ಕಾಲ ಕೆಟ್ಟೋಯ್ತು!
ಸ್ಪರ್ಧಿಸ್ತೀನಿ ಅಂದೋರು ಸ್ಪರ್ಧಿಸೋಲ್ಲ! (ಕೃಷ್ಣಕೃಷ್ಣಾ!)
ಸ್ಪರ್ಧಿಸೋಲ್ಲ ಅಂದೋರು ಸ್ಪರ್ಧಿಸ್ತಾರೆ! (ರಾಘವೇಂದ್ರಾ!)
ಸತ್ಯಹರಿಶ್ಚಂದ್ರನ್ಹಾಗಾಡೋರು ಸುಳ್ಳು ಮತದಾರರನ್ನ ಸೃಷ್ಟಿಸ್ತಾರೆ! (ಜನಾರ್ದನಾ!)
ಪೊಳ್ಳು ಭರವಸೆ ನೀಡೋರು ಒಳ್ಳೆ ಹೀರೋ ಹಂಗಾಡ್ತಾರೆ! (ರಾಮ(ಶ್ರೀ)ರಾಮಾ!)
ನೀತಿ ಮಾತಾಡೋರು ಸಂಹಿತೆ ಉಲ್ಲಂಘಿಸ್ತಾರೆ! (ಯಡಿಯೂರೇಶ್ವರಾ!)
ಒಳಗೆ ಕುದಿಯುವವರು ಹೊರಗೆ ಹಲ್ಕಿರ್‍ಕೊಂಡಿರ್ತಾರೆ! (ಸದಾನಂದಾ!)
ಅಜ್ಜನ ವಯಸ್ಸಿನವರು ರಾಹುಲ್ ಅನ್ತಕ್ಕಂಥಾ ಹುಡುಗನಿಗೆ ಸಲಾಂ ಹೊಡೀತಾರೆ! (ಚೆನ್ನ-ಮಲ್ಲಿಕಾರ್ಜುನಾ!)
ಹುಲಿಯಂಗಾಡೋರು ಒಂದು ಯಃಕಶ್ಚಿತ್ ಹೆಣ್ಣಿಲಿಗೆ ಹೆದರ್ತಾರೆ! (ಶಿವಶಿವಾ!)
ಖಾಲಿ ಬುರುಡೆಯವರು ತುಂಬಿದವರಂಗೆ ತುಳು’ಕಾಡ್ತಾರೆ’! (ಉಗ್ರ-ನರಸಿಂಹಾ!)
ಮಾಜಿ ಪ್ರಧಾನಿಗಳು ಸದಾಕಾಲ ’ಮುದ್ದೆ-ನಿದ್ದೆ-ಗೆದ್ದೆ’ ಜಪ ಮಾಡ್ತಾರೆ! (ದೇವದೇವಾ!)
ಹಾಲಿ ಹಾಲಧ್ಯಕ್ಷರು ಸಿಎಂ ಕುರ್ಚಿಯ ಕನಸು ಕಾಣ್ತಾರೆ! (ರೇವರೇವಾ!)
ಪ್ರತಿಭೆಯಿದ್ದವರು ಮನೇಲಿ ಕೂತು ಕೊರಗ್ತಾರೆ! (ಅಂಬಾ-ಭವಾನೀ!)
ಚಾಣಾಕ್ಷರು ರಾಜ-ಕುಮಾರ ಆಗ್ತಾರೆ! (ಕುಮಾರಾ-ಸ್ವಾಮೀ!)
ದತ್ತುಪುತ್ರರು ಕತ್ತು ಬಗ್ಗಿಸಿ ಕತ್ತೆಯಹಾಗೆ ದುಡೀತಾರೆ! (why? yes! we (are one ಅನ್ನುವ) ದತ್ತಾ!)
ಕನ್ನಡದ ಕಾಮಗಾರಿ ಗೊತ್ತಿಲ್ಲದೋರು ಬರಿದೆ ’ನಾಮಫಲಕ’ ಅಂತ ಬೊಬ್ಬೆಹೊಡೀತಾರೆ! (ಚಂದ್ರುಶೇಖರಾ!)
ಮತ್ತು
ತನ್ದು ತಾನ್ ನೋಡ್ಕೊಂಡು ’ಆನಂದ’ವಾಗಿರೋದ್ ಬಿಟ್ಟು ಹ’ರಾಮ’ಖೋರ್ ಸಾಸ್ತ್ರಿ ಎಲ್ಲಾರ್ಗೂ ಗುಳಿಗೆ ಗುಂಡಾಂತರ ಮಾಡ್ತಾನೆ! (ಆನಂದ(ಹ)ರಾಮ ರಾಮಾ!)
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಚೆನ್ನಾಗಿದೆ ಸ್ವಾಮಿ ನಿಮ್ಮ ಗುಳಿಗೆ ಪುರಾಣ
ಪ್ರತ್ಯುತ್ತರಅಳಿಸಿಧನ್ಯವಾದ ಪರಾಂಜಪೆಯವರೆ.
ಪ್ರತ್ಯುತ್ತರಅಳಿಸಿಇಂಥಾ ಮಂದಿ ಕೈಯಾಗ ಸಿಕ್ಕ ಸುನಾಥರಂಥವರು ಅನಾಥರಾಗ್ಯಾರ!
ಪ್ರತ್ಯುತ್ತರಅಳಿಸಿನಿಮಗೆ ಮತ್ತು ನಿಮ್ಮ ಕುಟು೦ಬವರ್ಗಕ್ಕೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರುಷ ನಿಮಗೆ ಹೊಸ ಹರುಷವನ್ನು ತರಲಿ, ಹೊಸ ಹುರುಪನ್ನು ತು೦ಬಲಿ ಹೊಸ ಸ೦ವತ್ಸರದಲ್ಲಿ ನಿಮ್ಮೆಲ್ಲ ಕೆಲಸಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಸುಖಶಾ೦ತಿ, ನೆಮ್ಮದಿ, ಉಲ್ಲಾಸ, ಉತ್ಸಾಹ ಸದಾ ನಿಮ್ಮ ಮನೆ-ಮನದಲ್ಲಿ ತು೦ಬಿ ತುಳುಕುತ್ತಿರಲಿ
ಪ್ರತ್ಯುತ್ತರಅಳಿಸಿಎ೦ದು ಆತ್ಮೀಯವಾಗಿ ಹಾರೈಸುತ್ತೇನೆ.
K.N.ಪರಾ೦ಜಪೆ
http://www.nirpars.blogspot.com
email: paraanjape@gmail.com
ಸುನಾಥರಂಥವರು ಈ ಸಮಾಜದ ನಾಥರಾದರೆ ಸಮಸ್ಯೆಗಳು ಸುರಳೀತ ಪರಿಹಾರವಾದಾವು.
ಪ್ರತ್ಯುತ್ತರಅಳಿಸಿಧನ್ಯವಾದ ಪರಾಂಜಪೆಯವರೇ, ನಿಮಗೂ ಮತ್ತು ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಅದೇ ಶುಭಹಾರೈಕೆಗಳು.
ಈ ಬ್ಲಾಗ್‌ನಲ್ಲಿನ ಎಲ್ಲ ಸ್ನೇಹಿತರಿಗೂ ಶುಭಾಶಯಗಳು.