಂಟ್‌ಗಳು:

  1. ಶಾಸ್ತ್ರಿಗಳೇ
    ಗುಳಿಗೆ ಸ್ವಲ್ಪ ಅರ್ಜೆ೦ಟಲ್ಲಿ ತಯಾರಿಸಿದ೦ಗಿದೆ. ಮಾಮೂಲಿನ೦ತೆ strong ಇಲ್ಲ. ಆದ್ರೂ ಪರವಾಗಿಲ್ಲ, ಮು೦ದಿನ್ಸ ಸಲ ಸ್ವಲ್ಪ strong dose ಕೊಡಿ ಸ್ವಾಮಿ .

    ಪ್ರತ್ಯುತ್ತರಅಳಿಸಿ
  2. ಸರ್,

    ಚುಟುಕು ಬರಹಗಳು ಖುಷಿಕೊಡುತ್ತವೆ...ಓದುತ್ತಾ ಮತ್ತೆ ಎಲ್ಲಾ ನೆನಪಾಯಿತು...ಕೆಲವೊಂದು ತುಂಬಾ ಚೆನ್ನಾಗಿವೆ...

    ಪ್ರತ್ಯುತ್ತರಅಳಿಸಿ
  3. ಹೌದು ಪರಾಂಜಪೆಯವರೇ, ಕರೆಕ್ಟಾಗಿ ಹೇಳಿದ್ದೀರಿ. ಮುಂದಿನ ಸಲ ಪುರುಸೊತ್ತಿನಲ್ಲಿ ತಯಾರಿಸಿ ಇಸ್ಟ್ರಾಂಗ್ ಡೋಸ್ ಕೊಡುತ್ತೇನೆ. ಮುಕ್ತ ಅಭಿಪ್ರಾಯಕ್ಕಾಗಿ ಹೃತ್ಪೂರ್ವಕ ಧನ್ಯವಾದ.
    ಶಿವು ಅವರಿಗೂ ಹೃತ್ಪೂರ್ವಕ ಧನ್ಯವಾದ.

    ಪ್ರತ್ಯುತ್ತರಅಳಿಸಿ